ಬಸವಣ್ಣನ ಕರ್ಮಭೂಮಿಯಲ್ಲಿ ಅಮಾನವೀಯ ಘಟನೆ
ಬೀದರ – ಕೊರೆಯುವ ಚಳಿಯಲ್ಲಿ ಕೇವಲ ಒಂದು ದಿನದ ಹಸುಗೂಸನ್ನು ಎಸೆದು ಹೋಗಿರುವ ಕಟುಕ ತಾಯಿಯಿಂದಾಗಿ ಜಗತ್ತು ನೋಡುವ ಮುಂಚೆಯೇ ಅಸುನೀಗಿರುವ ಅಮಾನವೀಯ ಘಟನೆ ಭಾಲ್ಕಿ ತಾಲೂಕಿನ ರುದನೂರ್ ಗ್ರಾಮದಲ್ಲಿ ನಡೆದಿದೆ.
ಹತ್ತ ತಾಯಿಯೇ ಹಸುಗೂಸನ್ನು ಮಧ್ಯರಾತ್ರಿಯಲ್ಲಿ ಎಸೆದು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೋಡುಗರ ಹೃದಯ ಕಲಕುತ್ತಿದೆ. ಬೆಳ್ಳಂಬೆಳಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಪ್ರತ್ಯಕ್ಷವಾಗಿದೆ ಹಸುಗೂಸು.
ನಸುಕಿನ ಜಾವ ಅಥವಾ ಮಧ್ಯರಾತ್ರಿ ಗಂಡು ಮಗುವನ್ನು ತಾಯಿ ಬಿಟ್ಟುಹೋಗಿದ್ದು ವಿಪರೀತ ಚಳಿಗೆ ಮಗು ಪ್ರಾಣ ಬಿಟ್ಟಿದೆ
ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ, ಹಸುಗೂಸು ಬಿಟ್ಟು ಹೋದವರ ಕುರಿತು ಪರಿಶೀಲನೆ ನಡೆಸಿದರು
ವರದಿ : ನಂದಕುಮಾರ ಕರಂಜೆ, ಬೀದರ