ಸಿಂದಗಿ: ಹಿಂದಿನ ಬಾಗಿಲಿನಿಂದ ಬಂದ ರಾಜ್ಯ ಸರಕಾರ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಸೈನಿಕರಿಗೆ ಸರಿಯಾದ ನಿರ್ವಹಣೆ ಮಾಡಲಿಕ್ಕಾಗದೆ ಫುಲ್ವಾಮಾ ದಾಳಿಯಲ್ಲಿ 40 ಜನ ಯೋಧರು ಹುತಾತ್ಮರಾದರು ಅದನ್ನು ಚುನಾವಣೆಯಲ್ಲಿ ಬಳಕೆ ಮಾಡಿಕೊಂಡು ಮತದಾರರ ಓಲೈಕೆ ಮಾಡುತ್ತಿದೆ. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರಕಾರ ಬೇಕಾಗಿದೆ ಅದರಿಂದ ಕಾಂಗ್ರೆಸ್ ಅಭ್ಯರ್ಥೀ ಅಶೋಕ ಮನಗೂಳಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ ಜಬ್ಬಾರ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಾವಧಿಯಲ್ಲಿ ನೀಡಿದ ಭರವಸೆಗಳನ್ನು ಪೂರೈಸಿ ನುಡಿದಂತೆ ನಡೆದುಕೊಂಡಿದೆ.
8 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಬರೀ ಭರವಸೆಗಳನ್ನು ನೀಡುತ್ತ ಹಿಂದೂಸ್ತಾನ ಪಾಕಿಸ್ತಾನ ಎನ್ನುತ್ತ ಜಾತಿ ಜಾತಿಯಲ್ಲಿ ವಿಷ ಬೀಜ ಬಿತ್ತಿ ಸಮಾಜದಲ್ಲಿ ಇಲ್ಲಸಲ್ಲದ ನಾಟಕಗಳನ್ನು ಮಾಡುತ್ತ ಸಮಾಜದಲ್ಲಿ ಒಡಕು ಹುಟ್ಟಿಸಿ ಹಣ ಚೆಲ್ಲಿ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳಲು ಹುನ್ನಾರ ನಡೆಸಿದೆ.
ಈ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಸರಕಾರ ದುಡ್ಡಿನ ಹೊಳೆ ಹರಿಸಿ ಸುಳ್ಳು ಭರವಸೆಗಳನ್ನು ನೀಡಿ ಗೆದ್ದಿದೆ ಆ ಪ್ರಮಾದ ಸದ್ಯ ನಡೆಯದು ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರರವರು ಸರಿಸಮನಾಗಿ ಕಾರ್ಯನಿರ್ವಹಿಸುತ್ತಿರುವುದರಿಂದಲೇ ಜನತೆ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಜನರು ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕು ಸಿದ್ದರಾಮಯ್ಯನವರ ಆಡಳೀತ ಬರಬೇಕಾಗಿದೆ ಎನ್ನುವ ತಿರ್ಮಾನ ಮಾಡಿದ್ದಾರೆ ಕಾರಣ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರನ್ನು ಹೆಚ್ಚಿನ ಮತದಾನ ಮಾಡಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿ ಎಂದು ಮನವಿ ಮಾಡಿಕೊಂಡರು.
ಈ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಮಹ್ಮದ ಶಿರಾಜ್, ಡಾ. ಮುತ್ತು ಮನಗೂಳಿ, ಕ್ಷೇತ್ರದ ವಿಕ್ಷಕಿ ಮಾಲನ ಬೆಗಂ, ರಾಜ್ಯ ಕಾರ್ಯದರ್ಶಿ ಮಹ್ಮದಪಟೇಲ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀರ ಯರಗಲ್, ತಾಲೂಕಾಧ್ಯಕ್ಷ ಇರ್ಫಾನ ತಲಕಾರಿ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಯಾಕೂಬ ನಾಟೀಕಾರ, ರಾಜು ಮದರಖಾನ ಸೇರಿದಂತೆ ಹಲವರು ಇದ್ದರು.