ರಾಮಾಯಣ ಮಹಾಭಾರತಕ್ಕಿಂತ ಹಳೆಯ ಭಾಷೆ ಕನ್ನಡ – ಬಾಗೇಶ ಮುರಡಿ

Must Read

ಸಿಂದಗಿ; ಪ್ರಪಂಚದಲ್ಲಿ ೬ ಸಾವಿರ ಭಾಷೆಗಳಿಗೆ ಅದರಲ್ಲಿ ೪ ಸಾವಿರ ಭಾಷೆಗಳಿಗೆ ಲಿಪಿಯಿಲ್ಲ. ಲಿಪಿ ಇರುವ ೨ ಸಾವಿರ ಭಾಷೆಗಳಲ್ಲಿ ಇತಿಹಾಸವನ್ನು ಹೊಂದಿದ ಹಾಗೂ ಮಹಾಭಾರತ, ರಾಮಾಯಣಕ್ಕಿಂತ ಹಳೇಯ ಏಕೈಕ ಭಾಷೆ ಕನ್ನಡ ಬಾಷೆಯಾಗಿದೆ ಎಂದು ಹಾಸ್ಯ ಬಾಷಣಕಾರ ಬಾಗೇಶ ಮುರಡಿ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಗುಂದಗಿ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಬೆಂಗಳೂರು ಹೊರತು ಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಕನ್ನಡ ಬಾಷೆ ವಿಸ್ತರಿಸಿದೆ. ನಾವೆಲ್ಲ ಕನ್ನಡಿಗರು ಹೃದಯ ವೈಶಾಲ್ಯ ತೋರಿದರೆ ಕಾಸರಗೋಡು ಕಸಿದುಕೊಂಡಂತೆ ಬೆಳಗಾವಿ ಕೂಡಾ ಕಸಿದುಕೊಳ್ಳುವುದು ಸಂದೇಹವಿಲ್ಲ. ಕನ್ನಡ ಬಾಷೆ ಅಸ್ತಿತ್ವ ಉಳಿಯಬೇಕಾದರೆ ಮನಸ್ಸಾರೆ ಬೆಳೆಸಬೇಕು ಅಲ್ಲದೆ ಮನದ ಬಾಷೆಯಾಗಬೇಕು ಅದಕ್ಕೆ ನಾವೆಲ್ಲರು ಕನ್ನಡದ ಇತಿಹಾಸವನ್ನು ಓದಬೇಕಲ್ಲದೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಸಿ.ಮಯೂರ ಮಾತನಾಡಿ, ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ವಿಸ್ತಾರವಾಗಿತ್ತು ಬ್ರಿಟೀಷರ ಕಾಲದಲ್ಲಿ ನಾಲ್ಕು ಪ್ರಾಂತಗಳಿದ್ದ ಮೈಸೂರು ರಾಜ್ಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸುರವರು ೧೯೭೩ರಲ್ಲಿ ಏಕೀಕರಣಗೊಳಿಸಿ ಕರ್ನಾಟಕವೆಂದು ನಾಮಕರಣ ಮಾಡಿದ್ದಾರೆ ಅಂದಿನಿಂದ ಇಂದಿನವರೆಗೆ ಅನೇಕ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಕನ್ನಡ ಭಾಷೆ ಬಗ್ಗೆ ಅಭಿಮಾನವಿದ್ದವರು ಎಂದರೆ ಕನ್ನಡಿಗರು ಮಾತ್ರ ಎಂದ ಅವರು, ಕರ್ನಾಟಕ ಏಕೀಕರಣವಾದ ಬಳಿಕ ಅನೇಕ ರಾಜ ಮಹಾರಾಜರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡವನ್ನು ಸಂಪೂರ್ಣ ಗಟ್ಟಿಗೊಳಿಸಿದ್ದರಿಂದಲೇ ಇಂದು ನೂರರ ಸಂಭ್ರಮಾಚರಣೆ ಆಚರಿಸಿಕೊಳ್ಳುತ್ತಿದೆ ಎಂದರು.

ತಾಲೂಕು ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ತಹಶೀಲ್ದಾರ ಕರೇಪ್ಪ ಬೆಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ ಅಂಕ ಪಡೆದ ೧೮ ವಿಧ್ಯಾರ್ಥಿಗಳಿಗೆ ಮತ್ತು ರಾಜ್ಯ ಪ್ರೋ ಕಬ್ಬಡ್ಡಿ ಟೀಮ್‌ನಲ್ಲಿ ಆಡಿದ ತಾಲೂಕಿನ ಆಸಂಗಿಹಾಳ ಗ್ರಾಮದ ಗಣೇಶ ಹಣಮಂತಗೋಳ ಹಾಗೂ ನಿವೃತ್ತ ಪ್ರಾಧ್ಯಾಪಕ ಎಂ.ಎಸ್.ಹೈಯಾಳಕರ, ದಿ. ರಂಗಭೂಮಿ ಕಲಾವಿದ ರಾಜು ತಾಳಿಕೊಟಿ ಅವರ ಪತ್ನಿಯರಾದ ಪ್ರೇಮಾ, ಪ್ರೇಮಾ ತಾಳಿಕೊಟಿ, ಶರಣು ಚಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಪಂ ಇಓ ರಾಮು ಅಗ್ನಿ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ, ಬಿಇಓ ಮಹಾಂತೇಶ ಯಡ್ರಾಮಿ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಎಡಿಎಲ್‌ಆರ್ ಎಸ್.ಆರ್.ಅಗಸಬಾಳ, ಅಕ್ಷರದಾಸೋಹ ಅಧಿಕಾರಿ ಅರವಿಂದ ಡೋಣೂರ, ಸಿ.ಎಂ.ದೇವರಡ್ಡಿ, ಕನ್ನಡಾಂಬೆ ವೇಷದಾರಿ ವಿದ್ಯಾಶ್ರೀ ಬಿರಾದಾರ ವೇದಿಕೆ ಮೇಲಿದ್ದರು.

ದೈಹಿಕ ನಿರ್ದೇಶಕ ರವಿ ಗೋಲಾ, ಶಿಕ್ಷಕ ಎಂ.ಆರ್.ಡೋಣಿ ನಿರೂಪಿಸಿದರು. ಬಿಇಓ ಎಂ.ಬಿ.ಯಡ್ರಾಮಿ ಸ್ವಾಗತಿಸಿದರು. ಡಾ. ಪ್ರಕಾಶ ಮೂಡಲಗಿ, ಪೂಜಾ ಹಿರೇಮಠ ತಂಡ ನಾಡಗೀತೆ ಹಾಡಿದರು.

ಕಾರ್ಯಕ್ರಮಕ್ಕೂ ಮುಂಚೆ ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ, ದಿ.ಎಂ.ಸಿ.ಮನಗೂಳಿ ರಸ್ತೆಯ ಮಾರ್ಗವಾಗಿ ಸ್ವಾಮಿ ವಿವೇಕಾನಂದ ವೃತ್ತ, ಜಗದ್ಗುರು ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ತೆರಳಿ ಟೀಪು ಸುಲ್ತಾನ ವೃತ್, ಡಾ. ಅಂಬೇಡ್ಕರ ವೃತ್ತದಿಂದ, ನೂಲಿ ಚಂದಯ್ಯ ವೃತ್ತ, ಇಮ್ಮಡಿ ಸಿದ್ದರಾಮೇಶ್ವರ ವೃತ್ತದ ಮಾರ್ಗವಾಗಿ ಫಂಗಷನ್ ಹಾಲ್‌ವರೆಗೆ ಶಾಲಾ ಮಕ್ಕಳು ಪ್ರಭಾತ ಪೇರಿಯುದ್ದಕ್ಕು ವಿವಿಧ ಕಲಾ ತಂಡಗಳೊAದಿಗೆ ಕನ್ನಡ ಕಹಳೆ ಮೊಳಗಿತು.

ಮೆರವಣಿಗೆಯಲ್ಲಿ ರಣಧೀರ ಪಡೆ ಸಂಘಟನೆಯ ಸಂತೋಷ ಮಣಿಗೇರಿ, ಹೋರಾಟಗಾರ ಶಿವು ಮೆಟಗಾರ, ಶಾಂತೂ ರಾಣಾಗೋಳ, ಸದ್ದಾಮ ಆಲಗೂರ, ಶೋಬಾ ಚಿಗರಿ, ಶೈನಾಬಿ ಮಸಳಿ, ಜಯಶ್ರೀ ಕುಲಕರ್ಣಿ, ಅಂಬಿಕಾ ಪಾಟೀಲ, ಪ್ರತಿಭಾ ಚಳ್ಳಗಿ, ಶರಣಮ್ಮ ನಾಯಕ, ಸುನಂದಾ ಯಂಪೂರೆ, ನೀಲಮ್ಮ ಯಡ್ರಾಮಿ, ಜಯಶ್ರೀ ಹದನೂರ, ಶಾರದಾ ಬೆಟಗೇರಿ, ಸುನಂದಾ ಬಜಂತ್ರಿ, ಮಹಾನಂದ ಬಮ್ಮಣ್ಣಿ, ಜಯಶ್ರೀ ನಾಟೀಕಾರ, ಶೈಲಜಾ ಸ್ಥಾವರಮಠ, ಜೈಭೀಮ ತಳಕೇರಿ ಸೇರಿದಂತೆ ಹಲವರಿದ್ದರು

LEAVE A REPLY

Please enter your comment!
Please enter your name here

Latest News

ಯುವಕರು ಸಾಹಿತ್ಯ ಸಂಸ್ಕೃತಿಯ ರಾಯಭಾರಿಗಳಾಗಬೇಕು – ಎಸ್ ಎಂ ಜೇವರ್ಗಿ

ಸಿಂದಗಿ; ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿಯ ನೆಲೆಬೀಡು, ಸಂತ ಶರಣರ ನಾಡು ಎಂದು ಹೆಸರುವಾಸಿಯಾಗಿದೆ. ಅಂತಹ ಶರಣರ, ಸಂತರ, ಕವಿಪುಂಗವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುತ್ತಿರುವ ಯುವಜನತೆ...

More Articles Like This

error: Content is protected !!
Join WhatsApp Group