ಸಿಂದಗಿ: ಪಟ್ಟಣದ ವೈಷ್ಣವಿ ವ್ಯಸನ ಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ವ್ಯಕ್ತಿವೋರ್ವ ಮೃತಪಟ್ಟ ಆಘಾತಕಾರಿ ಘಟನೆ. ಮೃತನ ಕುಟುಂಬಸ್ಥರು ವ್ಯಸನ ಮುಕ್ತ ಕೆಂದ್ರದ ಮುಂದೆ ಶವವಿಟ್ಟು ಆಕ್ರೋಶ ಹೊರ ಹಾಕಿ ಈ ಕೆಂದ್ರವನ್ನು ನಡೆಸುತ್ತಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಸಿಂದಗಿ ನಗರದಲ್ಲಿ ನಡೆದಿದೆ.
ಹೌದು ಡಾ. ಮಂಜುಳಾ ಸಿದ್ದು ಮುರುಡಿ ಎಂಬುವವರಿಗೆ ಸೇರಿದ ವೈಷ್ಣವಿ ವ್ಯಸನ ಮುಕ್ತ ಕೆಂದ್ರದಲ್ಲಿ ಸ್ಥಳಿಯ ಹುಚ್ಚಪ್ಪ( ಮುದಕಪ್ಪ) ಡೋಣೂರ ವಯಾ ೫೦ ಎಂಬಾತ ಮೃತಪಟ್ಟ ದುರ್ವೈವಿ ಎಂದು ಗುರುತಿಸಲಾಗಿದೆ. ಮೃತನ ಕುಟುಂಬಸ್ತರು ವ್ಯಸನ ಬಿಡಿಸಲು ಒಂದು ತಿಂಗಳ ಹಿಂದೆ ಈ ಕೇಂದ್ರಕ್ಕೆ ಮೂರು ತಿಂಗಳ ರೂ ೭೫ ಸಾವಿರ ಮುಂಗಡ ನೀಡಿ ಹುಚ್ಚಪ್ಪ ಡೋನೂರ ಇವರನ್ನು ದಾಖಲು ಮಾಡಿದ್ದು ಒಂದು ತಿಂಗಳ ನಂತರ ಕೇಂದ್ರಕ್ಕೆ ಬೇಟಿ ನೀಡಿದ ನಂತರ ಆ ವ್ಯಕ್ತಿಗೆ ವ್ಯಸನ ಬಿಡುವಂತೆ ಕೇಂದ್ರ ಮುಖ್ಯಸ್ಥರು ಹಿಗ್ಗಾಮುಗ್ಗಿಯಾಗಿ ಥಳಿಸಿದ ಘಟನೆ ಬೆಳಕಿಗೆ ಬಂದ ಹಿನ್ನೆಲೆ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಿಗ್ಗೆ ಮೃತ ಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅನಧಿಕೃತ ಕೇಂದ್ರ; ಹಲವು ವರ್ಷಗಳಿಂದ ನಡೆಸುತ್ತ ಬರಲಾಗಿದ್ದ ಈ ವೈಷ್ಣವಿ ವ್ಯಸನ ಮುಕ್ತ ಕೆಂದ್ರವು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದಾರೆ ಎನ್ನುವುದು ಕಳೆದ ಸಪ್ಟಂಬರ ೨೫ ಕ್ಕೆ ಜಿಲ್ಲಾ ವೈದ್ಯಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ವೈಧ್ಯಾಧಿಕಾರಿಗಳ ಬೇಟಿ ನೀಡಿ ಅನಧಿಕೃತ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನೋಟೀಸ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳೀಯ ಆಸ್ಪತ್ರೆಯ ಸ್ಥಳಕ್ಕೆ ಪಿಎಸ್‌ಐ ಆರೀಫ ಮುಶಾಪಿರ, ಟಿಎಚ್‌ಓ ಡಾ. ಶಶಿಕಾಂತ ಬಾಗೇವಾಡಿ, ಆರೋಗ್ಯಾಧಿಕಾರಿ ಡಾ. ಮಹಾಂಶ ದೇಶಮುಖ ಭೇಟಿ ನೀಡಿ ವ್ಯಸನ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಕೆಲವರಿಗೆ ಚಿಕಿತ್ಸೆ ನೀಡಿ ವ್ಯಸನ ಮುಕ್ತ ಕೇಂದ್ರಕ್ಕೆ ಬೀಗ ಜಡಿದರು.
ಈ ವ್ಯಸನ ಮುಕ್ತ ಕೇಂದ್ರದಲ್ಲಿ ಕಳೆದ ತಿಂಗಳು ದಾಖಲಾಗಿದ್ದ ಹುಚ್ಚಪ್ಪ ಡೋನೂರ ಎಂಬುವವರು ಇಂದು ಮೃತಪಟ್ಟಿದ್ದು ಈ ಕೇಂದ್ರವನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ ಎನ್ನುವುದು ಅಧಿಕಾರಿಗಳ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಈ ಕೇಂದ್ರ ಮುಚ್ಚಲು ಆದೇಶ ನೀಡಲಾಗುವುದು
ಕರೆಪ್ಪ ಬೆಳ್ಳಿ
ತಹಶೀಲ್ದಾರರು ಸಿಂದಗಿ.
; ವೈಷ್ಣವಿ ವ್ಯಸನ ಮುಕ್ತ ಕೇಂದ್ರದ ಬಗ್ಗೆ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ವೈಧ್ಯಾಧಿಕಾರಿಗಳ ಆದೇಶದ ಮೇರೆಗೆ ಕಳೆದ ಸೆಪ್ಟಂಬರ ತಿಂಗಳಲ್ಲಿ ಭೇಟಿ ನೀಡಲಾಗಿದ್ದು ಕೇಂದ್ರ ನಡೆಸುವ ವ್ಯಕ್ತಿಗಳು ನಮಗೆ ನೇರವಾಗಿ ದೊರಕಿಲ್ಲ ದೂರವಾಣಿ ಮೂಲಕ ಸಂಪರ್ಕಿಸಲಾಗಿದ್ದರೂ ಕೂಡಾ ಸ್ಪಂದನೆ ದೊರೆತ್ತಿಲ್ಲ ಆ ಕಾರಣಕ್ಕೆ ಕೇಂದ್ರವನ್ನು ಬಂದ್ ಮಾಡುವಂತೆ ವಾಟ್ಸಾಪನಲ್ಲಿ ನೋಟೀಸ ನೀಡಲಾಗಿದ್ದು ಈ ಕೇಂದ್ರಕ್ಕೆ ಬೀಗ್ ಹಾಕಲಾಗುವುದು.
ಶಶಿಕಾಂತ ಬಾಗೇವಾಡಿ
ತಾಲೂಕು ಆರೋಗ್ಯಾಧಿಕಾರಿಗಳು ಸಿಂದಗಿ
; ಕುಡಿತದ ಚಟ ಬಿಡಿಸಲು ಈ ಕೇಂದ್ರ ದಾಖಲಿಸಿದರೆ ಪೊಲೀಸ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿದ್ದು ಮುರಡಿ ಅವರ ಪತ್ನಿ ಮಂಜುಳಾ ಜಂಬಗಿ ಅವರು ನಡೆಸುತ್ತಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ಕುಡಿಯುವದನ್ನು ಬಿಡಿಸುವ ನೆಪದಲ್ಲಿ ತಾನೆ ಸಿದ್ದು ಪೊಲೀಸನೇ ಕುಡಿದು ಬಂದ ಮನಬಂದಂತೆ ಥಳಿಸಿದ್ದಾನೆ ಅದಕ್ಕೆ ನಮ್ಮ ಸಂಬಂಧಿ ಹುಚ್ಚಪ್ಪನನ್ನು ಸರಕಾರಿ ಆಸ್ಪತ್ರೆಯಲ್ಲಿ ಎಂಎಲ್ಸಿ ಮಾಡಿದ್ದು ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಚಿಕಿತ್ಸೆ ಆಗದೆ ಇಂದು ಸತ್ತಿದ್ದಾನೆ ಈಗ ಎಫ್‌ಐ ಆರ್ ದಾಖಲಿಸುತ್ತೇವೆ ಅಲ್ಲಿಂದ ಚಿಕಿತ್ಸೆ ಪಡೆದ ಅನುಭವ ಕೆಲವು ವ್ಯಕ್ತಿಗಳು ಕೂಡಾ ಹೇಳುತ್ತಿದ್ದು ಈ ಕೆಂದ್ರಕ್ಕೆ ಯಾವ ಇಲಾಖೆ ಪರವಾನಿಗೆ ನೀಡಿದ್ದಾರೆ ಇದನ್ನು ಕೂಡಲೇ ಮುಟ್ಟುಗೋಲು ಹಾಕಬೇಕು
ಚಂದ್ರಕಾಂತ ದೊಡಮನಿ, ಶ್ರೀಶೈಲ ಬೂದಿಹಾಳ
ಮೃತನ ಸಂಬಂಧಿಗಳು

