ಸೇವಾ ಭದ್ರತೆ ಗಾಗಿ ತುಮಕೂರು ಸಿದ್ದಗಂಗಾ ಮಠದಿಂದ ಜನವರಿ ಒಂದರಿಂದ ಪಾದಯಾತ್ರೆ – ಡಾ.ಅಡಿವೆಪ್ಪ ಇಟಗಿ

Must Read

ಬೆಳಗಾವಿ :ರಾಜ್ಯದ 430 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ 12,000 ಅತಿಥಿ ಉಪನ್ಯಾಸಕರು ತಮ್ಮ ಸೇವೆ ಖಾಯಂಗೊಳಿಸಲು ಆಗ್ರಹಿಸಿ ಕಳೆದ 40 ದಿನಗಳಿಂದ ನಿರಂತರ ಹೋರಾಟ ಮಾಡುತ್ತಿದ್ದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ನಮ್ಮ ಹೋರಾಟ  ಸೇವಾ ಭದ್ರತೆಗೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಡಾ. ಅಡಿವೆಪ್ಪ ಇಟಗಿ ಹೇಳಿದರು.

ಕೇವಲ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿರುವ ಸರ್ಕಾರ 5000 ಗೌರವ ಧನ ಮಾತ್ರ ಹೆಚ್ಚಿಸಿದ್ದು ನಮ್ಮ ಬೇಡಿಕೆ ಗಳಿಗೆ ಸ್ಪಂದಿಸಿಲ್ಲ ಸೇವಾ ಖಾಯಮಾತಿ ಇಲ್ಲವೇ ಸೇವಾ ಭದ್ರತೆ ನಮ್ಮ ಪ್ರಮುಖ ಬೇಡಿಕೆ ಆಗಿದ್ದು ಸರ್ಕಾರ ಕೂಡಲೆ ಈಡೇರಿಸಬೇಕು ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ ರಾಜ್ಯಾಧ್ಯಕ್ಷರಾದ ಡಾ. ಹನುಮಂತ ಗೌಡ ಕಲ್ಮನಿಯವರ ಮಾರ್ಗದರ್ಶನದಂತೆ  2024 ರಿಂದ ತುಮಕೂರು ಸಿದ್ದಗಂಗಾ ಮಠದಿಂದ ಪಾದಯಾತ್ರೆ ಆರಂಭವಾಗುತ್ತದೆ ರಾಜ್ಯದ ಹನ್ನೆರಡು ಸಾವಿರ ಅತಿಥಿ ಉಪನ್ಯಾಸಕರು ಆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ಬೆಳಗಾವಿ ಜಿಲ್ಲೆಯಿಂದ 2,000 ಅತಿಥಿ ಉಪನ್ಯಾಸಕರು ಪಾಲ್ಗೊಳ್ಳುತ್ತಿದ್ದೇವೆ. ತುಮಕೂರು ದಿಂದ ಆರಂಭವಾದ ಪಾದಯಾತ್ರೆ ಬೆಂಗಳೂರಿನ ಫ್ರೀಡಂ ಪಾರ್ಕದವರಿಗೆ ಹೋಗಿ ನಮ್ಮ ಬೇಡಿಕೆ ಈಡೇರುವವರಿಗೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು. ಕಾರಣ ಸರ್ಕಾರ ನಮ್ಮ ಬೇಡಿಕೆ ಸ್ಪಂದಿಸಿ ನಮ್ಮ ಸೇವೆ ಕಾಯಂಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಸರಕಾರಕ್ಕೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಪ್ರೊ. ನೀಲಕಂಠ ಭೂಮಣ್ಣವರ, ಸಂಚಾಲಕರಾಗಿರುವ ಪ್ರೊ.ಇರ್ಫಾನ್ ಶಿಲ್ಲೆದಾರ ಪ್ರೊ.ಗಜಾನಂದ ಸಂಗೋಟಿ ಮುಂತಾದವರು ಉಪಸ್ಥಿತರಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group