ಮುನವಳ್ಳಿ: ಸಮೀಪದ ಸಿಂದೋಗಿ ಗ್ರಾಮ ಪಂಚಾಯತಿ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ೬೫ ಲಕ್ಷ ರೂಪಾಯಿಗಳಲ್ಲಿ ಭೋಜನಾಲಯ,ಆಟದ ಮೈದಾನ,ಸಂಚಾರಪಥ,ಆವರಣ ಗೋಡೆ,ಮಹಾದ್ವಾರ ಗೇಟ್,ಶೌಚಾಲಯ,ಮಳೆ ನೀರು ಕೊಯ್ಲು ಇಂಗುಗುಂಡಿ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತಿಕ್. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್.ವ್ಹಿ.ದರ್ಶನ್. ಸಹಾಯಕ ನಿರ್ದೇಶಕರು ತಾಲೂಕ ಪಂಚಾಯತಿ ಸವದತ್ತಿಯ ಸಂಗನಗೌಡ ಹಂದ್ರಾಳ ಸೇರಿದಂತೆ ಅಧಿಕಾರಿಗಳ ತಂಡ ಪ್ರಗತಿ ಪರಿಶೀಲನೆ ನಡೆಸಿತು.
ಕಾಮಗಾರಿಗಳ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ರಮೇಶ ಬೆಡಸೂರ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಬಾರ್ಕಿ,ಮಹಾದೇವ ಕಾಮನ್ನವರ ಪ್ರೌಢಶಾಲಾ ಶಿಕ್ಷಕ ವಿಠ್ಠಲ ದೇವರಡ್ಡಿ ಉಪಸ್ಥಿತರಿದ್ದರು.ಕಾಮಗಾರಿಗಳನ್ನು ವೀಕ್ಷಿಸಿದ ಅಧಿಕಾರಿಗಳ ತಂಡ ಪ್ರಶಂಸೆ ವ್ಯಕ್ತಪಡಿಸುವ ಜೊತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು.