ಸಿಂದಗಿ: ಕರ್ನಾಟಕ ರಾಜ್ಯ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ರಾಜ್ಯ ಉತ್ತಮ ಮತದಾರರ ಸಾಕ್ಷರತಾ ಸಂಘವು ಕೊಡಮಾಡುವ ರಾಜ್ಯಮಟ್ಟದ ಉತ್ತಮ ಚುನಾವಣಾ ಸಾಕ್ಷರತಾ ಕ್ಲಬ್ ಪ್ರಶಸ್ತಿಗೆ ಪಟ್ಟಣದ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಮತ್ತು ತಾಲೂಕಾ ಇಎಲ್‍ಸಿ ನೋಡಲ್ ಅಧಿಕಾರಿ ನಿಂಬೆಣ್ಣಾ ಬಿ. ಪೂಜಾರಿ ಭಾಜನರಾಗಿದ್ದಾರೆ.
ಈ ಪ್ರಶಸ್ತಿಯನ್ನು ದಿ. 25 ರಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್‍ಚೆಂದ ಗೆಹ್ಲೋಟ್ ಅವರು ಪ್ರಶಸ್ತಿ ಫಲಕದೊಂದಿಗೆ ಸನ್ಮಾನಿಸಿ ಗೌರವಿಸಿದರು.
ಈ ಪ್ರಶಸ್ತಿ ಲಭಿಸಿದ್ದಕ್ಕಾಗಿ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯ ವಿಮಲಕಾಂತ ಪಾಟೀಲ, ಉಪನ್ಯಾಸಕರಾದ ಭೀಮನಗೌಡ ಸಿಂಗನಳ್ಳಿ, ಪಿ.ವ್ಹಿ.ಮಹಲಿನಮಠ, ಶಿವಶರಣ ಬೂದಿಹಾಳ, ಪಿ.ಎಸ್.ಸರನಾಡಗೌಡ, ವಿಜಯಲಕ್ಷ್ಮೀ ಹಿರೇಮಠ, ಎಂ.ಐ.ಮುಜಾವರ, ಎಸ್.ಜಿ.ಮಾರ್ಸನಳ್ಳಿ, ಡಾ. ವಿಶ್ವನಾಥ ನಂದಿಕೋಲ, ಎಸ್.ಎಚ್.ಜಾಧವ, ಬಸವರಾಜ ಜಮಾದಾರ, ರಾಜಶ್ರೀ ಗಾಣಗೇರ್, ಡಾ.ಎಸ್.ಸಿ.ಜೋಗೂರ ಸೇರಿದಂತೆ ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.