spot_img
spot_img

ಹೊನ್ನಾಳಿ ಶರಣರು ಕಂಡ ಶಿವ ಪ್ರವಚನದಲ್ಲಿ ಅನುಭವ ಅಭಿಪ್ರಾಯ ಹಂಚಿಕೆ

Must Read

- Advertisement -

(ತಿರುವಾಟ ಇದ್ದರೆ ಏನಾದರೂ ಸಾಧಿಸಬಹುದು: ಸಂತೋಷ್ ಬಿದರಗಡ್ಡೆ )

ಹೊನ್ನಾಳಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಡೆಯುತ್ತಿರುವ ಶರಣರು ಕಂಡ ಶಿವ ಪ್ರವಚನ ಒಂದು ತಿಂಗಳು ಪೂರೈಸಿದ ಪ್ರಯುಕ್ತ ವಿಶೇಷ ಪ್ರವಚನ ಹಾಗೂ ಅನುಭವ ಅಭಿಪ್ರಾಯ ಹಂಚಿಕೆ ಕಾರ್ಯಕ್ರಮ ಹೊನ್ನಾಳಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆ ಅವರು ವೇದಿಕೆ ಹಂಚಿಕೊಂಡು ನಮಗೆ ತಿರುವಾಟ ಬೇಕು. ಅಂದಾಗ ಮಾತ್ರ ಹಿಡಿದ ಕಾರ್ಯ ಮಾಡಲು ಸಾಧ್ಯವೆಂದರು. ಶರಣರು ಕಂಡ ಶಿವ ಪ್ರವಚನದ ಸದುಪಯೋಗವನ್ನು ಜನರು ಮಾಡಿಕೊಂಡು ಸಾರ್ಥಕ ಬದುಕನ್ನ ಕಾಣಲು ಇದು ಸುವರ್ಣ ಕಾಲ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರ ಅನುಭವ ಮಂಟಪದ ರೀತಿಯಲ್ಲಿ ಇಂದು ಈ ಪ್ರವಚನ ದಾರಿದೀಪ ಆಗುತ್ತಿದೆ. ಅತ್ಯಂತ ಹಿರಿಯರು, ಅನುಭವಿಗಳು, ಅನುಭಾವಿಗಳು  ಆದ ಹುಬ್ಬಳ್ಳಿಯ ಕೇಂದ್ರದ ರಾಜ ಋಷಿ ಬಸವರಾಜ ಅಣ್ಣ ಅವರಿಂದ ಅನುಭವಾಮೃತ ಪಡೆದು ಆತ್ಮ ಮತ್ತು ಪರಮಾತ್ಮನ ಅರಿವನ್ನು ಪಡೆಯೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮುರುಗೆಪ್ಪಗೌಡ್ರು ಮಾತನಾಡಿ ಈ ಪ್ರವಚನ ಹೊನ್ನಾಳಿ ಜನತೆಗೆ ಅಪರೂಪದಲ್ಲಿ ಅಪರೂಪವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಾಜಿ ಸೈನಿಕರ ಸಂಘದ ಶ್ರೀ ವಾಸಪ್ಪ ಅವರು ಪ್ರವಚನದ ಬಗ್ಗೆ ಮಾತನಾಡಿ ಈ ಪ್ರವಚನ ಕೇಳುತ್ತಾ ನನಗೆ ಅತ್ಯಂತ ಮಹತ್ವದ ಚಿಂತನೆಗಳು ಮನದಲ್ಲಿ ಮೂಡಿವೆ ಎಂದರು. ಹಿರಿಯ ಮುಖಂಡರಾದ ಶ್ರೀ ಉಮಾಪತಿ ಅವರು ಮಾತನಾಡಿ ಶರಣರ ಚರಿತೆ ಹಾಗೂ ಪರಮಾತ್ಮನ ಅರಿವು ಪ್ರವಚನದಲ್ಲಿ ಆಗಲಿದ್ದು ಜನರು ಪ್ರತಿದಿನ ಈ ವೇದಿಕೆಯ ಮೂಲಕ ಪಡೆಯಲು ಸಾಧ್ಯವೆಂದು ಹೇಳಿದರು. ಶಿಕ್ಷಕರಾದ ಕೆ ವಿ ಪ್ರಸನ್ನ, ನಿವೃತ್ತ ಶಿಕ್ಷಕಿ ರುದ್ರಮ್ಮಕ್ಕ ಮುಂತಾದ ಪ್ರಮುಖರು ಪ್ರವಚನದಲ್ಲಿ ತಮ್ಮ ಅನುಭವ ಅಭಿಪ್ರಾಯ ಹಂಚಿಕೊಂಡರು.

- Advertisement -

ರಾಜಋಷಿ ಡಾ ಬಿ ಕೆ ಬಸವರಾಜ್ ಅವರು ವಿಶೇಷ ಪ್ರವಚನದಲ್ಲಿ ನಾವು ದೇಹ ಮಾತ್ರವಲ್ಲ, ನಮ್ಮಲ್ಲಿ ಜ್ಯೋತಿ ಸ್ವರೂಪ ಆತ್ಮ ಇದ್ದು ಆತ್ಮಕ್ಕೆ ಯಾವುದೇ ಜಾತಿ ಇಲ್ಲ, ಅದು ಜ್ಯೋತಿ ಸ್ವರೂಪ ಎಂದು ಹೇಳಿದರು.  ನಮ್ಮ ಆತ್ಮವು ಶರೀರಧಾರಿಯಾಗಿದ್ದು ಅದು ನಮ್ಮ ಹಣೆಯ ಮದ್ಯೆ ಭೃಗುಟಿ ಭಾಗದಲ್ಲಿ ಕೇಂದ್ರೀಕೃತವಾಗಿರುತ್ತದೆ. ಆತ್ಮ ಮತ್ತು ಪರಮಾತ್ಮ ಎರಡೂ ಜ್ಯೋತಿ ಸ್ವರೂಪ ಆಗಿವೆ. ಈ ಜನ್ಮದ ಸಾರ್ಥಕತೆಗಾಗಿ ನಾವು ನಮ್ಮ ಬದುಕಿನ ಜಂಜಾಟದ ನಡುವೆಯೂ ಶಿವ ಅಂದರೆ ಪರಮಾತ್ಮನ ಧ್ಯಾನ ಮಾಡಬೇಕು. ಶಿವ ಜ್ಞಾನ ಇಲ್ಲದೆ ಶಿವ ಧ್ಯಾನ ಆಗುವದಿಲ್ಲ. ಪರಮಾತ್ಮ ನಮಗೆ ಸಿಗಬೇಕಾದರೆ ಪರಮಾತ್ಮನ ಅವನ ಧ್ಯಾನ ಮಾಡಬೇಕು. ನಾವು ಊಟ ಮಾಡುವದು ಶರೀರಕ್ಕೆ, ಅದರಂತೆ ಆತ್ಮಕ್ಕೆ ಊಟ ಬೇಕು. ಆತ್ಮ ಸದೃಢ ಆಗಬೇಕಾದರೆ, ಆತ್ಮ ಶಕ್ತ ಆಗಬೇಕಾದರೆ, ಆತ್ಮ ನಿರೋಗಿ ಆಗಬೇಕಾದರೆ ಪರಮಾತ್ಮನ ಸಂಬಂಧ ಜಾಸ್ತಿ ಆಗಬೇಕು. ಆ ಸಂಬಂಧವನ್ನು ಈ ಶರಣರು ಕಂಡ ಶಿವ ಪ್ರವಚನದ ಮೂಲಕ ಪಡೆದು ಮುಂದೆ ನಿರಂತರವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವ ಧ್ಯಾನ ಮಂದಿರದಲ್ಲಿ ಸಂಪರ್ಕದಲ್ಲಿ ಇರಬೇಕೆಂದು ಸಲಹೆ ಮಾಡಿದರು. ಇಂದಿನ ಆಧುನಿಕ ಯುಗದಲ್ಲಿ ಜೀವನದಲ್ಲಿ ಯಾರಿಗೂ ಪುರಸೊತ್ತೆ ಇಲ್ಲ. ಸಾಯಲೂ ಕೂಡ ಪುರಸೊತ್ತಿಲ್ಲ. ಸಾಯುವ ಸಂದರ್ಭ ಬಂದರೆ ಅಯ್ಯೋ ನಾನು ಅದು ಮಾಡಬೇಕಿತ್ತು, ಇದು ಮಾಡಬೇಕಿತ್ತು, ಆಸ್ತಿ ಹಣ ಸಂಪತ್ತಿನ ಚಿಂತೆ ಮಾಡುತ್ತೇವೆ ಹೊರತು ಶಿವ ಧ್ಯಾನ ಮಾಡಬೇಕಿತ್ತು ಅಂತಾ ಯಾರೂ ಚಿಂತಿಸುವುದಿಲ್ಲ.

ಅಳುವವರ ಮುಂದೆ ಕುಳಿತರೆ ಅಳು ಬರುತ್ತೆ, ನಗುವವರ ಮುಂದೆ ಕುಳಿತರೆ ನಗು ಬರುತ್ತೆ, ಪರಮಾತ್ಮನ ಮುಂದೆ ಕುಳಿತರೆ ಪರಮಾತ್ಮನ ಧ್ಯಾನ ಬರುತ್ತೆ ಹಾಗಾಗಿ ಆದಷ್ಟು ಟಿವಿ ಮೊಬೈಲ್ ಗಳನ್ನು ಬಿಟ್ಟು ಶಿವ ಧ್ಯಾನ, ಶರಣರ ಚರಿತೆ ಪಠಣದಲ್ಲಿ ಜನತೆ ತೊಡಗಬೇಕು. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಪ್ರಮಥರು ತಮ್ಮ ಕಾಯಕ ತತ್ವದ ಜೊತೆ ಶಿವ ಧ್ಯಾನ, ಪರೋಪಕಾರ, ಸಮಾಜ ಹಿತಕಾರಿ ಚಿಂತನದ ಜೊತೆ ತಮ್ಮ ಶರಣ ಸಂಸ್ಕೃತಿಯ ಬದುಕನ್ನು ಕಂಡರು. ಅವರಲ್ಲಿ ಅಂದರೆ ಶರಣ ಧರ್ಮದಲ್ಲಿ ಕ್ರೋಧವಿರಲಿಲ್ಲ ಯಾಕೆಂದರೆ ಅವರದು ಶಿವ ಪ್ರೀತಿ ಧರ್ಮವಾಗಿತ್ತು. ನಮಗೆ ಪ್ರತಿ ದಿನ ಆತ್ಮಕ್ಕೆ ಜ್ಞಾನದ ಅಭಿಷೇಕ ಆಗಬೇಕು. ಆ ಜ್ಞಾನವನ್ನು ನಾವು ಇಂತಹ ಪ್ರವಚನಗಳ ಮೂಲಕ ಪಡೆಯಲು ಸಾಧ್ಯವೆಂದು ಹೇಳಿದರು.

ಶರಣರು ಕಂಡ ಶಿವ ಪ್ರವಚನ 108 ದಿನಗಳವರೆಗೆ ನಡೆಯಲಿದ್ದು, ಪರಮಾತ್ಮನ ಅರಿವಿಗಾಗಿ ಎಲ್ಲರೂ ನೂರೆಂಟು ಗಂಟೆಗಳ ಸಮಯ ನಿತ್ಯ ಪ್ರವಚನ ನಡೆಯುವ ಸ್ಥಳಕ್ಕೆ ಬಂದು ಪುನೀತರಗಬೇಕೆಂದು ಹೊನ್ನಾಳಿ ಕೇಂದ್ರದ ಸಂಚಾಲಕಿ ಜ್ಯೋತಿ ಅಕ್ಕ ಅವರು ಮನವಿ ಮಾಡಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group