- Advertisement -
ಸಿಂದಗಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ತಾಲೂಕಿನ ನಬಿರೋಷನ್ ಪ್ರಕಾಶನ, ಬೋರಗಿ ವತಿಯಿಂದ ಆದರ್ಶ ಶಿಕ್ಷಕ ಸೇವಾ ಪುರಸ್ಕಾರ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಇದೆ ಸೆಪ್ಟೆಂಬರ್ ತಿಂಗಳಲ್ಲಿ ಸಿಂದಗಿ ಪಟ್ಟಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಶಿಕ್ಷಕರು ತಮ್ಮ ಸಾಧನೆಯ ವಿವರವನ್ನು ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಎರಡು ಸ್ವ ರಚಿತ ಕವಿತೆಗಳನ್ನು ಇದೇ ತಿಂಗಳು 10 ನೇ ತಾರೀಖು ಒಳಗಾಗಿ ಶಿಕ್ಷಕ ಬಸವರಾಜ ರಾ. ಅಗಸರ ಶಿಕ್ಷಕ ಸಾಹಿತಿ ಸಾ.ಚಿಕ್ಕಸಿಂದಗಿ. ತಾ.ಸಿಂದಗಿ ಅವರ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ- 9845741778- 9742849663 ಈ ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.