spot_img
spot_img

ಸರ್ಕಾರಿ ಸೇವೆಯಲ್ಲಿ ಕರ್ತವ್ಯಲೋಪವಾದರೆ ಪ್ರಕರಣ ದಾಖಲು – ಲೋಕಾಯುಕ್ತ ಎಚ್ಚರಿಕೆ

Must Read

- Advertisement -

ಸಿಂದಗಿ; ಸರಕಾರ ಸಾರ್ವಜನಿಕರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಅದು ಪಾರದರ್ಶಕ ಹಾಗೂ ಸಮಪರ್ಕವಾಗಿ ಭ್ರಷ್ಟಾಚಾರ ರಹಿತ ಸೌಲಭ್ಯಗಳು ಮುಟ್ಟಿದೆ ಅಥವಾ ಇಲ್ಲವೋ ಎಂಬದನ್ನು ನಿಗಾ ವಹಿಸಲು ಲೋಕಾಯುಕ್ತ ಇಲಾಖೆಗೆ ಅಧಿಕಾರವಿದೆ ಕಾರಣ ಸೌಲಭ್ಯಗಳು ಸಮಪರ್ಕಕವಾಗಿ ಮುಟ್ಟಿಸುವಲ್ಲಿ ಲೋಪವಾದರೆ ಕರ್ತವ್ಯ ನಿರ್ಲಕ್ಷ್ಯ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ ಎಂದು ಲೋಕಾಯುಕ್ತ ಎಸ್‌ಪಿ ಟಿ.ಮಲ್ಲೇಶ ಎಚ್ಚರಿಕೆ ನೀಡಿದರು.

ಪಟ್ಟಣದ ತಾಪಂ ಕಾರ್ಯಾಲಯದ ಸಭಾ ಭವನದಲ್ಲಿ ಲೋಕಾಯುಕ್ತರು ಸಾರ್ವಜನಿಕರ ಅಹವಾಲ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಪಂ ಹಾಗೂ ಜಿಲ್ಲಾ ಯೋಜನಾ ಪ್ರಾಧಿಕಾರ ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ಬಯಲು ಮುಕ್ತ ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕರಿಗೆ ಹಾಗೂ ಸರಿಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯಗಳನ್ನು ಕಟ್ಟಿಸಿ ಬಯಲು ಶೌಚಾಲಯ ಮುಕ್ತ ಸಮಾಜ ನಿರ್ಮಾಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸುತ್ತದೆ ಅದರ ಜಾಗೃತಿ ಮೂಡಿಸುವ ಕೊರತೆಯಿಂದ ಅದು ಸಫಲತೆ ಕಾಣುತ್ತಿಲ್ಲ ಕಾರಣ ಶಾಲೆಗಳಲ್ಲಿ ಮಕ್ಕಳಿಗೆ ಬಿಇಓ, ಶಿಶು ಅಭಿವೃದ್ದಿ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮದ ಅರಿವು ಮೂಡಿಬೇಕು ಅಲ್ಲದೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸರಕಾರಿ ಆಪ್ ಇದೆ ಅದರ ಮೂಲಕ ಸಾರ್ವಜನಿಕರು ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಜಿ.ವೈ.ಮುರಾಳ ಮಾತನಾಡಿ, ಈ ಕ್ಷೇತ್ರದಲ್ಲಿ ೪ ಆರ್.ಎಂಎಸ್‌ಎ ೪ ಶಾಲೆಗಳು ಮಂಜೂರಾಗಿದ್ದು. ೧೮ ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕೆ ವರ್ಕ್  ಆರ್ಡರ ನೀಡಿದ್ದು ೧೩ ಪೂರ್ಣಗೊಂಡಿವೆ ಇನ್ನುಳಿದವುಗಳು ನಿರ್ಮಾಣ ಹಂತದಲ್ಲಿವೆ. ೨೦೨೩ನೇ ಸಾಲಿನಲ್ಲಿ ೩೮ ಶಾಲೆಗಳ ರಿಪೇರಿಗಾಗಿ ಅನುದಾನ ಬಂದಿದ್ದು ಕಾಮಗಾರಿ ಕೈಕೊಳ್ಲಲಾಗುವುದು. ಎಂದು ಹೇಳುತ್ತಿದಂತೆ ಯಾವ ಶಾಲೆಗಳಿಗೆ ಶೌಚಾಲಯಗಳಿಲ್ಲ ಮತ್ತು ಮಾಸ್ಕ್ಟೋನ್ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸುವಂತೆ ಲೋಕಾಯುಕ್ತ ಉಪ ಲೋಕಾಯುಕ್ತ ಸುರೇಶ ರಡ್ಡಿ ಅವರು ಸೂಚಿಸಿದರು.

- Advertisement -

ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ ಮಾಹಿತಿ ನೀಡಿ, ಒಟ್ಟು ೧೭ ವಸತಿ ನಿಲಯಗಳಿದ್ದು ಅದರಲ್ಲಿ ೧೫೩೭ ವಿದ್ಯಾರ್ಥಿಗಳಲ್ಲಿ ೪೮೪ ವಿದ್ಯಾರ್ಥಿನಿಯರಿದ್ದಾರೆ ಎಂದು ಹೇಳುತ್ತಿದಂತೆ ವಸತಿ ನಿಲಯಗಳು ಅವವ್ಯವಸ್ಥೆಯ ಆಗರ ಎನ್ನುವ ವರದಿಗಳು ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿವೆ ಮತ್ತು ವಿದ್ಯಾರ್ಥಿನಿಯರಿಗೆ ನಿಮಗೆ ತಿಳಿಯದ ಹಾಗೆ ಕೆಲವೊಂದು ಕ್ರಿಯೆ ನಡೆಯುತ್ತವೆ ಹೆಣ್ಣು ಮಕ್ಕಳು ಹೇಳಿಕೊಳ್ಳದೆ ಶಾಲೆ ಬಿಟ್ಟ ಪ್ರಕರಣಗಳಿಗೆ ಅದಕ್ಕೆ ಗುಡ್‌ಟಚ್, ಬ್ಯಾಡ್‌ಟಚ್ ಪ್ರಕರಣಗಳು ಬೆಳಕಿಗೆ ಬಂದಿವೆಯಾ ಅಂತವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ನಿರ್ದೆಶನ ನೀಡಿದರು.

ಅಬಕಾರಿ ಇಲಾಖೆಯ ಟಾಗ್ರೇಟ್‌ಗೋಸ್ಕರ ಒತ್ತಡ ಹೇರುವುದರಿಂದ ಗ್ರಾಮೀಣ ಬಾಗದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟವಾಗುತ್ತಿದೆ ಇದರಿಂದ ಯುವಕರ ಮತ್ತು ಮಕ್ಕಳ ಮೇಲೆ ಪರಿಣಾಮ ಬಿರುತ್ತಿದೆ ಕಾರಣ ೩೨,೩೪ ಕಾಯ್ದೆಯಡಿ ಪ್ರಕರಣ ದಾಖಲಿಸಿ ಎಂದು ಅಬಕಾರಿ ಅಧಿಕಾರಿ ದಿಲೀಪಸಿಂಗ್ ರಜಪೂತ ಅವರಿಗೆ ಸೂಚನೆ ನೀಡಿದರು.

ಸಾರ್ವಜನಿಕರಿಂದ ೧೮ ಅಹವಾಲುಗಳನ್ನು ಸ್ವೀಕರಿಸಿ ಇಡೀ ಜಿಲ್ಲೆಯಲ್ಲಿಯೇ ಸಿಂದಗಿ ಪುರಸಭೆಯಲ್ಲಿ ಅತೀ ಹೆಚ್ಚು ಸಮಸ್ಯೆಗಳಿಗೆ ಎನ್ನುವುದು ಜಗಜಾಹಿರು ಆಗಿವೆ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ ಸರಕಾರಿ ಸೇವೆ ಸೇರುವಾಗ ನಾನು ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸದೇ ಜನರ ಸೇವಕನಾಗಿ ಸೇವೆ ಸಲ್ಲಿಸುತ್ತೇನೆ ಎಂದು ಪ್ರಮಾಣಿಕರಿಸುತ್ತೀರಿ ಅದನ್ನು ಕಾರ್ಯರೂಪದಲ್ಲಿ ತನ್ನಿ ಎಂದರು.

- Advertisement -

ತಾಲೂಕಿನಲ್ಲಿ ರೈತರು ಅತೀ ಹೆಚ್ಚು ರೇಷ್ಮೇ ಬೆಳೆ ಬೆಳೆಯುವಂತೆ ಜಾಗೃತಿ ಮೂಡಿಸಬೇಕು ಸಹಾಯಕ ನಿರ್ದೆಶಕರಿಗೆ ಸಲಹೆ ನೀಡಿದರು.

ಬಿಸಿಊಟ, ಶಿಕ್ಷಣ ಇಲಾಖೆ, ಹೆಸ್ಕಾಂ, ಕಾರ್ಮೀಕ ಕೆಎಸ್‌ಆರ್‌ಟಿಸಿ, ಅಗ್ನಿಶಾಮಕ, ಅರಣ್ಯ ಇಲಾಖೆ, ಪಶು ಸಂಗೋಪನೆ, ಕೃಷಿ ಇಲಾಖೆ, ತೋಟಗಾರಿಕೆ, ಹಿಂದುಳಿದ ವರ್ಗಗಳ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿದ ಇಲಾಖೆಗಳ ವಿವರಣೆ ಪಡೆದರು

ಇದೇ ಸಂದರ್ಭದಲ್ಲಿ ತಾಪಂ ಇಓ ರಾಮು ಅಗ್ನಿ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಲೋಕಾಯುಕ್ತ ಸಿಪಿಆಯ್ ಆನಂದ ಡೋಣಿ ಸೇರಿದಂತೆ ಹಲವರು ಇದ್ದರು.

 

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group