ಮೂಡಲಗಿ: ಇತ್ತೀಚೆಗೆ ಗೋಕಾಕದಲ್ಲಿ ಜರುಗಿದ ೨೦ನೇ ಸತೀಶ ಶುಗರ್ ಅವಾರ್ಡ ಕಾರ್ಯಕ್ರಮದಲ್ಲಿ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆಯ ೧೦ನೇ ತರಗತಿ ವಿದ್ಯಾರ್ಥಿನಿ ಕು. ಸುಪ್ರಿಯಾ ಮಲ್ಲಿಕಾರ್ಜುನ ಮಠಪತಿ ಹೈಸ್ಕೂಲ್ ವಿಭಾಗದ ಜನಪದ ಮತ್ತು ಚಲನಚಿತ್ರ ಗೀತಗಾಯನದ ಎರಡು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.
ಇವಳನ್ನು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಪಾಟೀಲ, ಆಡಳಿತ ಮಂಡಳಿಯ ಸರ್ವಸದಸ್ಯರು, ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ, ಮುಖ್ಯೋಪಾಧ್ಯಾಯ ಎ.ಆರ್.ಪಾಟೀಲ, ಸಹ ಶಿಕ್ಷಕರಾದ ಆರ್.ಪಿ.ಬಾಗೋಜಿ, ಪಿ.ಜಿ.ಮಾನೆ, ಎಚ್.ಎ.ಚಿಗಡೊಳ್ಳಿ, ಶ್ರೀಮತಿ ಎಸ್.ಎಸ್.ಖಾನಾಪೂರ, ಶ್ರೀಮತಿ ಎಸ್.ಜಿ.ರಾಮದುರ್ಗ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.