ಡಾ.ಶಶಿಕಾಂತ ಪಟ್ಟಣ ಕವನಗಳು

Must Read

ಬೇಡ ನಮಗೆ

ಬೇಡ ನಮಗೆ ಗುರು ವಿರಕ್ತರ ಗುದ್ದಾಟ
ಸಂಶೋಧಕರ ಹಗ್ಗ ಜಗ್ಗಾಟ
ಸ್ವಾಮಿಗಳ ಗದ್ದೆ ಕೆಸರಾಟ
ಜಾತಿವಾದಿಗಳ ಹುಚ್ಚಾಟ
ವಿಧಾನಸಭೆಗೆ ಮಂತ್ರ ಮಾಟ.
ಶಾಸಕರ ಕಾಮಕೇಳಿಯ ಆಟ
ಹೊರಗೆ ಚಳವಳಿ ಹೋರಾಟ
ಮತಗಳು ಆಗಲೆ ಮಾರಾಟ.
ಬೀದಿಯಲಿ ಬೋಧೆ ಪರಿಪಾಠ

ಸಾಕು ಅಕ್ಕ ಮಾತೆ ಶರಣರ ಸಂಗ
ವಚನಗಳಲಿ ತಿದ್ದುವರು ಮನಬಂದ ಲಿಂಗ
ನೋಡಿ ಕೈಮುಗಿಯುವ ನಾವುಗಳು ಮಂಗ
ಧರ್ಮವು ಬಡವರ ಅಫಿಮಿನ ಗುಂಗ.
ಮಕ್ಕಳಿಗಿಲ್ಲ ಹಾಕಲು ಹೊಸದೊಂದು ಲಂಗ
ಮಠಗಳಲಿ ನಡೆದಿದೆ ಮಹಿಳೆಯ ಮಾನಭಂಗ
ಹುಣ್ಣಿಮೆ ಅಮವಾಸೆ ಅಬ್ಬರದ ಗುರುಲಿಂಗ
ಕೊಳ್ಳೆ ಹೊಡೆಯಲು ಆಶ್ರಮದ ಘನಲಿಂಗ
ಬಸವನರಿತರೂ ಏಳದ ಬಂಡು ದಂಗ
——————————————
ಇತ್ಯರ್ಥವಾಗಿಲ್ಲ

ಮೊಟ್ಟೆ ಮೊದಲೋ ಕೋಳಿಯೋ?
ಇನ್ನೂ ಇತ್ಯರ್ಥವಾಗಿಲ್ಲ .
ಬೀಜವೊ ಮರ ಮೊದಲೋ ?
ಇತ್ಯರ್ಥವಾಗಿಲ್ಲ .
ಮಂಗನಿಂದ ಮಾನವನೋ ?
ಮಾನವನು ಮಂಗನೋ ?
ಇತ್ಯರ್ಥವಾಗಿಲ್ಲ
ಪಾಕ್ ಆಕ್ರಮಿತ ಕಾಶ್ಮೀರ
ನಮ್ಮದೋ ಅಲ್ಲವೋ ?
ಇತ್ಯರ್ಥವಾಗಿಲ್ಲ
ಮಹದಾಯಿ ಜೋಡಣೆ
ಕಳಸಾ ಭಂಡೂರಿ ನೀರು
ಇತ್ಯರ್ಥವಾಗಿಲ್ಲ
ಗಡಿ ತಂಟೆ ಭಾಷಾ ಪ್ರಶ್ನೆ
ಬೆಳಗಾವಿ ಯಾರದು ?
ಇತ್ಯರ್ಥವಾಗಿಲ್ಲ
ಕೃಷ್ಣಾ ಕಾವೇರಿ ತುಂಗಾ ಹಂಚಿಕೆ
ಮೇಕೆ ದಾಟು ಹೊಗೇನಕಲ್ಲು
ಇತ್ಯರ್ಥವಾಗಿಲ್ಲ
ಕೋರ್ಟ್ ನಲ್ಲಿ ಕೊಳೆಯುತ್ತಿವೆ
ನ್ಯಾಯದ ಅರ್ಜಿ ಅಹವಾಲುಗಳು .
ಇತ್ಯರ್ಥವಾಗಿಲ್ಲ
ನಮ್ಮವರು ಮತ ಹಾಕುತ್ತಾರೆ
ಟಿವಿ ನೋಡುತ್ತಾರೆ ಪತ್ರಿಕೆ ಇಣುಕುತ್ತಾರೆ.
ಗ್ರಾಮ ರಾಜ್ಯದ ಕನಸು
ರೈತ ಕೂಲಿ ಕಾರ್ಮಿಕರ ನನಸು
ಭಾರತವು ಮುಕ್ತವಾಗಿದೆಯಾ ?
ಇತ್ಯರ್ಥವಾಗಿಲ್ಲ .

ಡಾ.ಶಶಿಕಾಂತ.ಪಟ್ಟಣ.ಪೂನಾ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group