ಸಿಂದಗಿ: ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ಸಾರುವ, ಹೊಸ ಮತದಾರರನ್ನು ಪ್ರೋತ್ಸಾಹಿಸುವ ಮತ್ತು ಚುನಾವಣಾ ಜಾಗೃತಿ ಮೂಡಿಸುವ ಮಹತ್ವದ ದಿನವಾಗಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶ ನಾಗೇಶ ಕೆ ಮೋಗರೆ ಹೇಳಿದರು.
ಪಟ್ಟಣದ ಹೊರವಲಯದ ಎಲೈಟ್ ಪದವಿ ಪೂರ್ವ ಕಾಲೇಜದಲ್ಲಿ ಭಾರತ ಚುನಾವಣಾ ಆಯೋಗ. ತಾಲೂಕು ಆಡಳಿತ, ತಾಲೂಕ ಪಂಚಾಯತ, ತಾಲೂಕು ಸ್ವೀಪ್ ಸಮಿತಿ ಹಾಗೂ ಎಲೈಟ್ ಪದವಿ ಪೂರ್ವ ಕಾಲೇಜ ಇವರುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರರಂದು 16 ನೇ ರಾಷ್ಟ್ರೀಯ ಮತದಾರರ ದಿನ 2026 ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು ಬದುಕಿದ ಹಾದಿ ಯುವ ಜನತೆಗೆ ನೀಡಿದ ಸ್ಛೂರ್ತಿಯ ಕರೆ ಸಂದೇಶ ಅಳವಡಿಸಿ ಕೊಂಡು ಭಾರತದ ಯುವಕರು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯ ಬೇಕು. ಸತತ ಅಧ್ಯಯನದಲ್ಲಿ ತೊಡಗಿ ಉತ್ತಮ ಆದರ್ಶ ಯುವ ಮತದಾರರಾಗಿ ದೇಶ ಅಭಿವೃದ್ದಿ ಹೊಂದಲು ಯುವಕರ ಪಾತ್ರ ದೊಡ್ಡದಾಗಿ ಕಾಣಬೇಕು ಎಂದರು.
ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿ ಕರೆಪ್ಪ ಬೆಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ 18 ವರ್ಷ ತುಂಬಿದ ಯುವ ಮತದಾರರನ್ನು ಗುರುತಿಸಿ, ಮತದಾರರ ಪಟ್ಟಿಗೆ ಸೇರಿಸಲು ಯುವ ಮತದಾರರು ಜಾಗ್ರತಿ ಮೂಡಿಸಬೇಕು ಎಂದರು.
ಆರ್ ಡಿ ಪಾಟೀಲ ಕಾಲೇಜ ರಾಜ್ಯ ಶಾಸ್ತ್ರ ಉಪನ್ಯಾಸಕ ಎನ್ ಬಿ ಪೂಜಾರಿ ಉಪನ್ಯಾಸ ನೀಡಿ 18 ವರ್ಷ ತುಂಬಿದ ಯುವ ಮತದಾರರು ಯಾವ ಮತದಾರರೂ ಹೊರಗುಳಿಯಬಾರದು ಎಂಬ ಆಶಯದೊಂದಿಗೆ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಕಾರಣ ಯುವ ಮತದಾರರು ತಮ್ಮ ಊರಿನ ಬಿ ಎಲ್ ಓ ಹತ್ತಿರ ತಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಎಲ್ ಸಿ ಆಧಾರ ನಂಬರ್ ಹಾಗೂ ಪಾಲಕರ ಮತದಾರರ ಗುರುತಿನ ಚೀಟಿ ಹಾಗೂ ಭಾವಚಿತ್ರದೊಂದಿಗೆ ಸರಿಯಾದ 6 ನಂಬರ್ ಪಾರ್ಮ ತುಂಬಿ ಮತದಾರರ ಪಟ್ಟಿಗೆ ಸೇರಿಸಲು ಮುಂದಾಗಬೇಕು. ಎಂದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್ ಬಿ ಪಾಟೀಲ ಮಾತನಾಡಿ ಯಾವ ಮತದಾರನೂ ಹೊರಗುಳಿಯಬಾರದು ಎಂಬ ಆಶಯದೊಂದಿಗೆ, ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಇದು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಕರಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿತ್ತುತ್ತದೆ ಎಂದರು.
ಎಲೈಟ್ ಸಂಸ್ಥೆಯ ಅಧ್ಯಕ್ಷ ಮುಸ್ತಪ್ ಅಸಂತಾಪೂರ .ಕಂದಾಯ ಇಲಾಖೆಯ ಇರ್ಫಾನ್ ಚಟ್ಟರಕಿ ಇದ್ದರು.
33 ಸಿಂದಗಿ ವಿಧಾನಸಭಾ ಮತ ಕ್ಷೇತ್ರದ ಮತಗಟ್ಟೆ ಯಲ್ಲಿ ಅತ್ಯುತ್ತಮ ಮತಗಟ್ಟಿ ಮೇಲ್ಪಚಾರಾದ ಆಯ್ ಸಿ ಕುಂಬಾರ ಹಾಗೂ ಬಿ ಎಸ್ ಟಕ್ಕಳಕ್ಕಿ ಹಾಗೂ ಅತ್ಯುತ್ತಮ ಮತಗಟ್ಟಿ ಅಧಿಕಾರಿ ಎಂದು ಕಡ್ಲೇವಾಡ ಪಿ ಟಿ ಬಿ ಎಲ್ ಓ ಗುಂಡಣ್ಣ ಮೋರಟಗಿ . ಯಂಕಂಚಿ ಬಿ ಎಲ್ ಓ ಜಗದೇವಿ ಎಸ್ ಉಪ್ಪಾರ ಅವರಿಗೆ ಅಭಿನಂದನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು. ಉಪನ್ಯಾಸಕ ಎಸ್ ಎನ್ ಕುಂದಗೋಳ ನಿರೂಪಿಸಿ ಸ್ವಾಗತಿಸಿ ವಂದಿಸಿದರು.

