ಕದ್ದು ತಂದೆ ಪ್ರೀತಿ
ಓ ನನ್ನ ಒಲವೇ.
ನೋಡಿದೆ ನಾ ನಿನ್ನ ಮೊದಲ ದಿನವೇ.
ಒಪ್ಪಿಕೊಂಡವು ನನ್ನ ನಯನಗಳೆರಡು.
ನೀನೆ ನನ್ನ ಪತಿ ನೀನೆ ನನ್ನ ನಲ್ಲ ಎಂದು.
ಹೃದಯದಲ್ಲಿ ತುಂಬಿತು ಅದಮ್ಯ ಪ್ರೀತಿ.
ಬದುಕಲ್ಲಿ ಬಂದಿತು ಸತಿ ಸಾವಿತ್ರಿಯ ನೀತಿ.
ಉತ್ಸಾಹದಿಂದ ಮಾಡಿದೆ ನಿನ್ನ ಜೋಕೆ.
ಬದುಕಲ್ಲಿ ಹಾರಿಸಿದೆ
ಸುಂದರ ಸಂಸಾರದ ಪತಾಕೆ.
ಮನಸ್ಸಲ್ಲಿ ಬಾರದು ಚಂಚಲತೆಯ ಭಾವ.
ನೀವಾಗಿರುವಿರಿ ನನ್ನ ಬಾಳಿನ ಸುದೈವ.
ಯಾರೇನೇ ಅಂದರು ತಲೆಕೆಡಿಸಿಕೊಳ್ಳದ ಜೀವ.
ಗೊತ್ತಿದೆ ನನಗೆ ನೀವು ಎಂಥವರು ಎಂದು.
ಸಾಗುತಿದೆ ನಿಮ್ಮೊಂದಿಗೆ ನನ್ನ ಪಯಣ.
ಹರ್ಷ, ಆನಂದ, ಕೊರತೆಯಿಲ್ಲದ ತುಂಬು ಜೀವನ.
ಅದೆಲ್ಲವೂ ನಿಮ್ಮ ವರದಾನ.
ಪೂಜಿಸುವೆನು ನಿಮ್ಮನು ಅನವರತ..
ಪಾಲಿಸುವೆನು ಜತನದಿಂದ
ನಿಮ್ಮ ಕುಡಿನೋಟದಲ್ಲಿ ತುಂಬಿದ
ನಾನು ನೋಡಿದ ಆ ಕದ್ದು ತಂದ ಪ್ರೀತಿಯನ್ನು.
ಅರ್ಪಿಸುವೆನು ನಿಮ್ಮ ಅಡಿದಾವರೆಗಳಿಗೆ ಈ ಪ್ರೀತಿಯ ಸವಿ ತುಂಬಿದ ಕವನವನ್ನ
ಶ್ರೀಮತಿ ಉಮಾದೇವಿ.ಬಿ. ಎಸ್.
ಸ.ಶಿ. ಸ. ಕ. ಹಿ. ಪ್ರಾ. ಶಾ. ರಾಮಾಪುರ. ತಾ. ಸವದತ್ತಿ. ಜಿ. ಬೆಳಗಾವಿ.