ಕವನ : ಅಕ್ಷರ ಕಿಚ್ಚಿನ ಹುಚ್ಚರು

Must Read

ಅಕ್ಷರ ಕಿಚ್ಚಿನ ಹುಚ್ಚರು

​ಬರಹಗಾರರೆಲ್ಲಾ
ಬಲು ಹುಚ್ಚರು!
ಯಾಕೆಂದರೆ…
ಹರಿಯುವ ನದಿ,
ಅಲೆವ ಕಡಲಿನ
ಆಳವ ಬರಿದು ಮಾಡಿ
ತಮ್ಮ ಭಾವದ ಮಳೆಯಲಿ
ಮತ್ತೆ ತುಂಬಿಸಿಬಿಡುತ್ತಾರೆ.

​ಭುವಿ, ಭಾನು, ಭಾಸ್ಕರನನ್ನೂ
ತಮ್ಮ ಕಲ್ಪನೆಯ ಬಂಜರು ಭೂಮಿಗೆ ತಂದು,
ಮತ್ತೆ ಅಕ್ಷರಗಳ ಒರತೆಯಲಿ
ಜೀವ ಚೇತರಿಕೆ ನೀಡುತ್ತಾರೆ.

​ಹೆಣ್ಣು, ಕಣ್ಣು, ಹಣ್ಣು, ಮಣ್ಣನ್ನೆಲ್ಲಾ
ಸವಿದು ಸಂಭ್ರಮಿಸಿ,
ಶಬ್ದಗಳಲಿ ಬರಿದು ಮಾಡಿ
ಮತ್ತೆ ಹೊಸ ಅಕ್ಷರಗಳಿಗಾಗಿ
ಹಗಲಿರುಳು ಅರಸುತ್ತಾರೆ.

​ಸಿಟ್ಟು, ಸೆಡವು, ಕೋಪ, ತಾಪಗಳ
ಮೌನದ ಕುಂಚದಲಿ ಅದ್ದಿ,
ಭಾವಗಳ ಬಣ್ಣ ಬಳಿದು
ಓದುಗರ ಮನದಂಗಳದಿ
ಅಚ್ಚಳಿಯದೆ ಉಳಿದು ಬಿಡುತ್ತಾರೆ.

​ಬಾಲ್ಯದ ನಗು, ಯೌವ್ವನದ ಸೊಬಗು
ಮುಪ್ಪಿನ ನೆಮ್ಮದಿಯನು ಅಕ್ಷರವಾಗಿಸಿ,
ದೇಹದ ಬೆವರಿಗೆ ಪದಗಳ
ಹೊಗೆ ವಾಸನೆ ಬೆರೆಸಿಬಿಡುತ್ತಾರೆ.

​ಬರಹಗಾರರೆಲ್ಲಾ
ದೊಡ್ಡ ಹುಚ್ಚರು!
ಬರಹದಲಿ ತಮ್ಮನ್ನು ತಾವು ಕಳೆದುಕೊಳ್ಳುತ್ತಾ
ಲೋಕದ ಮೈಮರೆವಿಗೆ
ಅಕ್ಷರದ ಕಿಚ್ಚು ಹಚ್ಚಿಬಿಡುತ್ತಾರೆ.
••••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಬರಹಗಾರ ಎಂದರೆ ಬರೀ ಪದಗಳನ್ನು ಜೋಡಿಸುವವನಲ್ಲ; ಪ್ರಕೃತಿಯ ಸೊಬಗನ್ನು ಅಕ್ಷರಗಳಲ್ಲಿ ಬರಿದು ಮಾಡಿ, ಮತ್ತೆ ತನ್ನ ಭಾವನೆಗಳ ಮೂಲಕ ಅದಕ್ಕೆ ಮರುಜೀವ ನೀಡುವವನೆ ಮಾಂತ್ರಿಕ. ಅಕ್ಷರಗಳ ಬೆನ್ನತ್ತಿ ಹೋಗುವ ಈ ‘ಹುಚ್ಚು’ ಮನಸ್ಸಿನ ಹಂಬಲವೇ ಬರಹ”
​”ಲೋಕದ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಂಡು, ಶಬ್ದಗಳಲಿ ಕಡೆದು, ಮನದಂಗಳದಲ್ಲಿ ಅಕ್ಷರದ ಕಿಚ್ಚು ಹಚ್ಚುವವನೆ ಬರಹಗಾರ.
​”ಶಬ್ದಗಳ ಹುಡುಕಾಟ, ಭಾವಗಳ ಬಣ್ಣಗಾರಿಕೆ ಮತ್ತು ಅಕ್ಷರಗಳ ಅಮಲು! ಬರಹಗಾರರ ಈ ವಿಶಿಷ್ಟ ಲೋಕದ ಬಗ್ಗೆ
ಹಾಗೆ ಸುಮ್ಮನೆ

LEAVE A REPLY

Please enter your comment!
Please enter your name here

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group