ಶಾಂತ ಸ್ವರೂಪಿಗಳು ಮೃದು ಸ್ವಭಾವದವರು ಮಲ್ಲಾಡದ ಗುರುಗಳು – ವೈ.ಬಿ.ಕಡಕೋಳ

Must Read

ಸವದತ್ತಿ: ಕಂಬನಿಯಲ್ಲೂ ಸಂಭ್ರಮವಿರುತ್ತದೆ, ಅರಿಯಲು ವಿಶಾಲ ಮನೋಭಾವ ಇರಬೇಕು, ಸರಳತೆಯಲ್ಲಿ ಸಿರಿವಂತಿಕೆ ಇರುತ್ತದೆ ಗುರುತಿಸಲು ಹೃದಯವಂತಿಕೆ ಇರಬೇಕು.ಶಾಂತ ಸ್ವರೂಪಿಗಳು ಮೃದು ಸ್ವಭಾವದವರು ನಮ್ಮ ಮಲ್ಲಾಡ ಗುರುಗಳು”ಎಂದು ನಿವೃತ್ತಿ ಜೀವನದ ಬೀಳ್ಕೊಡುವ ಸಮಾರಂಭದಲ್ಲಿ ಮಲ್ಲಾಡ ಗುರುಗಳ ಕುರಿತು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಹೇಳಿದರು.

ಅವರು ಸವದತ್ತಿ ತಾಲೂಕಿನ ವಟ್ನಾಳ ಗ್ರಾಮದಲ್ಲಿ ನಿವೃತ್ತಿ ಹೊಂದಿದ ಮಲ್ಲಾಡ ಗುರುಗಳ ಬೀಳ್ಕೊಡುವ ಸಮಾರಂಭದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹೆಸರಿಗೆ ತಕ್ಕಂತೆ ಶಾಂತ ಸ್ವಭಾವ,ಕ್ರಿಯಾಶೀಲತೆ,ಹಾಗೂ ಚಟುವಟಿಕೆಯಿಂದ ಕೂಡಿದ್ದು ಸಹಬಾಳ್ವೆ, ಸಹಕಾರ, ಸದಾಚಾರ ಮೌಲ್ಯಗಳಿಂದ ಕೂಡಿದ ವ್ಯಕ್ತಿತ್ವ ಮಲ್ಲಾಡ ಗುರುಗಳದು ಎಂದು ಅವರ ವ್ಯಕ್ತಿತ್ವವನ್ನು ಕೊಂಡಾಡಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲ ಮುದ್ದಾಪುರ,ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎಫ್ ಜಿ ನವಲಗುಂದ,ಡಿ.ಎ,ಮೇಟಿ,
ಗುರುಮಾತೆ ಎಸ್,ಎನ್ ಗುಮಾಸ್ತೆ, ಮುಖ್ಯ ಶಿಕ್ಷಕರಾದ ಎನ್.ಜಿ.ತೊಪ್ಪಲದ, ಗುರುನಾಥ ತುರಾಯಿ,
ಎಸ್,ಎನ್,ತೋಟಿಗೇರ, ಜೆ,ಬಿ,ತಳವಾರ, ಎಸ್,ಎಂ.ಉಡಿಕೇರಿ, ಎಲ್,ಎಚ್,ಪಾಟೀಲ, ಬಿ,ಎಫ್,ನಾಯ್ಕರ, ಎ.ಟಿ.ಜವಳಿ,
ಎಚ್. ಜೆ. ದೇಸಾಯಿ, ವ್ಹಿ,ಎಂ.ಹಿರೇಮಠ, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.

ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಫೀಎ ಮುಲ್ಲಾ.ಸಲೀಂ ಮುಲ್ಲಾ,ಗ್ರಾಮ ಪಂಚಾತಿ ಸದಸ್ಯರಾದ ಡಿ,ಜೆ,ಹಂಚಪ್ಪನವರ, ಹೂವಪ್ಪ,ಮುನವಳ್ಳಿ,ರೇಖಾ ನಾಯ್ಕರ,ಗೊರವನಕೊಳ್ಳ ಗೆಳೆಯರ ಬಳಗದ ಸದಸ್ಯರು,ಅಂಗನವಾಡಿ ಕಾರ್ಯಕರ್ತರಾದ ಅರುಣಾ ಹೂಲಿಕಟ್ಟಿ,ಮಂಜುಳಾ ತಳವಾರ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗುರುಗಳ ಬಗ್ಗೆ ಮಾತನಾಡಿ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಾಡ ಗುರುಗಳು “ಹೃದಯಸ್ಪರ್ಶಿ ಈ ಸನ್ಮಾನ ಮರೆಯಲಾಗದು.ನನ್ನ ಮೇಲೆ ತಾವೆಲ್ಲ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು,ಗೊರವನಕೊಳ್ಳ ಮತ್ತು ವಟ್ನಾಳ ಗ್ರಾಮದ ಎಲ್ಲ ಗುರುಹಿರಿಯರ ಸಹಕಾರ ಮರೆಯಲಾಗದು ಈ ದಿನ ತಾವೆಲ್ಲ ತೋರಿಸಿದ ಪ್ರೀತಿ ವಿಶ್ವಾಸಕ್ಕೆ ನಾನು ಸದಾ ಚಿರಋಣಿ”ಎಂದು ಭಾವುಕತೆಯಿಂದ ಮಾತನಾಡಿದರು.
ಮುಖ್ಯ ಶಿಕ್ಷಕರಾದ ಜಿ.ಡಿ.ದೊಡಮನಿ ಸ್ವಾಗತಿಸಿದರು. ಎ.ಡಿ.ಧರೆಕರ ನಿರೂಪಿಸಿದರು.ಎ.ಟಿ.ಜವಳಿ ವಂದಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group