ಕುಲಗೋಡ – ಕೌಜಲಗಿ- ಬೆಳಗಾವಿಗೆ ನೂತನ ಬಸ್ ಸಂಚಾರ ಆರಂಭ

0
21

ಮೂಡಲಗಿ:- ತಾಲೂಕಿನ ಕುಲಗೋಡ ಹಾಗೂ ಕೌಜಲಗಿ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂ ಚಿಕ್ಕೋಡಿ ವಿಭಾಗೀಯ ಗೋಕಾಕ ಘಟಕದ ವತಿಯಿಂದ ನೂತನವಾಗಿ ಕುಲಗೋಡ ಕೌಜಲಗಿ- ಬೆಳಗಾವಿ ಎರಡು ಬಸ್ಸುಗಳನ್ನು  ಆರಂಭಿಸಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ
ಮತ್ತು ಗೋಕಾಕ ಡಿಪೋದ ವ್ಯವಸ್ಥಾಪಕ ಸುನೀಲ ಹೊನವಾಡ ಈ ಮಾರ್ಗದ ಸಾರಿಗೆ ವ್ಯವಸ್ಥೆ ಕುರಿತು ಆದೇಶ ಹೊರಡಿಸಿದ್ದಾರೆ.

ಕುಲಗೋಡ-ಕೌಜಲಗಿ-ಬೆಳಗಾವಿ ನೂತನ ಬಸ್ಸಿಗೆ ಸಮೀಪದ
ಕುಲಗೋಡ ಗ್ರಾಮದ ಬಸ್ ನಿಲ್ದಾಣದಲ್ಲಿ ಕಬ್ಬು- ತೆಂಗು
ಹೂಮಾಲೆಗಳಿಂದ ಅಲಂಕರಿಸಿ ಗ್ರಾಮದ ಮುಖಂಡರು ಗುರುವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕುಲಗೋಡ ಗ್ರಾಮದ ಮುಖಂಡರು, ಯುವಕರು, ಪ್ರಯಾಣಿಕರು ಇದ್ದರು.

ನೂತನವಾಗಿ ಕುಲಗೋಡ-ಕೌಜಲಗಿ- ಬೆಳಗಾವಿ ೬೧ನೇ ಮಾರ್ಗದ ವೇಗದೂತ ಸಾರಿಗೆ ಮುಂಜಾನೆ ೧೦.೪೫ ಕ್ಕೆ ಕುಲಗೋಡದಿಂದ ಹೊರಟು ಕೌಜಲಗಿ, ಬೆಟಗೇರಿ, ಮಮದಾಪುರ, ಕೊಳವಿ, ಅಂಕಲಗಿ, ಹುದಲಿ
ಮಾರ್ಗದಿಂದ ಬೆಳಗಾವಿಗೆ ಮಧ್ಯಾಹ್ನ ೧ ಗಂಟೆಗೆ ತಲುಪಲಿದ್ದು, ಇದೇ ವಾಹನ ಮರಳಿ ಮಧ್ಯಾಹ್ನ ೧.೩೦ ಕ್ಕೆ ಬೆಳಗಾವಿ ನಗರದಿಂದ ಹೊರಟು ಹುದಲಿ, ಅಂಕಲಗಿ, ಕೊಳವಿ, ಮಮದಾಪುರ, ಕೌಜಲಗಿ ಮೂಲಕ ಕುಲಗೋಡ ಗ್ರಾಮಕ್ಕೆ ಸಾಯಂಕಾಲ ೩.೪೫ ಕ್ಕೆ ತಲುಪಲಿದೆ.

ಇನ್ನೊಂದು ಕುಲಗೋಡ-ಕೌಜಲಗಿ ಬೆಳಗಾವಿ ೬೨ನೇ ಮಾರ್ಗದ ವೇಗದೂತ ಸಾರಿಗೆ ಮುಂಜಾನೆ ೧೧.೧೫ಕ್ಕೆ ಕುಲಗೋಡದಿಂದ ಕೌಜಲಗಿ- ಹುಲಕುಂದ-ಯರಗಟ್ಟಿ-ನೇಸರಗಿ ಮೂಲಕ ಬೆಳಗಾವಿಗೆ ಮಧ್ಯಾಹ್ನ ೧.೩೦ ಕ್ಕೆ ತಲುಪಲಿದ್ದು, ಮರಳಿ ಮಧ್ಯಾಹ್ನ ೨ ಗಂಟೆಗೆ
ಬೆಳಗಾವಿ ನಗರದಿಂದ ನೇಸರಗಿ-ಯರಗಟ್ಟಿ-ಹುಲಕುಂದ-ಕೌಜಲಗಿ ಮೂಲಕ ಕುಲಗೋಡ ಗ್ರಾಮಕ್ಕೆ ಸಾಯಂಕಾಲ ೪:೧೫ಕ್ಕೆ ತಲುಪಲಿದ್ದು ಕುಲಗೋಡ-ಕೌಜಲಗಿ ಭಾಗದ ಪ್ರಯಾಣಿಕರು ನೂತನ ಸಾರಿಗೆ ವ್ಯವಸ್ಥೆಯನ್ನು
ಸದುಪಯೋಗಪಡಿಸಿಕೊಳ್ಳಬೇಕೆಂದು ಕುಲಗೋಡ ಸಾರಿಗೆ
ನಿಯಂತ್ರಕ ಎ.ಬಿ. ಜಮಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here