spot_img
spot_img

ಗುರ್ಲಾಪೂರದಲ್ಲಿ ಮಾರುತಿ ದೇವರ ಓಕಳಿ ಹಾಗು ಶ್ರೀ ಬಸವೇಶ್ವರ ರಥೋತ್ಸವ

Must Read

- Advertisement -

ಮೂಡಲಗಿ: ಪ್ರತಿವರ್ಷದಂತೆ ಈ ವರ್ಷವು ಶ್ರೀ ಮಾರುತಿದೇವರ ಓಕಳಿ ಹಾಗೂ ಶ್ರೀ ಬಸವೇಶ್ವರ ರಥೋತ್ಸವವು ದಿ. 25 ರಿಂದ 29 ವರೆಗೆ  ಅದ್ದೂರಿಯಾಗಿ ಜರುಗುವದು.

ಗುರುವಾರ ದಿ.25 ರಂದು ಗ್ರಾಮದ ಮಾರುತಿ ದೇವರ ಮುಂದೆ ಇರುವ ಓಕಳಿ ಹೊಂಡಕ್ಕೆ ವಿಶೇಷವಾಗಿ ಪೂಜೆ  ಸಲ್ಲಿಸಿ ಓಕಳಿ ಹೊಂಡ ತೆಗೆದು ಸಣ್ಣಓಕಳಿ ಆಡುವರು. 

ಶುಕ್ರವಾರದಂದು ಗ್ರಾಮದ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಮಾಡಿ ಉಡಿ ತುಂಬಿ ಮಂಗಳಾರತಿ ಮಾಡುವರು ಸಂಜೆ ಗ್ರಾಮದ ಓಕಳಿ ಆಟವಾಡುವರು, ಶನಿವಾರರಂದು ಗ್ರಾಮದ ಮಾರುತಿ ದೇವರಿಗೆ ವಿಶೇಷವಾಗಿ ಪೂಜೆಮಾಡಿ  ಬಸವೇಶ್ವರ ರಥದಲ್ಲಿ ಗೌಡರ ಮನೆಯಿಂದ ಕಳಸಕ್ಕೆ ಪೂಜೆ ಮಾಡಿ ಶ್ರೀ ಬಸವೇಶ್ವರ ರಥದಲ್ಲಿ ಬಸವೇಶ್ವರ ಮೂರ್ತಿ ಹಾಗು ಕಳಸವನ್ನು ಕೂಡಿಸುವರು ನಂತರ ಯುವಕರು ಸೇರಿ ಕಡೆ ಓಕಳಿ ಆಡುವರು ತದನಂತರ ಮಾರುತಿದೇವರ ಪಲಕ್ಕಿಯೊಂದಿಗೆ ಓಕಳಿ ಹೊಂಡಕ್ಕೆ ಪ್ರದಕ್ಷಿಣೆ ಮಾಡಿ  ಶ್ರೀ ಬಸವೆೀಶ್ವರರ ಗದ್ದುಗೆಯವರೆಗೆ ಹೋಗಿ ಮಹಾಮಂಗಳಾರತಿ ಮಾಡಿ ಪಲಕ್ಕಿಉತ್ಸವ ಮರಳಿ ಮಾರುತಿ ದೇವಸ್ಥಾನಕ್ಕೆ ಬರುತ್ತದೆ. ಸೋಮವಾರ ದಿ.29 ರಂದು ಶ್ರೀ ಬಸವೆೀಶ್ವರರ ಗದ್ದುಗೆಗೆ ಮಹಾ ಅಭಿಷೆೀಕ ಜರುಗುವದು.

- Advertisement -

ಸಂಜೆ 5 ಗಂಟೆಗೆ ಶ್ರೀ ಬಸವೆೀಶ್ವರ ದೇವಸ್ಥಾನದಿಂದ ರಥೋತ್ಸವವು ಮಾರುತಿ ದೇವಸ್ಥಾನದವರೆಗೆ ಜರುಗಿ ಮಹಾ ಮಂಗಳಾರುತಿ ಸಲ್ಲಿಸಿ ಮರಳಿ ಶ್ರೀ ಬಸವೇಶ್ವರಕ್ಕೆ ತಲಪುವುದು ಈ ಸಮಯದಲ್ಲಿ ಸುಮಂಗಲಿಯರ ಆರತಿ I’ve ವಾದ್ಯ ಮೇಳ ಕುದರಿ ಕುಣಿತ ಹಾಗೂ ರೂಪಕಗಳು ಪ್ರದರ್ಶನ ಜರಗುವದು ಎಂದು ಜಾತ್ರಾ ಕಮೀಟಿಯವರು ತಿಳಿಸಿರುತ್ತಾರೆ.

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group