- Advertisement -
ಬೀದರ್ – ಗಡಿ ಜಿಲ್ಲೆ ಬೀದರ್ ನಲ್ಲಿ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತರು ಕಾರಂಜಾ ಇಲಾಖೆಯ ಅಧಿಕಾರಿಯ ನಿವಾಸಗಳು ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
ಏಕಕಾಲಕ್ಕೆ ನಾಲ್ಕು ಕಡೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಕಾರಂಜಾ ಇಲಾಖೆಯ ಕಾರ್ಯ ಪಾಲಕರು ಅಭಿಯಂತರ ನಿವಾಸ ಹಾಗೂ ಕಚೇರಿಯ ಇತರೆ ಅಧಿಕಾರಿಗಳ ನಿವಾಸಗಳ ಮೇಲೆಯೂ ದಾಳಿ ನಡೆಸಿದರು.
ಬೀದರ್ ನಗರದ ವೀರಭದ್ರೇಶ್ವರ ಕಾಲೋನಿಯ ನಿವಾಸ, ಭಾಲ್ಕಿ ತಾಲೂಕಿನ ನಾಗೂರು ಗ್ರಾಮದ ನಿವಾಸ, ಬೀದರ್ ನಗರದ ಕಾರಂಜಾ ಕಚೇರಿ ಹಾಗೂ ಕಲಬುರಗಿಯ ಹಳೆ ನಿವಾಸದ ಮೇಲೆ ದಾಳಿ ಮಾಡಿದರು. ಭಾಲ್ಕಿಯ ಕಾರಂಜಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಸ್ವಾಮಿಯವರನ್ನು ವಿಚಾರಣೆ ಮಾಡಿದರು.
- Advertisement -
ಲೋಕಾಯುಕ್ತ ಎಸ್ಪಿ ಅಂಟೋನಿ ಜಾನ್ ಮರ್ಗಾದರ್ಶನದಲ್ಲಿ ಈ ಲೋಕಾಯುಕ್ತ ದಾಳಿ ನಡೆಯಿತು.
ವರದಿ : ನಂದಕುಮಾರ ಕರಂಜೆ, ಬೀದರ