Maharshi Valmiki Information in Kannada- ಮಹರ್ಷಿ ವಾಲ್ಮೀಕಿ

0
544

ಕೂಜತಂ ರಾಮ‌ರಾಮೇತಿ
ಮಧುರಾಂ ಮಧುರಾಕ್ಷರಾಮ್
ಆರುಹ್ಯ ಕವಿತಾ ಶಾಖಾಂ
ವಂದೇ ವಾಲ್ಮೀಕಿ ಕೋಕಿಲಂ.

ತ್ರಿಕಾಲ ಧ್ಯಾನಿ ವಾಲ್ಮೀಕಿ ಮಹರ್ಷಿಯು ಕ್ರಿಸ್ತಪೂರ್ವ 500ನೇ ಇಸವಿಯಲ್ಲಿ ಜನಿಸಿದರು. ಅಶ್ವಿಜ ಮಾಸದ ಹುಣ್ಣಿಮೆಯ ದಿನ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ.

ವಾಲ್ಮೀಕಿಯು ಬ್ರಹ್ಮರ್ಷಿ ಪ್ರಚೇತ ಎಂಬುವವರ ಮಗ. ಇವರ ಮೊದಲ ಹೆಸರು ರತ್ನಾಕರ. ಇವರನ್ನು ಬಿಲ್ ,(ಬೇಡ ಸಮುದಾಯದ) ಜನರು ಅಪಹರಿಸಿದರು. ಅವರು ಕುಲಕಸುಬಾದ ಲೂಟಿ ದರೋಡೆ ಮಾಡುವವರಾಗಿದ್ದರಿಂದ ರತ್ನಾಕರನು ಅದನ್ನೇ ಮಾಡತೊಡಗಿದ.

ಅವನು ಕ್ರಮೇಣ ಸಂಪೂರ್ಣ ಬದಲಾಗಿ ಅತ್ಯಂತ ದೊಡ್ಡ ಲೂಟಿಕೋರನಾದ. ಹೀಗೆ ಇರಲಾಗಿ ಒಂದು ದಿನ ನಾರದ ಮಹರ್ಷಿಗಳು ಆ ದಾರಿಯಲ್ಲಿ ವಿಹಾರ ಹೋಗಬೇಕಾದರೆ ರತ್ನಾಕರನು ಅವರನ್ನು ತಡೆದು ಹಿಂಸಿಸತೊಡಗಿದ. ಆಗ ನಾರದರು ತಂಬೂರಿ ಮತ್ತು ಪಾದುಕೆ ಬಿಟ್ಟು ನನ್ನಲ್ಲಿ ಏನೂ ಇಲ್ಲ ಎಂದು ತಿಳಿಸಿದರು.

ಆದರೂ ರತ್ನಾಕರನು ಕೇಳಲಿಲ್ಲ ಅವರನ್ನು ಗಿಡವೊಂದಕ್ಕೆ ಕಟ್ಟಿ ಪಿಡಿಸ ತೊಡಗಿದ. ನಾರದರು ಇರುವುದು ಗೇಣು ಹೊಟ್ಟೆಏಕೆ ಇಷ್ಟೆಲ್ಲ ಮಾಡುತ್ತಿರುವೆ ಎಂದು ಕೇಳಲಾಗಿ, ರತ್ನಾಕರನು ನನ್ನ ಹೆಂಡತಿ ಮಕ್ಕಳಿಗೆ ಜೀವನ ನಿರ್ವಹಣೆಗೆ ಮಾಡುತ್ತಿರುವೆ ಎಂದ. ಆಗ ನಾರದರು ನೀನು ಮಾಡುತ್ತಿರುವುದು ಘೋರ ಪಾಪ ಈ ಪಾಪದಲ್ಲಿ ನಿನ್ನ ಹೆಂಡತಿ ಮಗ ಪಾಲು ತೆಗೆದುಕೊಳ್ಳುವರೋ? ಎಂದು ಪ್ರಶ್ನಿಸಿದಾಗ ರತ್ನಾಕರ ಒಂದು ಕ್ಷಣ ಸುಮ್ಮನಾಗಿ ಕೇಳಿ ಬರುವೆ ಎಂದು ಮನೆ ಕಡೆಗೆ ನಡೆದ.

ಮನೆಯಲ್ಲಿ ಹೆಂಡತಿ ಮತ್ತು ಮಗನನ್ನು ನನ್ನ ಪಾಪದಲ್ಲಿ ನೀವು ಪಾಲು ತೆಗೆದುಕೊಳ್ಳುತ್ತೀರಾ ಎಂದ, ಆಗ ಹೆಂಡತಿ ಗಂಡನಾದವನು ಹೆಂಡತಿ ಮಕ್ಕಳನ್ನು ಕಾಪಾಡುವುದು ಕುಟುಂಬ ಧರ್ಮ. ಆದ್ದರಿಂದ ನಾವು ನಿನ್ನ ಪಾಪದಲ್ಲಿ ಪಾಲು ತೆಗೆದುಕೊಳ್ಳಲಾರೆವು ಎಂದು ಹೇಳಿದಳು. ಈ ಮಾತನ್ನು ಕೇಳಿದ ರತ್ನಾಕರ ಚಿಂತಿತನಾದ ಹಾಗೂ ನಾರದರ ಬಳಿಬಂದು ನಡೆದ ವಿಷಯ ತಿಳಿಸಿದ. ನಾರದರು ನೀನು ಮಾಡುವ ಈ ಪಾಪ ಕೃತ್ಯದ ಮಧ್ಯ ಒಂದು ಕ್ಷಣವಾದರೂ ಭಗವಂತನನ್ನು ನೆನೆದಿದ್ದರೆ ನಿನ್ನ ಪಾಪ ಪರಿಹಾರವಾಗಬಹುದಿತ್ತು ,ಇನ್ನು ಮುಂದೆಯಾದರೂ ಅವನ ಧ್ಯಾನ ಮಾಡು ಎಂದು ರಾಮ ನಾಮ ಜಪ ಹೇಳಿದರು.

ಆದರೆ ರತ್ನಾಕರನಿಗೆ ರಾಮಯನ್ನಲು ಬರಲಿಲ್ಲ, ನಾರದ ಮಹರ್ಷಿಗಳು ಎದುರಿಗಿದ್ದ ಮರವನ್ನು ತೋರಿಸಿ ಇದೇನು ಎಂದರು, ಆಗ ರತ್ನಾಕರನ್ನು ಮರ ಎಂದ ನಾರದರು ಬಿಟ್ಟುಬಿಡದೆ ಅದನ್ನೇ ಜಪಿಸು ಎಂದಾಗ ಅವನು ಅದೇ ಗಿಡದ ಬುಡದಲ್ಲಿ ಕುಳಿತು ಅನೇಕ ದಿನ ವರ್ಷಗಳವರೆಗೆ ರಾಮ ನಾಮ ಜಪಿಸಿದ.

ಸುಮಾರು ವರ್ಷಗಳ ನಂತರ ಮತ್ತೆ ನಾರದರು ಅದೇ ದಾರಿಯಲ್ಲಿ ವಿಹಾರ ಮಾಡುತ್ತಿರಬೇಕಾದರೆ ಅವರಿಗೆ ರಾಮ ರಾಮ ಎನ್ನುವ ದಿವ್ಯ ಮಂತ್ರ ಕೇಳಿಸುತ್ತದೆ. ತ್ರಿಕಾಲ ಜ್ಞಾನಿಯಾದ ನಾರದರು ಹಿಂದೆ ನಡ ಘಟನೆ ನೆನಪಿಸಿಕೊಂಡು ಬಂದು ನೋಡಲಾಗಿ ದೊಡ್ಡ ಹುತ್ತವನ್ನು ಗಿಡದ ಬುಡದಲ್ಲಿ ಕಾಣಿಸಿತು. ರಾಮಜಪ ಕೇಳಿಬರುವುದ ಕಂಡು ಅವರಿಗೆ ನೆನಪಾಗಲು ರತ್ನಾಕರ ಎಂದರು.

ರತ್ನಾಕರನು ಹುತ್ತದಿಂದ ಹೊರಬಂದು ನಾರದರ ಕಾಲಿಗೆರಗಿದ. ವಾಲ್ಮೀಕ ಎಂದರೆ ಹುತ್ತ, ಹುತ್ತವನ್ನು ಪ್ರವೇಶಿಸಿದವನು, ಅಂತರಾತ್ಮವನ್ನು ಪ್ರವೇಶಿಸಿದವನು ಎಂದು ಅರ್ಥ ನೀಡುವ ಹೆಸರೇ ವಾಲ್ಮೀಕಿ.

ವಾಲ್ಮೀಕಿಯು ಮಹಾತಪಸ್ವಿಯಾಗಿ ಸಂಚಾರಿಯಾದರು ನಂತರದ ದಿನಗಳಲ್ಲಿ ನಾರದ ಮಹರ್ಷಿಗಳ ಮಾರ್ಗದರ್ಶನದಂತೆ ಕ್ರಿಸ್ತಪೂರ್ವ ಒಂದರಿಂದ ಐದನೇ ಶತಮಾನದಲ್ಲಿ ರಾಮಾಯಣವನ್ನು ರಚಿಸಿದರು.೨೪೦೦೦ ಶ್ಲೋಕಗಳನ್ನು ಹೊಂದಿದ ಸಂಸ್ಕೃತ ಭಾಷೆಯ ಶ್ರೇಷ್ಠ ಕೃತಿ ಇದಾಗಿದೆ.

ಏಳು ಕಾಂಡಗಳಿಂದ ಕೂಡಿದೆ. ಬ್ರಹ್ಮ ಜ್ಞಾನದ ವಾಲ್ಮೀಕಿ ಮಹರ್ಷಿ ರಚಿತ ಈ ರಾಮಾಯಣದಲ್ಲಿ ರಾಮಾಯಣದ ರಚನೆಗೆ ಕಾರಣವಾದ ಕ್ರೌಂಚಪಕ್ಷಿಗಳ ವಿಹಾರ ಪ್ರಣಯ ವಿರಹದ ಕಥೆಯ ಉಲ್ಲೇಖವಿದೆ. ವಾಲ್ಮೀಕಿ ರಚಿತ ರಾಮಾಯಣದಲ್ಲಿ ಅಯೋಧ್ಯೆಯ ಸೂರ್ಯವಂಶದ ರಾಜ ರಾಮ, ಮಡದಿ ಸೀತೆಯ ಅಪಹರಿಸಿದ ಲಂಕೆಯ ರಾಜ ರಾವಣನ ಸಂಹಾರ ಕುರಿತ ಕಥಾವರ್ಣನೆ ಇದೆ.

ರಾಮ ಸೀತೆಯರ ಮಕ್ಕಳಾದ ಲವ ಮತ್ತು ಕುಶರ ಪ್ರಶ್ನೆಯಿಂದ ಪ್ರಚಲಿತಕ್ಕೆ ಬಂದು ನಮ್ಮ ಭವ್ಯ ಭಾರತದ ಕಲಾ ಸಂಸ್ಕೃತಿಯ ಆಳವಾದಶ ಅಧ್ಯಾತ್ಮಿಕ ಅಧ್ಯಯನ ಪ್ರಚುರಪಡಿಸಿದೆ. ರಾಮಾಯಣವು ಸಂಸ್ಕೃತ ಕಾವ್ಯ ಶ್ಲೋಕ, ಛಂದಸ್ಸಿನಿಂದಾಗಿ ಬಹಳ ಪ್ರಭಾವ ಬೀರಿದೆ 16ನೇ ಶತಮಾನದ ತುಳಸಿದಾಸರು 13ನೇ ಶತಮಾನದ ತಮಿಳು ಕವಿ ಕಂಬ 20ನೇ ಶತಮಾನದ ರಾಷ್ಟ್ರಕವಿ ಕುವೆಂಪು ಮೊದಲಾದವರು ಪ್ರಭಾವಿತಗೊಂಡ ಶ್ರೇಷ್ಠರು.

ಮಹರ್ಷಿ ವಾಲ್ಮೀಕಿ ಹೇಳಿದ ಹಲವು ವಿಚಾರಗಳು ಇಂದಿನ ನಮ್ಮ ಸಾಮಾಜಿಕ ಜೀವನದಲ್ಲಿ ಪ್ರಸ್ತುತವೆನಿಸಿವೆ. ಕುಟುಂಬ ಸಖ್ಯ, ಸಂಸಾರಿಕ ಸಂಬಂಧ ಪರಿಸ್ತ್ರಿ ವ್ಯಾಮೋಹ, ಮಹಿಳಾ ನಿಂದನೆ, ಭ್ರಾತೃತ್ವ ಭಾವ, ನಿತ್ಯವೂ ನಮಗೆ ಸರಿ ತಪ್ಪುಗಳ ಮಾರ್ಗ ತಿಳಿಸಿವೆ. ಇಂದು ನಾವು ಅನುಸರಿಸಬೇಕಾಗಿರುವುದು ಗ್ರಂಥ ರೂಪದಲ್ಲಿದೆ. ಅದನ್ನು ಕಾರ್ಯರೂಪಕ್ಕೆ ತಂದು ಜೀವನ ಸಾಕ್ಷಾತ್ಕಾರ ಗೊಳಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.

ತ್ರಿಕಾಲ ಧ್ಯಾನಿ ಮಹರ್ಷಿ ವಾಲ್ಮೀಕಿ ಯು ಹೇಳಿದ ಹಲವು ವಿಚಾರಗಳು ನಿತ್ಯ ಮನುಷ್ಯನ ಜೀವನದಲ್ಲಿ ಕರೆಯದೆ ಬರುವ ಇಬ್ಬರು ಅತಿಥಿಗಳಿದ್ದಾರೆ ಅವರು ದುಃಖ ಮತ್ತು ವಿಪತ್ತು. ಇವರಿಬ್ಬರನ್ನು ನೀನು ಸಮಾನ ಮನಸ್ಸಿನಿಂದ ಎದುರುಗೊಂಡರೆ ನಿನ್ನ ಜೀವನಕ್ಕೆ ಯಾವುದೇ ಆಪತ್ತು ಇರದು ಎಂದು ಎಚ್ಚರಿಸಿದ್ದಾರೆ.

ಜೀವನದಲ್ಲಿ ಸದಾ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ, ಇದ್ದ ಪರಿಸ್ಥಿತಿಗಳಲ್ಲಿಯೇ ಸಂತೋಷವನ್ನು ಅತಿಯಾದ ಸಂಘರ್ಷ ಸಲ್ಲದು. ಅತಿಯಾದ ಸಂಘರ್ಷದಿಂದ ಶ್ರೀಗಂಧದಲ್ಲಿಯೂ ಬೆಂಕಿ ಕಾಣಿಸಿಕೊಳ್ಳುವಂತೆ ಬುದ್ಧಿವಂತ ಮನುಷ್ಯರಲ್ಲಿ ಕೋಪ ಹುಟ್ಟಿಕೊಳ್ಳುತ್ತದೆ.

ಆದ್ದರಿಂದ ಕೋಪವನ್ನು ನಿಗ್ರಹಿಸುವ ಸೈಯಮ್ಮ ನಿಮ್ಮಲ್ಲಿರಲಿ ಎಂದಿದ್ದಾರೆ. ಮಾಯೆಯು ವಿದ್ಯಾ ಮತ್ತು ಅವಿದ್ಯ ಎಂಬ ಎರಡು ವಿಧದಲ್ಲಿದೆ. ಸತ್ಯವು ಎಲ್ಲ ಕಾರ್ಯ ಗಳಿಗೆ ಪ್ರೇರಣೆ ಮತ್ತು ಕ್ರಿಯೆಗೆ ಆಧಾರ. ಆದ್ದರಿಂದ ಜೀವನದ ದಾರಿಯಲ್ಲಿ ಸತ್ಯಮಾರ್ಗದಿಂದ ನಡೆಯೊಂದು ಎಚ್ಚರಿಸಿದ್ದಾರೆ. ಪ್ರತೀಕಾಯಕ್ಕೂ ಆತ್ಮವು ಸಾಕ್ಷಿ ಭೂತನಾಗಿರುತ್ತಾನೆ. ಆತ್ಮನಿಗೆ ಮೋಸ ಮಾಡಿಕೊಳ್ಳಬೇಡ, ಆತ್ಮವನ್ನು ನಿನ್ನ ನಿಯಂತ್ರಣದಲ್ಲಿಟ್ಟುಕೊಂಡು ಕಾರ್ಯ ಮಾಡು. ಆತ್ಮ ನಿಗ್ರಹವೇ ಯಶಸ್ಸಿನ ಗುಟ್ಟು ಎಂದು ತಿಳಿಸಿದ್ದಾರೆ.