ಅರಭಾವಿ ಪಟ್ಟಣದಲ್ಲಿ ಕನಕದಾಸ ಜಯಂತಿ ಆಚರಣೆ

0
197

ಮೂಡಲಗಿ: ತಾಲೂಕಿನ ಅರಭಾವಿ ಪಟ್ಟಣದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಗ್ರಾಮ ಘಟಕ ಮತ್ತು ರಾಯಣ್ಣ ಯುವ ಪಡೆ ಆಶ್ರಯದಲ್ಲಿ ಆಚರಿಸಲಾಯಿತು.

ಭಕ್ತ ಕನಕದಾಸರ ನಾಮಫಲಕಕ್ಕೆ  ಪೂಜೆಸಲ್ಲಿಸಿ,    ಅರಭಾವಿ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಮುಖಂಡರಾದ ಯುವ ಮುಖಂಡ ಹಾಗೂ ಮೂಡಲಗಿ ತಾಲೂಕಾ  ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಗೌರವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತಪ್ಪ ಜಲ್ಲಿ, ಕರೆಪ್ಪ ಕಡ್ಡಿ, ಸಿದ್ದು ಕಂಕಣವಾಡಿ, ನಿಂಗಪ್ಪ ಇಳಿಗೇರ, ಕೆಂಪಣ್ಣ ದಡ್ಡಗೋಳ, ಗಣಪತಿ ಇಳಿಗೇರ, ರಮೇಶ ಮಾದರ, ಬಾಳೇಶ ನಾನಪ್ಪಗೋಳ, ಕುಮಾರ ಪೂಜೇರಿ, ಅಬ್ದುಲ್ ಮಿರ್ಜಾನಾಯ್ಕ, ಬಿ.ಎಮ್.ಮಾಳಗಿ, ಸತ್ತೇಪ್ಪ ಬಡಾಯಿ, ಕೃಷ್ಣಾ ಬಂಡಿವಡ್ಡರ, ಅಶೋಕ ಬಂಡಿವಡ್ಡರ, ಭೀಮಶಿ ಬಂಡಿವಡ್ಡರ, ಕೆಂಪಣ್ಣಾ ದೊಡ್ಡುಗೋಳ ಸೇರಿದಂತೆ ಅನೇಕರು ಇದ್ದರು.

ಮೆರವಣಿಗೆಯು ಅರಭಾವಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಕ್ಕಳ ವೇಷಭೂಷಣ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಜರುಗಿತು.