- Advertisement -
ಬೀದರ – ಸುಮಾರು ಎರಡೂವರೆ ವರ್ಷಗಳಿಂದ ಹೋರಾಟ ಮಾಡುತ್ತ ಆತ್ಮಹತ್ಯೆ ಗೆ ಯತ್ನಿಸಿದ ಕಾರಂಜಾ ಹೋರಾಟಗಾರರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಕಳೆದ ೩೦ ವರ್ಷಗಳಿಂದ ಇದೆ ನಾನು ಶಾಸಕನಾಗುವ ಮುಂಚೆಯೇ ಇದೆ ಕಾರಂಜಾ ಯೋಜನೆಯಲ್ಲಿ ನನ್ನ ಜಮೀನು ಕೂಡ ಹೋಗಿದೆ ಆದರೆ ಸಮಸ್ಯೆ ಪರಿಹಾರಕ್ಕೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ನಿಮ್ಮ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಮಾತುಕತೆಗೆ ಹೋಗೋಣ ಎಂದು ಬ್ರಿಮ್ಸ್ ಆಸ್ಪತ್ರೆಯಲ್ಲಿ ರೈತರನ್ನು ಕುರಿತು ಮಾತನಾಡಿದರು.
ಸೋಮವಾರ ೩ ಗಂಟೆಗೆ ಸಿಎಂ ಅವರು ಸಮಯ ನಿಗದಿ ಮಾಡಿದ್ದಾರೆ ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ಕಾರಂಜಾ ಸಂತ್ರಸ್ತರೊಂದಿಗೆ ಸಭೆ ನಡೆಸಲಿದ್ದಾರೆ ಈ ಸಭೆಯಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೂ ಇರುತ್ತಾರೆ ಸಿಎಂ ಅವರೊಂದಿಗೆ ಚರ್ಚೆ ಮಾಡೋಣ ಎಂದು ಖಂಡ್ರೆ ಸಂತ್ರಸ್ತರಿಗೆ ತಿಳಿಸಿದರು.