ಚಿಕ್ಕುಂಬಿ ನಾಗಲಿಂಗೇಶ್ವರ ಮಠದಲ್ಲಿ ಡಿಸೆಂಬರ್ ೫ ರಂದು ಕಾರ್ತಿಕೋತ್ಸವ

Must Read

ಮುನವಳ್ಳಿ: ಸಮೀಪದ ಚಿಕ್ಕುಂಬಿ ಗ್ರಾಮದ ಶ್ರೀ ಜಗದ್ಗುರು ಅಜಾತ ನಾಗಲಿಂಗೇಶ್ವರ ಮಠದಲ್ಲಿ ಶ್ರೀ ಅಭಿನವ ನಾಗಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿಸೆಂಬರ್ ೫ ರಂದು ಸಂಜೆ ೬.೪೫ ಗಂಟೆಗೆ ಕಾರ್ತಿಕೋತ್ಸವ ಮುಕ್ತಾಯ ಸಮಾರಂಭದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಚಿಕ್ಕಬಳ್ಳಾಪುರದ ನಂದಿಬೆಟ್ಟದ ಸಿದ್ಧನ ಗವಿಯ ಶ್ರೋತ್ರೀಯ ಬ್ರಹ್ಮನಿಷ್ಠ ಸ್ವಾಮಿ ಶಿವಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ವಹಿಸಲಿದ್ದು,ಅಥಣಿ ತಾಲೂಕಿನ ಅಡಹಾಳಟ್ಟಿಯ ದುರದುಂಡೇಶ್ವರ ಶಾಖಾ ಮಠದ ಶಿವಪಂಚಾಕ್ಷರಿ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.

ಈ ಸಂದರ್ಭದಲ್ಲಿ ಪ್ರಸಾದ ವಾಣಿಯನ್ನು ನರಗುಂದ ಪುಣ್ಯಾರಣ್ಯ ಪತ್ರಿವನಮಠದ ಶ್ರೋತ್ರೀಯ ಬ್ರಹ್ಮನಿಷ್ಠ ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಧಡೇರಕೊಪ್ಪ (ಹನುಮನಹಳ್ಳಿ) ಶಿವಾನಂದಮಠದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಬಸವ ಮಹಾಸ್ವಾಮಿಗಳು, ಹಾರೋಗೊಪ್ಪದ ಚನ್ನವೃಷಭೇಂದ್ರ ಲೀಲಾ ಮಠದ ಮಾತೋಶ್ರೀ ಶಿವಯೋಗಿನಿದೇವಿ ನೀಡುವರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲೆಯ ನೀರಲಗಿಯ ವೇದಮೂರ್ತಿ ಚಂದ್ರಶೇಖರಯ್ಯ ಹಿರೇಮಠ,ಬೆನಕೊಪ್ಪದ ಗುತ್ತಿಗೆದಾರರಾದ ಬಿ.ವೀ.ಬಿಂಗಿ, ಎಸ್.ವಿ.ಬಿಂಗಿ.ಎ.ಎಸ್.ಬಿಂಗಿ ಆಗಮಿಸಲಿದ್ದು ಇದೇ ಸಂದರ್ಭದಲ್ಲಿ ಶ್ರೀ ಮಠದ ಬ್ರಹ್ಮರಥ(ತೇರು) ನಿರ್ಮಾಣದ ದೇಣಿಗೆ ಪುಸ್ತಕ ಬಿಡುಗಡೆಯನ್ನು ನಂದಿಮಠದ ಶ್ರೀಗಳು ನೆರವೇರಿಸಲಿರುವರು.ಚಿಕ್ಕುಂಬಿಯ ಸಮಸ್ತ ಭಜನಾ ಮಂಡಳಿಗಳು ಹಾಗೂ ಸಂಗೀತಗಾರರಿಂದ ಸಂಗೀತ ಸೇವೆ ಜರಗುವುದು ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest News

ಮಠಗಳು ಸಂಸ್ಕಾರ ಕೊಡುವ ಜ್ಞಾನ ಕೇಂದ್ರಗಳು : ಶ್ರೀ ರಂಭಾಪುರಿ ಜಗದ್ಗುರುಗಳು

ಸಿಂದಗಿ; ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖ ಮತ್ತು ಶಾಂತಿಗೆ ಧರ್ಮ ಪರಿಪಾಲನೆ ಬಹಳ ಮುಖ್ಯ. ವೀರಶೈವ ಧರ್ಮದಲ್ಲಿ ಸಂಸ್ಕಾರಕ್ಕೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಈ...

More Articles Like This

error: Content is protected !!
Join WhatsApp Group