- Advertisement -
ರಾಮದುರ್ಗ – ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ೧.೧೦ ಕೋಟಿ ರೂಪಾಯಿ ನಗದನ್ನು ರಾಮದುರ್ಗ ಪೊಲೀಸರು ವಶಪಡಿಸಿಕೊಂಡಿದ್ದು ಈ ಸಂಬಂಧ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಬಲೆಗೆ ಕೆಡವಿದ್ದಾರೆ.
ಪ್ರಕರಣದ ಆರೋಪಿಯು ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮದ ತಲಾಟಿ ವಿಠ್ಠಲ ಢವಳೇಶ್ವರ ರಾಮದುರ್ಗ ಮಾರ್ಗವಾಗಿ ಬಾಗಲಕೋಟೆಗೆ ಈ ಹಣವನ್ನು ಕಾರಿನಲ್ಲಿ ಸಾಗಿಸುತ್ತಿರುವಾಗ ರಾಮದುರ್ಗ ತಾಲೂಕಿನ ಹಲಗತ್ತಿ ಚೆಕ್ ಪೋಸ್ಟ್ ಬಳಿ ಪೊಲೀಸರು ದಾಳಿ ನಡೆಸಿ ೧ ಕೋಟಿ ೧೦ ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ರಾಮದುರ್ಗ ಡಿವೈಎಸ್ ಪಿ ಎಂ. ಪಾಂಡುರಂಗ ಹಾಗೂ ತಂಡವು ಭಾಗವಹಿಸಿದ್ದು ಹಲಗತ್ತಿ ಚೆಕ್ ಪೋಸ್ಟ್ ಬಳಿ ಕಾರು ತಡೆದು ತಪಾಸಣೆ ನಡೆಸಿದಾಗ ಈ ದಾಖಲೆಯಿಲ್ಲದ ಹಣ ದೊರೆತಿದೆ. ಸದರಿ ಹಣ ಯಾರಿಗೆ ಸಂಬಂಧಿಸಿದ್ದು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ