ಓತಿಹಾಳ ಪಿ ಕೆ ಪಿ ಎಸ್ ಸಂಘದಲ್ಲಿ ಹಣ ಅಪರಾ ತಪರಾ – ಪ್ರಕರಣ ದಾಖಲು

0
535
ತಾಲೂಕಿನ ಓತಿಹಾಳ ಪಿಕೆಪಿಎಸ್ ನಲ್ಲಿ ಹಣ ಅವ್ಯವಹಾರ ನಡೆದಿದೆ ಆರೋಪಿಸಿರುವ ಚೆನ್ನರಡ್ಡಿ  ಭೀಮನಗೌಡ ಡಂಬಳ  ಆರೋಪ ಮಾಡಿದ್ದಾರೆ.

ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗೊಬ್ಬರ ಮತ್ತು ಪಿಗ್ಮಿ ಹಣ ಮುಂಗಡ ಅಂತಾ ಖರ್ಚು ಹಾಕಿ ಹಣ ಅಪರಾ ತಪರಾ ( ಅವ್ಯವಹಾರ ) ಮಾಡಿದ್ದಾರೆ ಎಂದು  ಆರೋಪಿಸಿ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ಮುಖಂಡ ಚೆನ್ನರಡ್ಡಿ  ಭೀಮನಗೌಡ ಡಂಬಳ ಅವರು ಈ ಬಗ್ಗೆ ಮಾಹಿತಿ ನೀಡಿ, ಸನ್ 2019- 2020 ನೇ ಸಾಲಿನ ಸಂಘದ ಶಾಸನಬದ್ದ ಲೆಕ್ಕ ಪರಿಶೋಧನ (ಅಡಿಟ್) ವರದಿ ಪ್ರಕಾರ ಸಂಘದ ಹಣ ದುರುಪಯೋಗ ಪಡಿಸಿ ಕೊಂಡು ಸಂಘದ ಮಾಜಿ ಮುಖ್ಯ ನಿರ್ವಾಹಣ ಅಧಿಕಾರಿ  ಅಂಬಣ್ಣ ಶಂಕ್ರಪ್ಪ ಹೂಗಾರ ಇವರ ವಿರುದ್ದ ಕ್ರಿಮಿನಲ್ ಪ್ರಕರಣ ಮಾನ್ಯ ದಿವಾಣಿ ನ್ಯಾಯಾಧೀಶರು ಮತ್ತು ಸಿ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ಕಲಂ 406, 409,417,420, ಐ ಪಿ ಸಿ ಪ್ರಕಾರವಾಗಿ  ಕ್ರಿಮಿನಲ್ ದಾಖಲು ಮಾಡಲಾಗಿದೆ ಅಲ್ಲದೆ ಕೆಲ ವರ್ಷಗಳ ಹಿಂದೆ ಇಂತಹ ಪ್ರಮಾದ ಸೃಷ್ಟಿಯಾಗಿತ್ತು ಆದರೆ ಸರಕಾರದ ಸಾಲ ಮನ್ನಾ ಆಗಿದ್ದರಿಂದ ಆ ಪ್ರಕರಣ ಬಯಲಿಗೆ ಬರಲಿಲ್ಲ ಎಂದು ತಿಳಿಸಿದರು.

ಮಾಜಿ ಮುಖ್ಯ ನಿರ್ವಾಹಣಾಧಿಕಾರಿಯವರು ಗೊಬ್ಬರ ಹಾಗೂ ಪಿಗ್ಮಿ ಹಣ ಸಂಗ್ರಹದಲ್ಲಿ ಆಗಿರುವ ಹಣ ಅಪರಾ- ತಪರಾ ಮಾಡಿ ಸಂಘಕ್ಕೆ 3,64,194-00 ಗಳಷ್ಟು ಸಂಘದ ಹಣವನ್ನು ತಮ್ಮ ಸ್ವಂತಕ್ಕೆ ಬಳಕ್ಕೆ ಮಾಡಿ ಕೊಂಡು ಸಂಘವು ನಷ್ಟದಲ್ಲಿದೆ ಎಂದು ಅವರು ಆರೋಪಿಸಿದರು.

ಸದರಿ ಸಂಘದಲ್ಲಿ ಲವಕುಶ ಭಾಗಪ್ಪ ಕರ್ನಾಳ ಇವರ ಹೆಸರಿನಲ್ಲಿ  ಚೆಕ್ ನಗದೀಕರಣದಲ್ಲಿ  ಸುಮಾರು ಹಣ 44,100-00 ರೂಪಾಯಿಗಳು  ಅಪರಾ ತಪರಾ ಮಾಡಿರುವ ಮಾಜಿ ನೌಕರ ಅಂಬಣ್ಣ ಶಂ. ಹೂಗಾರ ವಿರುದ್ದ ಕ್ರಿಮಿನಲ್ ಪಿರ್ಯಾದಿ ದಾಖಲಿಸಲಾಗಿದೆ ಎಂದು ವರದಿಗಾರರ ಮುಂದೆ ವಿಷಯ ತಿಳಿಸಿದರು.

ಸಿಂದಗಿ ಪೊಲೀಸ ಠಾಣೆಯ ಅಧಿಕಾರಿ ನಿಂಗಣ್ಣ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಶಿವಾನಂದ ಸಾಲಿಮಠ, ಮಂಜು ಮಣ್ಣೂರ. ಸಾಹೇಬಣ್ಣ ನಾಟಿಕಾರ.  ಶಾಂತಗೌಡ ಬಿರಾದಾರ, ಸಾಹೇಬಣ್ಣ ಗೋಲಗೇರಿ, ಮಲ್ಲು ನಾಕೆತ್ತಿನ, ಬಸು ಜುಮನಾಳ ಇದ್ದರು.