ಲಯನ್ಸ್ ಕ್ಲಬ್ ಕ್ರಿಕೆಟ್; ಅಪ್ಪಣ್ಣ ಬಡಿಗೇರಗೆ ‘ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ’

Must Read

ಮೂಡಲಗಿ: ಜಮಖಂಡಿಯ ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಜರುಗಿದ ಲಯನ್ಸ್ ಕ್ಲಬ್ ಪ್ರಾಂತೀಯ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ ಸದಸ್ಯ ಅಪ್ಪಣ್ಣ ಬಡಿಗೇರ ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೇಸ್‍ಬಾಲ್‍ನ ಲೀಗ್‍ದಲ್ಲಿ ನಡೆದ ಕ್ರಿಕೆಟ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಅಪ್ಪಣ್ಣ ಬಡಿಗೇರ ಔಟಾಗದೆ 96 ರನ್‍ಗಳು ಮತ್ತು ಎಡನೇ ಸುತ್ತಿನ ಪಂದ್ಯದಲ್ಲಿ ಔಟಾಗದೆ 56 ರನ್‍ಗಳನ್ನು ತೆಗೆದು ತಂಡಕ್ಕೆ ಗೆಲವು ತಂದುಕೊಟ್ಟಿರುವರು. ಇದೇ ಪಂದ್ಯದಲ್ಲಿ ತಂಡದ ನಾಯಕ ಶಿವಾನಂದ ಗಾಡವಿ ಔಟಾಗದೆ 58 ರನ್‍ಗಳನ್ನು ತೆಗೆದುಕೊಳ್ಳುವುದರ ಮೂಲಕ ಅತ್ಯುತ್ತಮ ಪ್ರದರ್ಶನವನ್ನು ನೀಡಿರುವರು.

ಇತ್ತಿಚೆಗೆ ಮೂಡಲಗಿಯಲ್ಲಿ ನಡೆದ ಲಯನ್ಸ್ ಕ್ಲಬ್ ಜಿಲ್ಲಾ ಗವರ್ನರ್ ಭೆಟ್ಟಿ ಸಂದರ್ಭದಲ್ಲಿ ಅಪ್ಪಣ್ಣ ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಕ್ಯಾಬಿನೆಟ್ ಖಜಾಂಚಿ ಕೃಷ್ಣಾಜೀ ಬಗಲಿ, ಉಜ್ವಲಾ ಮೋರೆ, ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ, ಖಜಾಂಚಿ ಸುಪ್ರೀತ್ ಸೋನವಾಲಕರ, ವೆಂಕಟೇಶ ಸೋನವಾಲಕರ, ಶ್ರೀಶೈಲ್ ಲೋಕನ್ನವರ, ಮಹಾಂತೇಶ ಹೊಸೂರ, ಸಂಜಯ ಮೋಕಾಸಿ, ಶಿವಾನಂದ ಕಿತ್ತೂರ ಮತ್ತಿತರರು ಇದ್ದರು.

Latest News

ಸರಕಾರಿ ಶಾಲೆಗೆ ೫೧ ಸಾವಿರ ಮೌಲ್ಯದ ಸೌಂಡ ಸಿಸ್ಟಮ್ ಕಾಣಿಕೆ

ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಗೆ ರೂ.೫೧,೦೦೦/ ಬೆಲೆಯ ಸೌಂಡ್ ಸಿಸ್ಟಮ್, ಮೈಕ್, ಸೌಂಡ ಬಾಕ್ಸನ್ನು ಗ್ರಾಮದ ಗುತ್ತಿಗೆದಾರ ಮಂಜುನಾಥ...

More Articles Like This

error: Content is protected !!
Join WhatsApp Group