ಮೂಡಲಗಿ: ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಯುವ ದಳ ರಾಷ್ಟ್ರೀಯ ಯುವ ಸ್ವಯಂ ಸೇವಕರ ಅರ್ಜಿ ಆಹ್ವಾನಿಸಿದೆ.
ಭಾರತ ಸರ್ಕಾರದ ವಿವಿಧ ಯೋಜನೆಗಳಲ್ಲಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವ ಅಭಿವೃದ್ಧಿ ಜಾಲದ ಮೂಲಕ (youth networks) ಯುವ ನಾಯಕರಾಗಿ ಹೊರಹೊಮ್ಮಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬಯಸುವ ಯುವಜನರಿಗೆ ಉತ್ತಮ ಅವಕಾಶ. ಯುವಜನರ ಸಾಮರ್ಥ್ಯ ಹಾಗೂ ಶಕ್ತಿಯನ್ನು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗೆ ನಿಯೋಜಿಸುವ ನಿಟ್ಟಿನಲ್ಲಿ ಅಂತಹ ಯುವ ಸಮೂಹವನ್ನು ಭಾರತ ಸರ್ಕಾರವು ಅನ್ವೇಷಿಸುತ್ತದೆ. ಆರೋಗ್ಯ, ಸಾಕ್ಷರತೆ, ನೈರ್ಮಲ್ಯ, ಸಾಮಾಜಿಕ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಇತರೆ ಸಾಮಾಜಿಕ ಚಟುವಟಿಕೆಗಳಿಗೆ ಆಯ್ಕೆಯಾಗುವ ಯುವ ಸಮೂಹವನ್ನು ನಿಯೋಜಿಸಲಾಗುತ್ತದೆ.
ಅರ್ಹತೆ: ಹತ್ತನೇ ತರಗತಿಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಿರುವ, 18 ರಿಂದ 29 ವರ್ಷದ ವಯೋಮಾನದೊಳಗಿನ (01.04.2023ಕ್ಕೆ ಅನ್ವಯವಾಗುವಂತೆ) ಬೆಳಗಾವಿ ಜಿಲ್ಲೆಯ ಯುವಜನರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಯುವಜನರು ಅರ್ಜಿ ಸಲ್ಲಿಸುವಂತಿಲ್ಲ. ಮಾಹೆಯಾನ ಗೌರವ ಧನ ರೂ. 5000/- (ರೂಪಾಯಿ ಐದು ಸಾವಿರ ಮಾತ್ರ)
ಯುವ ಸಂಘದ ಸದಸ್ಯರು, ಭಾರತ್ ಸ್ಕೌಟ್ಸ್ & ಗೈಡ್ಸ್, ಎನ್.ಎಸ್.ಎಸ್, ಎನ್.ಸಿ.ಸಿ. ಭಾರತ್ ಸೇವಾದಳ ಮುಂತಾದವುಗಳಲ್ಲಿ ಸೇವೆ ಸಲ್ಲಿಸಿರುವವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸುವ ಬಗೆ – ಭಾರತ ಸರ್ಕಾರದ ವೆಬ್‍ಸೈಟ್ www.nyks.nic.in ಗೆ ಹೋಗಿ ಪ್ರಸಕ್ತ ಯೋಜನೆಯ ಬಗ್ಗೆ ಸವಿಸ್ತಾರ ಮಾಹಿತಿ ಪಡೆದು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕಡೇ ದಿನಾಂಕ 09-03-2023.
ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಅಧಿಕಾರಿಯನ್ನು ಸಂಪರ್ಕಿಸಬೇಕೇಂದು ಜಿಲ್ಲಾ ಯುವ ಅಧಿಕಾರಿ ನೆಹರು ಯುವ ಕೇಂದ್ರ ಬೆಳಗಾವಿ ಇವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂರ್ಣ ವಿಳಾಸ: ಅಣ್ಣಪೂರ್ಣ ನಿಲಯ, ಫಸ್ಟ್ ಕ್ರಾಸ್ ಮಹಾಂತೇಶ ನಗರ, ಬೆಳಗಾವಿ – 590016 ಕಛೇರಿ ದೂರವಾಣಿ.0831-2453496 ಮೊಬೈಲ್ ನಂ. 9620646488