ಸಿಂದಗಿ ಅಭಿವೃದ್ಧಿ ನನ್ನ ಗುರಿ – ಅಶೋಕ ಮನಗೂಳಿ

Must Read

ಅಶೋಕ.ಮನಗೂಳಿ ಅವರ ಪ್ರಥಮ ವರ್ಷದ ವಿಜಯೋತ್ಸವ

ಸಿಂದಗಿ; ಸಿಂದಗಿ ಮತಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರು ಶಾಸಕರಾಗಿ ಒಂದು ವರ್ಷ ಪೂರೈಸಿದ ನಿಮಿತ್ತವಾಗಿ ಗೋಲಗೇರಿ ಹಾಗೂ ಸಾಸಾಬಾಳ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಅಶೋಕ.ಮನಗೂಳಿ ಅವರಿಗೆ ಸಿಹಿ ತಿನಿಸಿ ವಿಜಯೋತ್ಸವ  ಆಚರಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಅವರು ಸಿಂದಗಿ ಮತಕ್ಷೇತ್ರದ ಸರ್ವಾಂಗೀಣ   ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು,ಅದನ್ನು ಈಡೇರಿಸಿಯೇ ತೀರುತ್ತೇನೆ ಎಂದು ಅಭಿಮತ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಬಸವರಾಜ ಮಾರಲಭಾವಿ, ವಕೀಲರಾದ ದಾನಪ್ಪಗೌಡ ಚನಗೊಂಡ, ಸಿಂದಗಿ ಭೂ ನ್ಯಾಯ ಮಂಡಳಿ ಸದಸ್ಯರಾದ ಮುದಿಗೌಡ ಬಿರಾದಾರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಮಡಿವಾಳ ನಾಯ್ಕೋಡಿ, ಮಂಜುನಾಥ ಯಂಕಂಚಿ, ನೀಲಕಂಠ ಚಲವಾದಿ, ನಬೀಸಾಬ ಕೋರಬು, ಬಾಬು ಜಾಲವಾದಿ, ಖಾದರ್ ಹಳಿಮನಿ, ಲಕ್ಷ್ಮಣ ಕಲಾಲ, ರಾಜು ಹೊಳಕುಂದಿ, ಸಿದ್ದಣ್ಣ ಬಿರಾದಾರ, ಧರ್ಮು ರಾಠೋಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group