ಮೂಡಲಗಿ – ಜ್ಯೂನಿಯರ್ ಮಿಸ್ಟರ್ ಬೀನ್ ಖ್ಯಾತಿಯ, ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ಮೂಡಲಗಿಯ ಕಲಾವಿದ ಮಂಜುನಾಥ ರೇಳೆಕರ ಈಗ ಪ್ಯಾನ್ ಇಂಡಿಯಾ ಚಿತ್ರವಾದ ‘ದಲಿತ ದೇವೋಭವ’ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕಥೆಯೊಂದಿಗೆ ಎಮ್ ಸಿ ಹೇಮಂತ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ನೀಲೇಶ್ ಆರ್. ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಚ್ಚಿನ್ ಬಸ್ರೂರ ಅವರ ಸಂಗೀತ ಇದೆ. ಚಿತ್ರವು ಆರು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಉದಯೋನ್ಮುಖ ಕಲಾವಿದನಾಗಿರುವ ಮಂಜುನಾಥ ಇಂತಹ ಚಿತ್ರಗಳಲ್ಲಿ ನಟಿಸುತ್ತಿರುವುದು ಕಲಾಭಿಮಾನಿಗಳಿಗೆ ಸಂತಸ ತಂದಿದೆ.