ಈ ಉಸಿರು ಇರುವವರೆಗೂ ಕನ್ನಡ ತಾಯಿ ಸೇವೆ ಮಾಡೋಣ – ಪ್ರವೀಣ ಶೆಟ್ಟಿ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಸಿಂದಗಿ: ಈ ಭವ್ಯ ಭಾರತ ದೇಶಕ್ಕೆ ನಮ್ಮ ನಾಡಿನ ಸೂಫಿ ಸಂತರು ಕವಿಗಳು,ಸಾಹಿತಿಗಳ ಕೊಡುಗೆ ಅಪಾರವಾದದ್ದು, ದೇಶದ ಪ್ರತಿ ಮೂಲೆಯಲ್ಲಿ ಕನ್ನಡಿಗರು ಒಂದು ಹೊಸ ಇತಿಹಾಸ ನಿರ್ಮಿಸಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ ಹೇಳಿದರು.

ತಾಲೂಕಿನ ಆಲಮೇಲ ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಘಟಕ ಹಾಗೂ ಕರವೇ(ಪ್ರವೀಣ ಶೆಟ್ಟಿ ಬಣ)ದ ಸಹಯೋಗದಲ್ಲಿ ಆಲಮೇಲ ಕನ್ನಡ ಉತ್ಸವ 2021 ಹಾಗೂ ದಿ.ಪುನೀತ್ ರಾಜಕುಮಾರರಿಗೆ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ನಾಡು ನುಡಿ ಜಲದ ರಕ್ಷಣೆಯ ಜೊತೆಗೆ ಹಗಲಿರಳು ಕನ್ನಡಾಂಬೆಯ ಸೇವೆಗೆ ಈ ಕನ್ನಡಿಗರು ಸದಾ ಸಿದ್ಧರಾಗಿದ್ದೇವೆ. ಈ ದೇಶದ ಯಾವುದೇ ಮೂಲೆಯಲ್ಲಿನ ಕನ್ನಡಿಗರಿಗೆ ಅನ್ಯಾಯವಾದರೆ ಅದನ್ನು ನಾವು ಸಹಿಸಿಕೊಳ್ಳುವದಿಲ್ಲ. ಇಂಥ ಪುಣ್ಯ ಭೂಮಿಯ ಮೇಲೆ ಹುಟ್ಟಿರುವ ನಾವುಗಳು ಬಹಳ ಪುಣ್ಯವಂತರು. ಅದಕ್ಕಾಗಿ ಈ ಭೂಮಿಯ ಮೇಲೆ ಉಸಿರು ಇರುವವರೆಗೆ ನಾವೆಲ್ಲ ಕನ್ನಡಿಗರು ತಾಯಿ ಭುವನೇಶ್ವರಿಯ ಸೇವೆ ಮಾಡೋಣ ಎಂದರು.

ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸೈಯದ ದೇವರಮನಿ ಮಾತನಾಡಿ, ಕನ್ನಡ ನಾಡಿನ ಹೆಮ್ಮೆಯ ಪುತ್ರ ವರನಟ ದಿ. ಪುನೀತ್ ರಾಜಕುಮಾರರು ಹೃದಯಘಾತದಿಂದ ನಿಧನರಾಗಿದ್ದು ನಮ್ಮೆಲ್ಲ ಕನ್ನಡಿಗರಿಗೆ ತುಂಬಾ ನೋವು ತಂದಿದೆ, ಅವರು ತಮ್ಮ ಜೀವನದ ಕೊನೆಯ ಉಸಿರಿರುವವರೆಗೆ ತೆರೆಮರೆಯಲ್ಲಿಯೇ ಇದ್ದುಕೊಂಡು ಹಲವಾರು ಗೋಶಾಲೆ, ನೂರಾರು ಅನಾಥ ಮಕ್ಕಳಿಗೆ ಅನಾಥ ಆಶ್ರಮಗಳು ತೆರೆದು ಅವರ ಬಾಳಿಗೆ ದಾರಿ ದೀಪವಾಗಿದ್ದನ್ನು ಅವರ ಮರಣದ ನಂತರ ಈ ನಾಡಿನ ಜನತೆಗೆ ಗೊತ್ತಾಗಿದೆ, ಅದಕ್ಕಾಗಿ ಹುಟ್ಟು ಆಕಸ್ಮಿಕ,ಸಾವು ಖಚಿತವಾಗಿದ್ದು,ಈ ಹುಟ್ಟು ಸಾವಿನ ಮಧ್ಯದಲ್ಲಿ ಇರುವ ಸಮಯವನ್ನು ದಾನ ಧರ್ಮಗಳ ಜೊತೆಗೆ ಪರೋಪಕಾರ ಮಾಡುವಂಥ ಕೆಲಸವಾಗಬೇಕು,ಇದರ ಜೊತೆಗೆ ಇಂದಿನ ಯುವಕರು ದಿ.ಪುನೀತ್ ರಾಜಕುಮಾರರ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಗುರು ಸಂಸ್ಥಾನ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯರು, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ, ಆಲಮೇಲ ಬ್ಲಾಕ್ ಸಮಿತಿ ಅಧ್ಯಕ್ಷ ಅಯೂಬ ದೇವರಮನಿ, ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಆನಂದ ಭೂಸನೂರ, ಯುವ ಮುಖಂಡ ನಜೀರ್ ಆಲಗೂರ, ಪತ್ರಕರ್ತರಾದ ರಮೇಶ ಕತ್ತಿ, ಅವಧೂತ ಬಂಡಗರ, ಮಡಿವಾಳ ಇಂಡಿ, ಅಬ್ದುಲಗನಿ ದೇವರಮನಿ, ಸುನೀಲ ಉಪ್ಪಿನ, ಸಿದ್ದು ಬಿರಾದಾರ, ವಿದ್ಯಾಧರ ಮಳಗಿ, ಸಿದ್ದು ಕೇರಿಗೊಂಡ, ಲಾಲಸಾಬ ಜಮಾದಾರ, ಕರವೇ ಜಿಲ್ಲಾ ಉಪಾಧ್ಯಕ್ಷ ಈರಣ್ಣಾ ಕಲ್ಲೂರ ಹಾಗೂ ಪದಾಧಿಕಾರಿಗಳು ಇದ್ದರು.

ನಂತರ ಕಾರ್ಯಕ್ರಮದಲ್ಲಿ ಶ್ರೀ ಗುರು ಪುಟ್ಟರಾಜ ಮೆಲೋಡಿ ಆರ್ಕೆಸ್ಟ್ರಾ ಇವರಿಂದ ಸರಿಗಮಪದ ದ ಖ್ಯಾತ ಗಾಯಕಿ ಸುಹಾನಾ ಸೈಯದ, ಹುಬ್ಬಳ್ಳಿಯ ಸುಧಾರಾಣಿ, ಹಾಸ್ಯ ಕಲಾವಿದ ಗೋಪಾಲ ಹೂಗಾರ, ನಿಲೇಶ್ ಇಂಡಿ, ಟಿಕ್ ಟಾಕ್ ಕಲಾವಿದ ನಿಂಗರಾಜ್ ಸಿಂಗಾಡಿ, ಭಾಗೇಶ ಹೂಗಾರ ಇವರಿಂದ ರಸಮಂಜರಿ ಕಾರ್ಯಕ್ರಮ ಜರುಗಿದವು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!