ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪತ್ತೆಯಾದ ಅವಶೇಷಗಳು.
ಬೀದರ – ಹಿಂದೂ ಸಮಾವೇಶದ ಹಿನ್ನೆಲೆ ಅಡುಗೆ ಕಾರ್ಯಕ್ಕೆ ಜಾಗ ಸ್ವಚ್ಚಗೊಳಿಸುವಾಗ ಭವಾನಿ ದೇವಸ್ಥಾನದ ಹಿಂದುಗಡೆ ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಉಂಟಾಗಿದೆ.
ಭವಾನಿ ದೇಗುಲದ ಹಿಂಭಾಗದಲ್ಲಿ ಶಿವಲಿಂಗ, ನಾಗ ಸರ್ಪ, ಶಿಲಾಶಾಸನ ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ, ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಗ್ರಾಮದಲ್ಲಿ ಇನ್ನಷ್ಟು ಶಿಲಾಶಾಸನಗಳು, ಮೂರ್ತಿಗಳು ಪತ್ತೆಯಾಗುವ ಶಂಕೆಯಿದ್ದು ಇನ್ನೂ ಹೆಚ್ಚಿನ ಸಂಶೋಧನೆಗೆ ಒತ್ತಾಯಿಸಲಾಗುತ್ತಿದೆ.
ಈ ಹಿಂದೆ ಸುಮಾರು 7-8 ವರ್ಷಗಳ ಹಿಂದೆ ಗ್ರಾಮದಲ್ಲಿ ವಿಷ್ಣುವಿನ ವಿಗ್ರಹ, ಕಾಳಿಕಾ ಮಾತಾ ವಿಗ್ರಹಗಳು ಪತ್ತೆಯಾಗಿದ್ದವು. ಗ್ರಾಮದಲ್ಲಿ 108 ದೇವಸ್ಥಾನಗಳು ಇರುವ ಪ್ರತೀತಿ, ನೆಲ ಅಗೆಯುವಾಗ ಅಲ್ಲಲ್ಲಿ ಪತ್ತೆಯಾಗ್ತಿವೆ ಪುರಾತನ ಶಿಲ್ಪಕಲೆಗಳು, ವಿಗ್ರಹಗಳು.ಈಗಾಗಲೇ ಗ್ರಾಮದ ಮಧ್ಯ ಭಾಗದಲ್ಲಿದೆ ಕಲ್ಯಾಣಿ ಚಾಳುಕ್ಯರ ಕಟ್ಟಿಸಿದ ಐತಿಹಾಸಿಕ ಶಿವನ ದೇವಸ್ಥಾನ.
ಇದಲ್ಲದೆ ನೂತನ ಕಟ್ಟಡ, ಮನೆ ನಿರ್ಮಾಣ ಸಮಯದಲ್ಲಿ ವಿಗ್ರಹಗಳು ಪತ್ತೆಯಾಗುತ್ತಿವೆಯೆಂದು ಹೇಳಲಾಗುತ್ತಿದೆ.
ವರದಿ : ನಂದಕುಮಾರ ಕರಂಜೆ, ಬೀದರ

