spot_img
spot_img

ಮಹಿಳಾ ದಿನಾಚರಣೆಯ ಅಂಗವಾಗಿ ‘ಬಹುಭಾಷಾ ಕಾವ್ಯೋತ್ಸವ

Must Read

- Advertisement -

ಬೆಳಗಾವಿ: ಸ್ತ್ರೀ ಸಂವೇದನೆಯುಳ್ಳ ಕಾವ್ಯವು ಪ್ರಸ್ತುತ ಸಾಹಿತ್ಯ ವಲಯದಲ್ಲಿ ಹೆಚ್ಚು ಚರ್ಚೆಗೊಳಗಾಗುತ್ತಿದೆ. ಸ್ತ್ರೀ ಸಂವೇದನೆಗೆ ಭಾಷೆಗಳ ಗಡಿ ಇರುವುದಿಲ್ಲ. ಭಾರತೀಯ ಎಲ್ಲ ಭಾಷೆಗಳಲ್ಲೂ ಸ್ತ್ರೀ ಸಂವೇದನೆ ಇಂದಿನ ಕಾವ್ಯದ ಮೂಲ ಧಾತುವಾಗಿದೆ. ಸ್ತ್ರೀಯನ್ನು ಎರಡನೆಯ ದರ್ಜೆಯಲ್ಲಿ ನೋಡುವ ದೃಷ್ಟಿಕೋನವು ಬದಲಾಗಬೇಕಾಗಿದೆ. ಮಹಿಳೆಯೆಂದು ಸ್ತ್ರೀಯನ್ನು ನೋಡುವುದಕ್ಕಿಂತ ಮುಖ್ಯವಾಗಿ ವ್ಯಕ್ತಿತ್ವದ ಮೂಲಕ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾದ ಸಂದರ್ಭದಲ್ಲಿ ಬರಬೇಕಾಗಿದೆ. ಹೀಗೆ ಕವಿತೆಗಳು ಸ್ತ್ರೀ ಸಂವೇದನೆಯ ಪ್ರಮೇಯವನ್ನು ಕೇಂದ್ರವಾಗಿಟ್ಟುಕೊಡು ಇಂದು ಕವಿತೆಗಳು ನಿರೂಪಿತವಾದವು. ಸ್ತ್ರೀಯ ಸಾಮರ್ಥ್ಯ ಸಂವರ್ಧನೆಯ ಭಾಗವಾಗಿ ಇಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ‘ಬಹುಭಾಷಾ ಕಾವ್ಯೋತ್ಸವ’ದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾವ್ಯೋತ್ಸವದಲ್ಲಿ ಆರು ಭಾಷೆಗಳ ಮೂವತ್ತಕ್ಕೂ ಹೆಚ್ಚು ಕವಿಗಳು ಪಾಲ್ಗೊಂಡಿದ್ದರು. ಕನ್ನಡ, ಇಂಗ್ಲೀಷ, ಮರಾಠಿ, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಕವಿತೆಗಳು ಹರಿದು ಬಂದವು. ಸ್ತ್ರೀ ಸಂವೇದನೆಯ ವಿಭಿನ್ನ ನೆಲೆಗಳ ಮೇಲೆ ಕವಿತೆಗಳು ಬೆಳಕು ಚೆಲ್ಲಿದವು. ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಪ್ರೊ. ಎಸ್. ಬಿ. ಆಕಾಶ, ಭಾಷಾ ನಿಕಾಯದ ಡೀನರಾದ ಪ್ರೊ. ವಿ. ಎಫ್. ನಾಗಣ್ಣವರ, ಮರಾಠಿ ವಿಭಾಗದ ಪ್ರೊ. ಸಿ. ಎನ್. ವಾಘಮಾರೆ, ಪ್ರೊ. ಮನೀಷಾ ನೇಸರಕರ, ಡಾ. ಮೈಜುದ್ದೀನ ಮುತಾವಲಿ ಹಾಗೂ ಡಾ. ಸಂಜಯ ಕಾಂಬಳೆ, ಅಪರಾಧಶಾಸ್ತೃ ವಿಭಾಗದ ಪ್ರೊ. ರಿಯಾಜಅಹ್ಮದ ಮನಗೂಳಿ, ಶ್ರೀ. ಚಂದ್ರಶೇಖರ ಎಸ್. ವಿ., ಸಮಾಜ ಕಾರ್ಯ ವಿಭಾಗದ ಪ್ರೊ. ಅಶೋಕ ಡಿಸೋಜಾ, ಕನ್ನಡ ವಿಭಾಗದ ಪ್ರೊ. ಗುಂಡಣ್ಣ ಕಲಬುರ್ಗಿ, ಡಾ. ಗಜಾನನ ನಾಯ್ಕ, ಶ್ರೀ. ಫಕೀರಪ್ಪ ಸೊಗಲದ, ಇಂಗ್ಲೀಷ ವಿಭಾಗದ ಡಾ. ಮಧುಶ್ರೀ ಕಳ್ಳಿಮನಿ ಹಾಗೂ ಡಾ. ಪೂಜಾ ಹಲ್ಯಾಳ, ಸಂಶೋಧನಾರ್ಥಿಗಳಾದ ಶ್ರೀಮತಿ. ಶ್ರೀದೇವಿ ಭಾವಿ, ಶ್ರೀ. ಸಂತೋಷ ನಾಯಿಕ, ಸ್ನಾತಕೋತ್ತರ ಕನ್ನಡ ವಿಭಾಗದ ಚೈತ್ರಾ ಪಾಟೀಲ ಹಾಗೂ ಮಲ್ಲಿಕಾರ್ಜುನ ಪೂಜಾರಿ, ಮರಾಠಿ ವಿಭಾಗದ ವಿದ್ಯಾರ್ಥಿಗಳಾದ ಸುವರ್ಣಾ ಪಾಟೀಲ, ಪೂಜಾ ಕಾಂಬಳೆ, ಸುಲೋಚನಾ ಜಾಧವ, ಇಂಗ್ಲೀಷ ವಿಭಾಗದ ಅಂಬರೀಷ, ಸುಶ್ಮಿತಾ, ಪ್ರವೀಣ, ಅರ್ಥಶಾಸ್ತ್ರ ವಿಭಾಗದ ಅನಿಲ ತಳ್ಳಿ ಅವರು ತಮ್ಮ ಕವನ ವಾಚಿಸಿದರು.

ಬಹುಭಾಷಾ ಕಾವ್ಯೋತ್ಸವದ ಜವಾಬ್ದಾರಿಯನ್ನು ಹೊತ್ತಿದ್ದ ಡಾ. ಶೋಭಾ ನಾಯಕ ಅವರು ತಮ್ಮ ಕಾವ್ಯಪ್ರತಿಭೆಯ ಮೂಲಕ ಕವಿತೆಯನ್ನು ವಾಚಿಸಿದರು. ಮಾತ್ರವಲ್ಲ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅವರ ಇತ್ತೀಚಿನ ಹೊಸ ಸಂವೇದನೆಯನ್ನೊಳಗೊಂಡು ಕರ್ನಾಟಕದಲ್ಲಿ ಅತೀ ಹೆಚ್ಚು ಚರ್ಚೆಗೊಳಗಾದ ‘ಶಯ್ಯಾಗ್ರಹದ ಸುದ್ದಿಗಳು’ ಕವನ ಸಂಕಲನಕ್ಕೆ ಹಲವು ಪ್ರಶಸ್ತಿಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ವಿಜ್ಞಾನ ನಿಕಾಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ವಿ. ಎಸ್. ಶಿಗೇಹಳ್ಳಿ, ಕನ್ನಡ ವಿಭಾಗದ ಅಧ್ಯಾಪಕರುಗಳಾದ ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಮಹೇಶ ಗಾಜಪ್ಪನವರ, ಡಾ. ಪಿ. ನಾಗರಾಜ ಕಾವ್ಯೋತ್ಸವದಲ್ಲಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ವಿಭಾಗಗಗಳ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group