ಸತ್ತ ಹೆಣದ ಬೂದಿ !
ಸಿದಿಗೆಯ ಮೇಲೆ ಹೆಣ
ಹೆಣದ ಮೇಲೆ ಹಣ
ಹಣದ ಮೇಲೆ ನೊಣ
ಸುತ್ತಲೂ ಹತ್ತಾರು ಜನ
ಗೋಗರೆಯವರು ಯಾರೋ
ಒಳಗೊಳಗೆ ನಗುವವರು ಯಾರೋ ?
ಹೆಗಲು ಸೋತು
ಚಕ್ರವು ಹೆಣವನ್ನು ಸಾಗಿಸುತ್ತಿದೆ ,
ಹೂವಿನ ಹಾರ ಹೆಣದೊಳಗೆ
ಬದುಕಿದೆ ,
ಬದುಕಿ ಒಳಗೊಳಗೆ ನಗುತ್ತಿದೆ
ಸತ್ತಿರುವನು ಸತ್ವದ ಗೊಬ್ಬರವೇ !
ಇಲ್ಲವೇ ಕೊಳೆಯಲಾಗದೆ
ಇಳೆಗೆ ಹೊರೆಯೇ .
ಸೂರ್ಯನು ಮುಳುಗುವ ಹೊತ್ತು
ಹೆಣವ ಕುಣಿಗೆ ಇಳಿಸಿದಾಗ
ಮೆರೆದ ನಾಲಿಗೆ ಕುಣಿಯೊಳಗೆ ಇತ್ತು ,
ಜಾತಿ ಮತ ಧರ್ಮ ಭಾಷೆಯ ದರ್ಪವಿಲ್ಲ
ಹೆಣದ ಮೇಲೆ ಹಾಕಿದ ಮಣ್ಣು ಬೀಳದೆ
ಕೊನೆಗೆ ಸುಟ್ಟರು ಕೊನೆಯಿಲ್ಲದೆ .
ಸುಟ್ಟ ಬೂದಿಯೊಳಗೆ
ಬೆಲೆ ಬಾಳುವ ಹಣವಿದೆ
ಮೇಲ್ಜಾತಿಯಿದೆ ಕೆಳಜಾತಿಯಿದೆ ,
ಆಡಂಬರದ ಐಶ್ವರ್ಯವಿದೆ,
ಎಲ್ಲವೂ ಇದ್ದ ದೇಹ
ಬೂದಿಯಾಗಿದೆ .
ಬೂದಿಯನ್ನು ಕೊಳ್ಳುವರಿಲ್ಲ
ಕೊಂಡು ಜೀವಿಸುವರಿಲ್ಲ
ಹೆಣವಲ್ಲದ ದೇಹಕ್ಕೆ ಮಾತ್ರ ಕಿತ್ತಾಡುವರು
ಕಿತ್ತು ಖಂಡ ಖಂಡ ತಿನ್ನುವರು ,
ಹಸಿದ ಕರುಳಿಗೆ ಅನ್ನ ಹಾಕದವರು
ಉಸಿರಾಡದ ಬಾಯಿಗೆ ಅಕ್ಕಿ ತುರುಕುತ್ತಿರುವರು ,
ಸತ್ತ ಹೆಣದ ಬೂದಿ
ಹನಿ ಹನಿಯೊಳಗೆ ಹರಿಯುತ್ತಿದೆ ,
ಬೂದಿ ಹೊತ್ತ ನದಿ !
ಭೋವಿ ರಾಮಚಂದ್ರ
ಹರಪನಹಳ್ಳಿ
8861588118.