spot_img
spot_img

ಮತದಾರರ ಜಾಗೃತಿ ಇಂದಿನ ಧ್ಯೇಯವಾಗಿದೆ – ಮುರಳಿಧರ ದೇಶಪಾಂಡೆ

Must Read

ಗೋಕಾಕ: ನಮ್ಮ ದೇಶದ ಮತದಾರರನ್ನು ಸಬಲೀಕರಣ, ಜಾಗೃತ, ಸುರಕ್ಷಿತ ಮತ್ತು ಮಾಹಿತಿದಾರರನ್ನಾಗಿ ಮಾಡುವುದು. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಲು ಅವರಿಗೆ ಸಹಕರಿಸುವುದು ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಹೇಳಿದರು.

ಬುಧವಾರದಂದು ನಗರದ ಜೆಎಸ್‍ಎಸ್ ಕಾಲೇಜಿನಲ್ಲಿ ತಾಲೂಕಾಡಳಿತ, ತಾಪಂ, ನಗರಸಭೆ, ಶಿಕ್ಷಣ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಆಶ್ರಯದಲ್ಲಿ ಹಮ್ಮಿಕೊಂಡ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಮತದಾರರು ಮಾಡುವ ಆಯ್ಕೆಯೇ ಅಂತಿಮ ನಿರ್ಧಾರವಾಗಿದ್ದು, ಮತದಾನ ನಮ್ಮ ಹಕ್ಕಾಗಿದ್ದು, ಇದರಿಂದ ನಾವು ವಂಚಿತರಾಗಬಾರದು. ಮತದಾರರಿಗೆ ಅನುಕೂಲವಾಗುವ ಸಲುವಾಗಿ ಸರಕಾರ ವರ್ಷದಲ್ಲಿ ನಾಲ್ಕು ಬಾರಿ ಮತದಾರರ ಪಟ್ಟಿಯನ್ನು ಪರಿಷ್ಕೃತ ಮಾಡುತ್ತಿದೆ ಮತದಾರರು ಇದರ ಲಾಭ ಪಡೆದುಕೊಳ್ಳಬೇಕು. ಯುವ ಮತದಾರರು ಜವಾಬ್ದಾರಿಯಿಂದ ಮತದಾನ ಮಾಡಬೇಕು. ದೇಶದ ಭವಿಷ್ಯ ನಿರ್ಧರಿಸುವ ಜವಾಬ್ದಾರಿ ಇಂದಿನ ಯುವ ಜನಾಂಗದ ಮೇಲಿದೆ ವಿದ್ಯಾರ್ಥಿಗಳು ಇದನ್ನು ಅರಿತು ಮತದಾನ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿ.ಎಲ್.ಓಗಳನ್ನು ಸತ್ಕರಿಸಲಾಯಿತು. ನೂತನವಾಗಿ ಮತದಾನದ ಹಕ್ಕು ಪಡೆದ ಯುವಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಗ್ರೇಡ್-2 ತಹಶೀಲ್ದಾರ ಎಲ್.ಎಚ್.ಭೋವಿ, ಪೌರಾಯುಕ್ತ ಶಿವಾನಂದ ಹಿರೇಮಠ, ಪ್ರಾಚಾರ್ಯರಾದ ಡಾ.ಆಶಾಲತಾ ತೇರದಾಳ, ರಾಜಶ್ರೀ ಬಿರಾದಾರ, ಆರ್.ಎಚ್.ಮುಲ್ಲಾ, ಎಂ.ಬಿ.ಪಾಟೀಲ, ನ್ಯಾಯವಾದಿ ಪ್ರೇಮಾ ಚಿಕ್ಕೋಡಿ, ಡಾ.ಆರ್.ಎಸ್.ಬಳಿಗಾರ, ಉಪಸ್ಥಿತರಿದ್ದರು.

ಡಾ. ಎಸ್.ಬಿ.ಹೊಸಮನಿ ನಿರೂಪಿಸಿದರು, ಅಭಯ ಆರ್ ಸ್ವಾಗತಿಸಿದರು, ಎ. ವ್ಹಿ. ಪಾಟೀಲ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!