ಬೀದರ: ಉತ್ತರ ಪ್ರದೇಶದಲ್ಲಿ ಪ್ರಸಿದ್ಧಿಯಾಗಿರುವ ಕಾವಡ ಯಾತ್ರೆಯನ್ನು ರಾಜ್ಯದ ಗಡಿ ಜಿಲ್ಲೆ ಬೀದರನಲ್ಲಿ ಹಮ್ಮಿಕೊಂಡಿದೆ ಕೆಸರಿ ಪಡೆ.
ಹೌದು, ಉತ್ತರ ಪ್ರದೇಶದಲ್ಲಿ ಪ್ರಸಿದ್ಧಿಯಾಗಿರುವ ಕಾವಡ ಯಾತ್ರೆಯನ್ನು ಇದೆ ಮೊದಲ ಸಲ ಗಡೀ ಜಿಲ್ಲೆ ಬೀದರ್ ನಲ್ಲಿ ಕೇಸರಿ ಪಡೆಯು ಹಮ್ಮಿಕೊಂಡಿದ್ದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗಾಯ್ಮುಖ ಗುಪ್ತಲಿಂಗ ದೇವಸ್ಥಾನದಿಂದ ಬೀದರ್ ನಗರದ ಪಾಪನಾಶ ಶಿವಲಿಂಗ ದೇವಸ್ಥಾನ ದವರೆಗೆ ಭಜನೆ ಮಂಡಳಿಯವರ ನೇತೃತ್ವದಲ್ಲಿ ಭಕ್ತರು ಆರಂಭಿಸಿದರು.
ಇದಕ್ಕೂ ಮುಂಚೆ ಗಾಯ್ಮುಖ ದೇವಸ್ಥಾನದಲ್ಲಿ ಮಡಿ ಸ್ನಾನ ಮಾಡಿ, ಕೇಸರಿ ಬಟ್ಟೆ ಧರಿಸಿ ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಬಿಂದಿಗೆಗಳಲ್ಲಿ ಪವಿತ್ರ ನೀರು ಸಂಗ್ರಹಿಸಿ ಕಟ್ಟಿಗೆಯ ಎರಡು ಭಾಗಕ್ಕೆ ಕಟ್ಟಿಕೊಂಡು ಕಾವಡ ಯಾತ್ರೆ ಕೈಗೊಂಡರು. ಬೀದರ್-ಭಾಲ್ಕಿ ಹೆದ್ದಾರಿ ಮೂಲಕ ಹೆಜ್ಜೆ ಹಾಕಿದರು. ದಿನವಿಡೀ ಇದ್ದ ಜಿಟಿಜಿಟಿ ಮಳೆಯನ್ನು ಲೆಕ್ಕಿಸದ ಮಹಿಳೆಯರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವಯೋಮಾನದವರು ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇನ್ನು ಈ ಕಾವಡಾ ಯಾತ್ರೆಯಲ್ಲಿ ಭಾಗವಹಿಸಿದವರು ಲೋಕಕಲ್ಯಾಣಕ್ಕಾಗಿ, ಸೈನಿಕರ ಶ್ರೇಯೋಭಿವೃದ್ಧಿಗಾಗಿ ಹಮ್ಮಿಕೊಂಡು ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ