ಜನ ಕಲ್ಯಾಣ ಹಾಗೂ ಲೋಕ ಕಲ್ಯಾಣಕ್ಕಾಗಿ ಬಲಭೀಮ ದೇವಸ್ಥಾನದಲ್ಲಿ ಹೋಮ ಪೂಜೆ ನಡೆಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Must Read

ಕುಲಗೋಡ (ತಾ.ಮೂಡಲಗಿ)- ಲೋಕ  ಕಲ್ಯಾಣ ಹಾಗೂ ಜನರ ಏಳ್ಗೆಗಾಗಿ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇಂದು ಬೆಳಗಿನ ಜಾವ ಇಲ್ಲಿನ ಇತಿಹಾಸ ಪ್ರಸಿದ್ಧ ಬಲಭೀಮ ದೇವಸ್ಥಾನದಲ್ಲಿ ಹೋಮ- ಹವನ  ನಡೆಸಿದರು.

ಅರಭಾವಿ ಕ್ಷೇತ್ರದ ಜನರಿಗೆ ಸದಾಕಾಲವೂ ಒಳ್ಳೆಯದಾಗಬೇಕು. ಕಷ್ಟ ಕಾರ್ಪಣ್ಯಗಳು ದೂರ ಸರಿಯಬೇಕು. ಕಾಲ-ಕಾಲಕ್ಕೆ ಮಳೆ ಬಂದು ಉತ್ತಮ ಬೆಳೆ ಬಂದರೆ ರೈತನ ಮೊಗದಲ್ಲಿ ಸಂತಸ ಮೂಡುತ್ತದೆ. ರೈತ ಚೆನ್ನಾಗಿದ್ದರೆ ಇಡೀ ದೇಶವೇ ಸುಖದಿಂದ ಇರುತ್ತದೆ. ಅರಭಾವಿ ಕ್ಷೇತ್ರ ಸೇರಿದಂತೆ ಇಡೀ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ, ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ ಅವರು, ಕ್ಷೇತ್ರದ ಜನರ ಸೇವೆಯನ್ನು ಮಾಡಲು ಬಲಭೀಮನು ಇನ್ನಷ್ಟು ಹೆಚ್ಚಿನ ಸೇವೆ ಮಾಡಲು ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಸತ್ಯಾನ ಆಚಾರ್ಯ, ರಾಜು ಜೋಶಿ, ಹಣಮಂತ ಪೂಜೇರಿ, ಪುಟ್ಟಣ್ಣ ಪೂಜೇರಿ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು.

ಇದೇ ಸಂದರ್ಭದಲ್ಲಿ ೨೫ ಅಡಿ ಎತ್ತರದ ಶ್ರೀ ರಾಮನ ನೂತನ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಅಭಿಮಾನಿಗಳು ಉಪಸ್ಥಿತರಿದ್ದರು.

ಸಿಎಂಗೆ ಶುಭಾಶಯ:

ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದೂರವಾಣಿ ಮೂಲಕ ಶುಭಾಶಯ ಕೋರಿದ್ದಾರೆ.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group