spot_img
spot_img

ಸಂತೋಷದಾಯಕ ಕಲಿಕೆಯ ಪ್ರೇರೇಪಿಸುವಂತೆ ಮಾಡುವಲ್ಲಿ ಕಲಿಕಾ ಹಬ್ಬದ ಪಾತ್ರ ಮಹತ್ವದ್ದು – ಮೋಹನ್ ದಂಡಿ

Must Read

spot_img
- Advertisement -

ಮುನವಳ್ಳಿ: ಕಥೆ ಹೇಳುವುದು, ಒಳಾಂಗಣ ಮತ್ತು ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂತೋಷದಾಯಕ ಮತ್ತು ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುವಂತೆ ಮಾಡುವಲ್ಲಿ ಕಲಿಕಾ ಹಬ್ಬದ ಪಾತ್ರ ಮಹತ್ವದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಹೇಳಿದರು.

ಅವರು ಪಟ್ಟಣದ ಗಾಂಧಿನಗರದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಮುನವಳ್ಳಿ ಪಟ್ಟಣದ ಪುರಸಭೆ ಅಧ್ಯಕ್ಷ ರಾದ ಸಿ ಬಿ ಬಾಳಿ, ಸದಸ್ಯ ಪಂಚಪ್ಪ ಬಾರಕೇರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ಎಸ್ ಹೊಸಮನಿ, ಡೈಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ಸಿಂದೋಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎನ್ ಎ ಹೊನ್ನಳ್ಳಿ, ಮುನವಳ್ಳಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೀರಾದೇವಿ ಮುರನಾಳ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಂ ಎಸ್ ಹೊಂಗಲ,  ಶಾಲೆಯ ಮುಖ್ಯ ಗುರು ಮಾತೆ ಯವರಾದ ಎಚ್ ಎಸ್ ಮನಿಯಾರ, ರಂಜನಿ ನಾಯ್ಕ ಹಾಗೂ ಮಂಗಲಾ ಉಪ್ಪಾರಗುರು ಸೇರಿದಂತೆ ಸಾಯಿ ಮಂದಿರ ಅರ್ಚಕರಾದ ರಾಜು ಶಾಸ್ತ್ರೀ, ಎಸ್ ಡಿ ಎಂ ಸಿ ಅಧ್ಯಕ್ಷ ಜಗದೀಶ ಹೊಸಮನಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

- Advertisement -

ಪುರಸಭೆ ಅಧ್ಯಕ್ಷ ರಾದ ಸಿ ಬಿ ಬಾಳಿ ಯವರು ಮಾತನಾಡಿ, “ಶಾಲೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪುರಸಭೆ ಕಾರ್ಯ ಮಾಡುತ್ತದೆ ಎಂದು ಹೇಳಿದರು.

ಎನ್ ಎ ಹೊನ್ನಳ್ಳಿ ಪ್ರಾಸ್ತಾವಿಕವಾಗಿ ಕಲಿಕಾ ಹಬ್ಬದ ಮಹತ್ವದ ಕುರಿತು ಮಾತನಾಡಿದರು. ಡೈಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ ಮಾತನಾಡಿ, ಕಲಿಕಾ ಹಬ್ಬದಲ್ಲಿ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ, ಸಂತೋಷದಾಯಕ ಗಣಿತ, ನಿಧಿ ಹುಡುಕಾಟ, ಸ್ಮರಣಾ ಪರೀಕ್ಷೆ, ರಸ ಪ್ರಶ್ನೆ ಮುಂತಾದ ಚಟುವಟಿಕೆಯನ್ನು ಆಯೋಜಿಸಿದ್ದು ಈ ಎಲ್ಲಾ ಚಟುವಟಿಕೆ ಮಕ್ಕಳ ಪ್ರತಿಭೆ ಹೊರಹೊಮ್ಮುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ನೀಡುತ್ತವೆ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ವೈ ಎಫ್ ಶಾನುಭೋಗ ಮಾತನಾಡಿ, ಮಕ್ಕಳು ಮತ್ತು ಶಿಕ್ಷಕರು ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯದ ಸದಸ್ಯರನ್ನು ಪರಸ್ಪರ ಭೇಟಿಯಾಗಲು, ಅವರನ್ನು ಸಂತಸದಾಯಕ ವಾತಾವರಣದ ಕಡೆಗೆ ಸ್ವಾಗತಿಸಲು ಮತ್ತು ಕಲಿಕೆಯ ಅವಕಾಶವನ್ನು ಸರಕಾರ ನೀಡಿದ್ದು ಇದರ ಸದುಪಯೋಗ ಆಗಲಿ ಎಂದು ತಿಳಿಸಿದರು.

- Advertisement -

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ, ಪುರಸಭೆ ಅಧ್ಯಕ್ಷ ರಾದ ಸಿ ಬಿ ಬಾಳಿ, ಡೈಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ,  ಪುರಸಭೆ ಸದಸ್ಯರಾದ ಪಂಚಪ್ಪ ಬಾರಕೇರ, ಸಾಯಿ ಮಂದಿರದ ಅರ್ಚಕರಾದ ರಾಜು ಶಾಸ್ತ್ರೀ…. ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ಪ್ರಾರ್ಥನೆ ಜರುಗಿತು. ನಂತರ ನೃತ್ಯ ಪ್ರದರ್ಶನ ಜರುಗಿತು.
ಕಲಿಕಾ ಹಬ್ಬ ವಿವಿಧ ಸ್ಪರ್ಧೆಗಳ ನಿರ್ಣಾಯಕರಾಗಿ
1)ಗಟ್ಟಿ ಓದು ವಿಷಯದ ನಿರ್ಣಾಯಕರಾಗಿ ಸಿ ಎಸ್ ಅಂಗಡಿ, ರೇಖಾ ಅಂಕಲಗಿಮಠ,
2)ಕಥೆ ಹೇಳುವುದು ವಿಷಯದ ನಿರ್ಣಾಯಕರಾಗಿ ಶೀತಲ ಗೋಮಾಡಿ, ರೇಖಾ ಶಾನಬೋಗ,
3) ಕೈಬರಹದ ನಿರ್ಣಾಯಕರಾಗಿ ಲಕ್ಷ್ಮೀ ಉಜ್ಜಿನಕೊಪ್ಪ, ಲಕ್ಷ್ಮೀ ಮುತ್ತೂರ,
4)ಸಂತೋಷದಾಯಕ ಗಣಿತ ನಿರ್ಣಾಯಕರಾಗಿ ಎಚ್ ಎಸ್ ಹೊಸಮನಿ ಹಾಗೂ ಗಿರಿಜನ್ನವರ,
5)ಟ್ರೇಷರ ಹಂತ ನಿರ್ಣಾಯಕರಾಗಿ ಭಾಗ್ಯಾ ಹೊನ್ನಳ್ಳಿ, ಈರಮ್ಮ ಕಾಜಗಾರ 6)ರಸಪ್ರಶ್ನೆ ನಿರ್ಣಾಯಕ ರಾಗಿ: ಕಲಾವತಿ ಬಾಳೆಕುಂದ್ರಿ, ಕಲ್ಮೇಶ ನಲವಡೆ
7)ಪೋಷಕರು ಮಕ್ಕಳ ಸಹಸಂಬಂಧ ವಿಷಯದ ನಿರ್ಣಾಯಕರಾಗಿ ಸುಜಾತಾ ಹೊನ್ನಳ್ಳಿ,
ಎಚ್ ಎ ಹೊನ್ನಳ್ಳಿ
8)ಸಂತೆ ಮೇಳ ನಿರ್ಣಾಯಕರಾಗಿ ಭಾರತಿ ಸಂದೀಮನಿ,  ಎನ್ ಎ ಕುರಿ
9)ಪ್ಯಾಶನ್ ಷೋ ನಿರ್ಣಾಯಕರಾಗಿ ಎ ಎಸ್ ಪಾತಾಳಿ,  ಎನ್ ಆರ್ ಕಕಮರಿ ಮೊದಲಾದವರು ಪಾಲ್ಗೊಂಡು ನಿರ್ಣಯ ಮಾಡಿದರು. ಬಹುಮಾನ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು.

ಶಿಕ್ಷಕರಾದ ಯಲ್ಲಪ್ಪ ತಂಗೋಜಿ ಸ್ವಾಗತಿಸಿದರು. ಮೀರಾದೇವಿ ಮುರನಾಳ ಕಾರ್ಯ ಕ್ರಮ ನಿರೂಪಿಸಿದರು. ಹೇಮಾವತಿ ಹೊನ್ನಳ್ಳಿ ವಂದಿಸಿದರು.

ವಿಶೇಷ ವರದಿ. ವೈ ಬಿ ಕಡಕೋಳ
ಶಿಕ್ಷಕ ಸಾಹಿತಿಗಳು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸೇವಾ ನಿವೃತ್ತಿ, ಗೆಳೆಯರ ಬಳಗದಿಂದ ನಿಡಗುಂದಿಗೆ ಸನ್ಮಾನ

ಮೂಡಲಗಿ : ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಕಾಶ್ ಗೂಳಪ್ಪ ನಿಡಗುಂದಿ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಅವರ ಗೆಳೆಯರ ಬಳಗದಿಂದ ಮೂಡಲಗಿಯ ಪ್ರತಿಷ್ಠಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group