ಕವನ : ಬೇಂದ್ರೆ ಅಜ್ಜನ ನೆನಪು

Must Read

ಬೇಂದ್ರೆ ಅಜ್ಜನ ನೆನಪು

ಜನವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾsನ
ನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾ
ಬಡತನಕ ಹೇಸಿದಾವಲ್ಲ ಮೆಟ್ಟಿ ನಿಂತಾವ
ಬೆಂದು ಬೇಂದ್ರೆಯಾದಾಂವ

ರಾಮಚಂದ್ರ ಅಂಬೂತಾಯಿಯ ಮಗನಾಗಿ
ಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾಂವ
ಮಾತು ಆಡಿದರ ಹಸಿ ಗ್ವಾಡ್ಯಾಗ ಹಳ್ಳ ಒಗದಂಗ ಮಾತಾಡಾಂವ
ಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣ
ತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾಂವ

ತನ್ನ ಹಾಡಿನಾಗ
ಮಲ್ಲಿಗಿ ಹೂವಿನ
ಗಮಗಮ
ಕುರುಡು ಕಾಂಚಾಣದ ಜಣಜಣ
ಕರಡಿ ಕುಣಿತದ
ತಕತಕ
ಮೂಡಲ ಮನೆಯ
ಚುಮು ಚುಮು
ಕಾಣಿಸಿದಾಂವ

ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವ ಅಂತ ಹೇಳಿ
ಕನಸಿನೊಳಗೆ ಬಂದು ಕನಸು ಬಿತ್ತಿದಾಂವ
ನಮಗೆಲ್ಲಾ ಹುಸಿನಗುತ ಬಂದೀರಿ
ನಸುನಗುತ ತೆರಳಿ
ಅಂತಾ ನೀತಿ ಪಾಠ ಹೇಳಿದಾಂವ

ಕನ್ನಡದವರು ಮನಸು ಮಾಡಿದ್ರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿ
ನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವ
ಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾಂವ

ಗುಂಗುರು ಕೂದಲಿನ ಮುತ್ಯಾ
ಮಾತಿನ ಮಲ್ಲ ಶಬ್ದ ಗಾರುಡಿಗ
ನಮ್ಮ ನಾಡಿನ ಮಾಣಿಕ್ಯ
ನಮಗ
ಅರಳು ಮರಳು ಆದ್ರೂ
ನಿನ್ನ ನೆನಪು ಎಂದೂ ಸಾಯುವುದಿಲ್ಲ
ನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡ
ನಿನ್ನ ಜನುಮದಿನ ನಮಗೆಲ್ಲಾ ಹಬ್ಬ
ನಮಗೆಲ್ಲಾ ಹಬ್ಬ
ಆಶೀರ್ವಾದ ಮಾಡು ಮುತ್ಯಾ

ಶಿವಕುಮಾರ ಕೋಡಿಹಾಳ ಮೂಡಲಗಿ

LEAVE A REPLY

Please enter your comment!
Please enter your name here

Latest News

ಪ್ರಕೃತಿ ಮತ್ತು ಪ್ರೀತಿಯ ಅದ್ಭುತ ಸಂಗಮ: ಮೇಘದೂತದ ಮಹತ್ವ ವಿವರಿಸಿದ ಪ್ರೊ. ನಾರಾಯಣಘಟ್ಟ

    ಕಾಳಿದಾಸನ ಮೇಘದೂತ ಪ್ರಕೃತಿ ಹಾಗೂ ಶುದ್ಧ ಪ್ರೀತಿಯ ಅದ್ಭುತ ಕಾವ್ಯವಾಗಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರೊ. ನಾರಾಯಣಘಟ್ಟ ಹೇಳಿದರು. ...

More Articles Like This

error: Content is protected !!
Join WhatsApp Group