- Advertisement -
ಬೆಳಗಾವಿ- ಮರಾಠಿಯಲ್ಲಿ ದಾಖಲೆ ಕೇಳಿ ದಾಂಧಲೆ ಮಾಡಿದ್ದ ಮರಾಠಿ ಪುಂಡನಿಗೆ ತಕ್ಕ ಉತ್ತರ ನೀಡಿದ್ದ ಯಮಕನಮರಡಿಯ ಹೆಮ್ಮೆಯ ಕನ್ನಡಿಗ ಅಧಿಕಾರಿಗಳಾದ ನಾಗೇಂದ್ರ ಪತ್ತಾರ (ರಾಜು) ಅವರನ್ನು ಸತ್ಕರಿಸಲಾಯಿತು.
ಗ್ರಾಮ ಪಂಚಾಯತ ಪಿಡಿಓ ರಾಜು ಪತ್ತಾರ ಅವರು ಮರಾಠಿ ಪುಂಡನಿಗೆ ಕಿಣೆಯಲ್ಲಿ ತಕ್ಕ ಉತ್ತರ ನೀಡಿ ಆಡಳಿತಗಾರ ಹೇಗೆ ಇರಬೇಕು ಎಂದು ತೋರಿಸಿ ಕನ್ನಡತನದ ಶ್ರೇಷ್ಠತೆಗೆ ಕಾರಣಿಕರ್ತರಾಗಿದ್ದಾರೆ
ಈ ಸ್ಮರಣೆಗೆ ರಾಜು ಪತ್ತಾರ ಅವರನ್ನು ಯಮಕನಮರಡಿಯಹುಣಸಿಕೊಳ್ಳ ಮಠದಲ್ಲಿ ಪರಮಪೂಜ್ಯರಿಂದ ಮತ್ತು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಿಂದ ಹುಕ್ಕೇರಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗು ಪದಾಧಿಕಾರಿಗಳು ಮತ್ತು ಸದಸ್ಯರ ಪರವಾಗಿ ಯಮಕನಮರಡಿಯ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಂದ ಮಾಧ್ಯಮ ಮಿತ್ರರಿಂದ ಅವರ ಕನ್ನಡ ಸೇವೆ ಮೆಚ್ಚಿ ಗೌರವಿಸಲಾಯಿತು