ಬಂಡಾಯವೇಳುವ ಸೂಚನೆ ನೀಡಿದ ನಾಗಮಾರಪಳ್ಳಿ

0
806

ಬೀದರ – ನಾನು ಯಾವಾಗೂ ಯಾರಿಗೂ ಕೆಟ್ಟದು ಬಯಸಿಲ್ಲ. ನಮ್ಮ ತಂದೆ ಗುರುಪಾದಪ್ಪ ನಾಗಮಾರಪಳ್ಳಿ ಕೂಡ ಯಾರಿಗೂ ಕೆಟ್ಟದು ಮಾಡಿಲ್ಲ. ನಾವು ಎಲ್ಲರೂ ಒಂದಾಗಿ ಹೋಗೋಣ. ಟಿಕೆಟ್ ಬಗ್ಗೆ ಚರ್ಚೆ ಮಾಡೋಣ ಎಲ್ಲರೂ ನಾಳೆ ಬನ್ನಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ಆಕಾಂಕ್ಷಿ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಬೀದರ ಉತ್ತರ ಕ್ಷೇತ್ರಕ್ಕೆ ಬಿಜೆಪಿ ಹೈಕಮಾಂಡ್ ಈಶ್ವರ್ ಸಿಂಗ್ ಠಾಕೂರ್ ಗೆ ಟಿಕೆಟ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸೂರ್ಯಕಾಂತ್ ನಾಗಮಾರಪ್ಪಳ್ಳಿ ನಿರ್ಧಾರ ಮಾಡಿದ್ದು ಶುಕ್ರವಾರ ಬೆಂಬಲಿಗರ ಸಭೆ ಕರೆದಿದ್ದಾರೆ.

ನಾಳೆಯ ಸಭೆ ಬಳಿಕ ಬಿಜೆಪಿಗೆ ರಾಜೀನಾಮೆ ನೀಡಿ ಬಂಡಾಯ ಅಭ್ಯರ್ಥಿಯಾಗಿ ಬೀದರ್ ಉತ್ತರ ಕ್ಷೇತ್ರಕ್ಕೆ  ಸೂರ್ಯಕಾಂತ್ ನಾಗಮಾರಪ್ಪಳ್ಳಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಒಳ್ಳೆಯದು ಮಾಡಿದವರಿಗೆ ಒಳ್ಳೆಯದಾಗಲಿ. ನನಗೆ ಕೆಟ್ಟದ್ದು ಮಾಡಿದವರಿಗೂ ಒಳ್ಳೆಯದಾಗಲಿ ಎಂದು ಪರೋಕ್ಷವಾಗಿ ಟಿಕೆಟ್ ತಪ್ಪಿಸಿದ ನಾಯಕರ ವಿರುದ್ಧ ಸೂರ್ಯಕಾಂತ್ ಕಿಡಿ ಕಾರಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ