ರಾಷ್ಟ್ರೀಯ ಸರಕಾರಿ ನಿವೃತ್ತ ನೌಕರರ(ಪಿಂಚಣಿದಾರರ) ದಿನಾಚರಣೆ

Must Read

ಬೆಳಗಾವಿ–  ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಬೆಳಗಾವಿ ವತಿಯಿಂದ ದಿ: 21-12-2023 ರಂದು ನಿವೃತ್ತ ನೌಕರರ ಕಛೇರಿಯಲ್ಲಿ ದಿವಂಗತ ಡಿ.ಎಸ್.ನಕ್ಕರ್ ಅವರ  ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪಿಂಚಣಿದಾರರ ದಿನ ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಸ್.ಜಿ.ಸಿದ್ನಾಳ ಅವರು ವಹಿಸಿದ್ದರು. ಬಿ.ಎಸ್.ಚಟ್ಟೇರ್ ಅವರು ಸರ್ವರನ್ನು ಸ್ವಾಗತಿಸಿದರು. 

ಅಧ್ಯಕ್ಷತೆ ವಹಿಸಿದ ಎಸ್.ಜಿ.ಸಿದ್ನಾಳರವರು ಸುಪ್ರೀಮ್ ಕೋರ್ಟ ನ್ಯಾಯಾಧೀಶರಾದ ವಾಯ್.ಬಿ.ಚಂದ್ರಚೂಡ ಇವರ ಮುಂದೆ ದಾವೆ ನಡಿಸಿ 10 ವರ್ಷಗಳ ಕಾಲ ಹೋರಾಡಿ 17-12-1982 ರಂದು ಐತಿಹಾಸಿಕ ತೀರ್ಪು ನೀಡಿ ಮುಂದುವರಿಸಿದರು, ಕಾರಣ ಮಹಾತ್ಮ ಡಿ.ಎಸ್.ನಕ್ಕರ್ ಅವರನ್ನು ಸ್ಮರಿಸಿಕೊಳ್ಳಲು ದಿನಾಚರಣೆಯನ್ನು ಪ್ರತಿವರ್ಷ ಆಚರಿಸುತ್ತೇವೆ ಎಂದರು. ಎಮ್.ಎಸ್. ಮುದಕವಿ ರವರು ಕಾರ್ಯಕ್ರಮ ನಡೆಸಿ ಕೊನೆಯಲ್ಲಿ ವಂದಿಸಿದರು.

ಶಂಕರ ಗುಡಗನಟ್ಟಿ, ಎಸ್.ಬಿ.ಹೊಳೆಯಾಚಿ, ಎಸ್,ಜಿ.ರಜಪೂತ, ಎಸ್.ಪಿ.ಭಜಂತ್ರಿ, ಎಮ್.ವಾಯ್.ಮೆಣಸಿನಕಾಯಿ. ಬಿ.ಬಿ.ಕಮತೆ, ವಾಯ್.ಎನ್.ಶಿಂತ್ರೆ ಮುಂತಾದವರು ಉಪಸ್ಥಿತರಿದ್ದರು.

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group