ಕಲ್ಲೋಳಿ ಪಟ್ಟಣದಲ್ಲಿ ೭೮ ನೇ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

ಬಲಾಢ್ಯ ಭಾರತ ನಿರ್ಮಾಣಕ್ಕೆ ಮುಂದಾಗಲು ವಿದ್ಯಾರ್ಥಿಗಳಿಗೆ ಕರೆ

ಮೂಡಲಗಿ- ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಮಹಾನ್ ಪುರುಷರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅಂತಹ ಆದರ್ಶ ಪುರುಷರ ಆದರ್ಶಗಳನ್ನು ಬೆಳೆಸಿಕೊಂಡು ಬಲಾಢ್ಯ ಭಾರತ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು.

ತಾಲೂಕಿನ ಕಲ್ಲೋಳ್ಳಿ ಪಟ್ಟಣದ ಗಾಂಧೀ ಮೈದಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಭವ್ಯ ಭಾರತದ ಶಿಲ್ಪಿಗಳು ಎಂದು ಅವರು ಹೇಳಿದರು.

ಬ್ರಿಟಿಷ್‌ರ ಮುಷ್ಟಿಯಲ್ಲಿದ್ದ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರು ತಮ್ಮ ಜೀವವನ್ನು ತ್ಯಾಗ ಮಾಡಿ ನಮ್ಮನ್ನು ಸ್ವತಂತ್ರಗೊಳಿಸಿದ್ದಾರೆ. ಅವರುಗಳು ತ್ಯಾಗ, ಬಲಿದಾನಗಳಿಂದ ನಾವಿಂದು ಸ್ವತಂತ್ರ ವ್ಯಕ್ತಿಗಳಾಗಿದ್ದೇವೆ. ಮಹಾತ್ಮಾ ಗಾಂಧಿ, ಸುಭಾಸ ಚಂದ್ರ ಬೋಸ್, ಪಂ. ಜವಾಹರಲಾಲ್ ನೆಹರು, ಭಗತ್ ಸಿಂಗ್, ಡಾ. ಭೀಮರಾವ್ ಅಂಬೇಡ್ಕರ್,ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ಸಾವಿರಾರು ಮಹಾನ್ ಪುರುಷರು ಇದಕ್ಕಾಗಿ ತಮ್ಮ ಅಮೂಲ್ಯ ಜೀವವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ. ದೇಶಪ್ರೇಮಿ ಹೋರಾಟಗಾರರನ್ನು ಯಾವುದೇ ಒಂದು ಜನಾಂಗಕ್ಕೆ ಸೀಮಿತ ಮಾಡದೇ ಅವರನ್ನು ಪ್ರತಿ ದಿನವೂ ಸ್ಮರಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸತತ ಮೂರನೇ ಬಾರಿಗೆ ಈ ದೇಶದ ಅಧಿಕಾರ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಮೋದಿಯವರಿಂದಾಗಿ ನಮ್ಮ ಭಾರತವು ವಿಶ್ವ ಮಾನ್ಯವಾಗಿ ರಾರಾಜಿಸುತ್ತಿದೆ. ನಮ್ಮ ದೇಶವು ಏಕತೆ- ಸಾಮರಸ್ಯವನ್ನು ಇಡೀ ಜಗತ್ತಿಗೆ ತೋರಿಸಿಕೊಡುತ್ತಿದೆ. ಮೋದಿಯವರಂತಹ ಅಪ್ಪಟ ದೇಶ ಭಕ್ತ ದೊರಕಿರುವುದು ನಮ್ಮೆಲ್ಲರ ಪುಣ್ಯವೆಂದು ಅವರು ತಿಳಿಸಿದರು.

ಇದೇ ಶೈಕ್ಷಣಿಕ ವರ್ಷದಿಂದ ಆರಂಭವಾಗಿರುವ ಸರ್ಕಾರಿ ಪ್ರೌಢಶಾಲೆ ಮತ್ತು ಪಿ.ಎಂ.ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ನಾಮ ಫಲಕಗಳಿಗೆ ಚಾಲನೆ ನೀಡಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಗಾಂಧೀ ಮೈದಾನದಲ್ಲಿ ಏರ್ಪಡಿಸಿದ್ದ ಧ್ವಜಾರೋಹಣವನ್ನು ನೆರವೇರಿಸಿದರು.
ವೇದಿಕೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಬಸವರಾಜ ಯಾದಗೂಡ, ಪರಪ್ಪ ಕಡಾಡಿ, ಉಮೇಶ ಬೂದಿಹಾಳ, ದತ್ತು ಕಲಾಲ, ಅಶೋಕ ಮಕ್ಕಳಗೇರಿ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಶೀಲ್ದಾರ, ಮಲ್ಲಪ್ಪ ಖಾನಾಪೂರ, ಪಟ್ಟಣ ಪಂಚಾಯತಿ ಸದಸ್ಯರುಗಳು, ಪ.ಪಂ.ಮುಖ್ಯಾಧಿಕಾರಿ ಪರಶುರಾಮ ದೇವಮಾನೆ, ಮುಖಂಡರು, ಅಧಿಕಾರಿಗಳು, ಮಾಜಿ ಸೈನಿಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group