ದೊಡ್ಡ ಮಂಡಿಗನಹಳ್ಳಿ ಶ್ರಿ ಗುಹೆ ಕಲ್ಲಮ್ಮ ಚಿಕ್ಕಮ್ಮದೇವಿ ಕುಂಭ ಮಹೋತ್ಸವ – ಭಕ್ತಿ ಸುಧೆ ಕಾರ್ಯಕ್ರಮ

0
124

ಹಾಸನದ ಶ್ರೀ ಗುಹೆ ಕಲ್ಲಮ್ಮ ಶ್ರಿ ಚಿಕ್ಕಮ್ಮ ದೇವಿಯವರ ಮಹಾ ಶಿವರಾತ್ರಿ ಪ್ರಯುಕ್ತ 29ನೇ ವರ್ಷದ ಅದ್ದೂರಿ ಕುಂಭ ಮಹೋತ್ಸವ ಶ್ರೀ ಕ್ಷೇತ್ರ ಧರ್ಮದೇವತೆ ಶ್ರೀ ಚಿಕ್ಕಮ್ಮ ದೇವಿಯವರ ಸನ್ನಿಧಿ, ದೊಡ್ಡ ಮಂಡಿಗನಹಳ್ಳಿ ಬಿ.ಎಂ. ರಸ್ತೆ ಹಾಸನ ತಣ್ಣೀರು ಹಳ್ಳದ ರಾಮೇಶ್ವರ ದೇವಸ್ಥಾನದಿಂದ 101 ಕಳಸ ಹಾಗೂ ಹೊವಿನ ಮಂಟಪದಲ್ಲಿ ಅಮ್ಮ ನವರ ಮೆರವಣಿಗೆ ಪ್ರಮುಖ ರಾಜ ಬೀದಿಗಳಲ್ಲಿ ದೊಡ್ಡಮಂಡಿಗನಹಳ್ಳಿ ಗ್ರಾಮದಲ್ಲಿ ನಡೆಯಿತು.

ಮಧ್ಯಾಹ್ನ ಅಮ್ಮನವರ ಮೂಲ ವಿಗ್ರಹಕ್ಕೆ ಕುಂಭಾಭಿಷೇಕ ಮಹಾ ಮಂಗಳಾರತಿ ಹಾಗೂ ನೈವೈದ್ಯ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ 7ಕ್ಕೆ ಹಾಸನದ ಶ್ರೀ. ಶಾರದ ಕಲಾತಂಡದ ವತಿಯಿಂದ ಶ್ರೀ ಹೆಚ್.ಜಿ.ಗಂಗಾಧರ್ ಸಾರಥ್ಯದಲ್ಲಿ ಭಕ್ತಿ ಸುಧೆ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.