ಸಿಂದಗಿ: ನಲಿ- ಕಲಿ ತರಗತಿಗಳಲ್ಲಿ ಹಾಡು ಚಿತ್ರ ಕಲೆ ಮತ್ತು ಆಟಗಳ ಮೂಲಕ ಮಕ್ಕಳಿಗೆ ವಿದ್ಯಾಭ್ಯಾಸ ತಿಳಿಸುವ ಮೂಲಕ ಅವರನ್ನು ಹೊಸತನದಲ್ಲಿ ತೊಡಗಿಸಿ ಉತ್ತಮ ಕಲಿಕೆಗೆ ಅವರ ಸಾಧನೆ ಗುರುತಿಸಿ ಅವರಿಗೆ ನೈತಿಕ ಶಿಕ್ಷಣ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಮನದಲ್ಲಿ ತುಂಬುತ್ತ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅವರ ಪಾತ್ರ ಮೇಲು ಕಾಣಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನೋಳ್ಳಿ. ಗುಬ್ಬೇವಾಡ. ಸುಂಗಠಾಣ ಕ್ಲಸ್ಟರ್ ನಲಿ – ಕಲಿ ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜ್ಞಾನ ನೀಡುವ ಕಾರ್ಯ ನಿರ್ವಹಿಸಲು ನಲಿಕಲಿ ಶಿಕ್ಷಕರ ಪಾತ್ರ ಮಹತ್ವದ್ದು ನಲಿ-ಕಲಿ ಶಿಕ್ಷಣ ಪರಿಪೂರ್ಣ ಶಿಕ್ಷಣ ನಲಿ- ಕಲಿ ತರಗತಿ ಕೊನೆಯಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರು ಸದಾ ಅಧ್ಯಯನ ಶೀಲಾರಾಗಿ ಅವರಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಉತ್ತಮ ಜ್ಞಾನ ತುಂಬುವುದು ಶಿಕ್ಷಕರು ಪಾತ್ರ ದೊಡ್ಡದು. ತರಗತಿ ನಿರ್ವಹಣೆ ಮಾಡುವಾಗ ಎಲ್ಲಾ ಮಕ್ಕಳು ಮೇಲೆ ನಿಗಾ ಇಟ್ಟುಕೊಂಡು ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ಕೊಂಡು ಸಮಚಿತ್ತದಿಂದ ನಲಿ – ಕಲಿ ವಿಧಾನಗಳು ಸರಿಯಾದ ಸಮಯದಲ್ಲಿ ಪರಿಚಯ ಮಾಡಿದ್ದಾಗ ಆ ಮಗುವಿನ ಕಲಿಕೆ ಪೂರಕವಾಗುತ್ತದೆ. ಮಕ್ಕಳ ಮೇಲೆ ಶಿಕ್ಷಕ ಮಮತಕಾರವಾಗಬೇಕು ಅವರನ್ನು ಉತ್ತಮ ಪ್ರಜೆಗಳಾಗಿ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ಶಿಕ್ಷಕರ ಕಾರ್ಯ ನಿರ್ವಹಿಸಲು ನಲಿಕಲಿ ತರಗತಿ ನಿರ್ವಹಣೆ ಉತ್ತಮವಾಗಿದೆ ನಲಿ ಕಲಿ ಶಿಕ್ಷಣ ಹೆಚ್ಚು ಪರಿಣಾಮಕಾರಿಯಾಗಿದೆ ಅದರ ತತ್ವಗಳ ಮೂಲಕ ಶಿಕ್ಷಣ ಕೊಡುವ ಕಾರ್ಯ ನಿರಂತರವಾಗಿ ಹೊಂದಾಣಿಕೆ ಮಾಡಿಕೊಂಡು ಕಲಿಕಾ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯ ರೂಪಕ್ಕೆ ಬರಬೇಕು ಎಂದು ಸಲಹೆ ನೀಡಿದರು.
ವೇದಿಕೆ ಮೇಲೆ ಭೀಮನಗೌಡ ಬಿರಾದಾರ.ಪ್ರಭುಗೌಡ ಏವೂರ, ರಾಜು ಭೂಸನೂರ ಇದ್ದರು. ನಲಿ- ಕಲಿ ಶಿಕ್ಷಕರ ತರಬೇತಿದಾರರಾಗಿ ಶ್ರೀಮತಿ ಸುಮಂಗಲಾ ಕೆಂಭಾವಿ. ಶಿಕ್ಷಕ ಎಲ್ ಆರ್ ಚವ್ಹಾಣ ತರಬೇತಿ ನೀಡಿದರು. ಶಿಕ್ಷಕ ಬಸವರಾಜ ಅಗಸರ ಸ್ವಾಗತಿಸಿ ವಂದಿಸಿದರು