ಸಿಂದಗಿ: ಭಾರತೀಯ ಸಂಗೀತ ಪರಂಪರೆಗೆ ಪೂಜನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಅಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ ಎಂದು ಆಲಮೇಲದ ಡಾ. ಇಂದುಮತಿ ಸಂಗೀತ ಪಾಠ ಶಾಲೆ ಸಂಚಾಲಕ ವೇತಾಳ ಜೋಶಿ ಹೇಳಿದರು.
ಪಟ್ಟಣದ ಸ್ವರ ಸಂಗೀತ ಪಾಠಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳಗದ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಗೀತ ಗಾಯನ ಸ್ಪರ್ಧೆ ಹಾಗೂ ಮಕ್ಕಳ ದಿನೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ ಎಂದರು.
ಕಾವ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ, ಸಂಗೀತವು ಬದುಕಿನ ಒತ್ತಡವನ್ನು ನಿವಾರಿಸಲು ಒಂದು ಉತ್ತಮ ಮಾರ್ಗವಾಗಿದೆ. ಇದು ಶಾಲಾ ಪಠ್ಯೇತರ ಚಟುವಟಿಕೆಗಳನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತವೆ ಮತ್ತು ಮನಸ್ಥಿತಿಯನ್ನು ಸುಧಾರಿಸುತ್ತದೆ. ಸಂಗೀತ ಆಲಿಸುವುದರಿಂದ ಕೇಂದ್ರೀಕೃತ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಕಸಾಪ ನಿಕಟ ಪೂರ್ವ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಗೀತಕ್ಕೆ ಅನೇಕ ಮಹನೀಯರು ತಮ್ಮ ಸರ್ವಸ್ವವನ್ನೆ ಧಾರೆ ಎರೆದಿದ್ದಾರೆ. ಸಂಗೀತವು ಮನುಷ್ಯನ ಜೀವನದಲ್ಲಿ ಎಂತಹ ತೊಂದರೆಯಿದ್ದರು ಕೂಡಾ ನಿವಾರಿಸುವಂಥ ಶಕ್ತಿ ಸಂಗೀತಕ್ಕಿದೆ ಎಂದರು.
ವಿಜಯಪುರದ ಗಾಯಕಿ ಶಕುಂತಲಾ ಹಿರೇಮಠ, ಕ್ರೀಡಾಧಿಕಾರಿ ಶಿವಕುಮಾರ ಕಲ್ಲೂರ, ಸ್ವರ ಸಂಗೀತ ಪಾಠಶಾಲೆ ಸಂಚಾಲಕ ಎಂ.ಬಿ ಅಲ್ದಿ, ಶಕುಂತಲಾ ಎಸ್ ಹಿರೇಮಠ ವೇದಿಕೆ ಮೇಲೆ ಇದ್ದರು.
ಡ.ಪ್ರಕಾಶ, ಮಹಾದೇವಿ ಹಿರೇಮಠ, ಸಭಿಯಾ ಮರ್ತುರ, ಪರಶುರಾಮ ಪೂಜಾರಿ, ಎಸ್.ಆರ್.ಪಾಟೀಲ, ವಿಜಯಲಕ್ಷ್ಮಿ ಮಠ, ಆರ್.ವಾಯ್ ಪರೀಟ, ಮಹಾಂತೇಶ ನಾಗೋಜಿ, ವೀಣಾ ನಾಯಕ, ಎಸ್.ಎಸ್ ಹಚಡದ. ಪ್ರಶಾಂತ ಕೆಂಬಾವಿ, ಸಿದ್ದು ಜೈನಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಸ್ವಾಗತಿಸಿದರು. ಬಸವರಾಜ ಅಗಸರ ನಿರೂಪಿಸಿದರು. ಸಾಹೇಬಣ್ಣ ದೇವರಮನಿ ವಂದಿಸಿದರು.