ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರಿಗೆ ಶಿಕ್ಷೆಯಾಗಲಿ: ಮಾರುತಿ ಮರ್ಡಿ ಮೌರ್ಯ

Must Read

ಮೂಡಲಗಿ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಮಹಿಳೆ ಲಕ್ಷ್ಮೀ ವಿಠ್ಠಲ ಕಳ್ಳಿಮನಿ ಇವರದು ವಲಸೆ ಕುರಿಗಾರರ ಕುಂಟುಂಬವಾಗಿದೆ. ಫೆ. 18 ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಕುರಿಹಟ್ಟಿಯಿಂದ ಕಟ್ಟಿಗೆ ತರಲು ಹೋದಾಗ ಮಹಮ್ಮದ ಕೋಲಕಾರ ಅಲಿಯಾಸ ಮುಕಬಲ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿ ಕೊಲೆ ಮಾಡಿರುತ್ತಾನೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕೃತ್ಯದಲ್ಲಿ ಇನ್ನೂ ಹಲವಾರು ಜನ ಪಾಲ್ಗೊಂಡಿದ್ದಾರೆ ಎಂದು ಮೃತ ಲಕ್ಷ್ಮಿ ಕುಟುಂಬಸ್ಥರು ಅನುಮಾನ ವ್ಯಕ್ತ ಪಡಿಸಿರುತ್ತಾರೆ. ಆದ್ದರಿಂದ ಈ ಕುರಿತು ಸೂಕ್ತ ತನಿಖೆಯನ್ನು ನಡೆಸುವಂತೆ ಸರ್ಕಾರಕ್ಕೆ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷರಾದ ವಿನಾಯಕ ಕಟ್ಟಿಕಾರ ಮಾತನಾಡಿ, ಮೃತ ಲಕ್ಷ್ಮೀ ಇವರಿಗೆ ಮೂರು ಚಿಕ್ಕ ಮಕ್ಕಳಿದ್ದು , ಇವರ ಕುಟುಂಬ ಸಂಪೂರ್ಣ ಕುರಿ ಸಾಕಾಣಿಕೆಯ ಮೇಲೆ ಅವಲಂಬನೆ ಯಾಗಿದ್ದು, ರಾಜ್ಯ ಸರ್ಕಾರ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಿದೆ. ಹಾಲುಮತ ಮಹಾಸಭಾದಿಂದ ಸರ್ಕಾರಕ್ಕೆ ಅಭಿನಂದನೆ. ರಾಜ್ಯದ ಎಲ್ಲಾ ಸಂಚಾರಿ ಕುರಿಗಾರರಿಗೆ ಅರಣ್ಯದಲ್ಲಿ ಅಧಿಕಾರಿಗಳಿಂದ ತೊಂದರೆ, ಕಳ್ಳತನ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ.. ಸರ್ಕಾರ ಅವರಿಗೆ ಸೂಕ್ತವಾದ ಭದ್ರತೆಯನ್ನು ನೀಡಬೇಕು. ಆರೋಪಿಗೆ ಕಠಿಣವಾದ ಶಿಕ್ಷೆ ಆಗಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಆ ಸಂದರ್ಭದಲ್ಲಿ ಕಲ್ಲೋಳಿ ಪಟ್ಟಣ ಪಂಚಾಯತ ಸದ್ಯಸರಾದ ಲಕ್ಷ್ಮಣ ಮರ್ಡಿ ,ಸಂಘಟನೆಯ ವೀರು ಮೋಡಿ, ಪ್ರಕಾಶ ಪಾಟೀಲ,ಸಿದ್ದು ದೇವರಮನಿ, ರಾಮೋಜಿ ಮಾಳಗಿ ಅನೇಕರು ಉಪಸ್ಥಿತರಿದ್ದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group