ಬೀದರ – ದೇಶದಲ್ಲಿ ಈವರೆಗೂ ಎಲ್ಲೆಲ್ಲಿ ದಂಗೆವಳಾಗಿವೆಯೋ ಅದಕ್ಕೆಲ್ಲ ಕಾಂಗ್ರೆಸ್ ಪಕ್ಷವೇ ಕಾರಣ. ಈಗ ಮತ್ತೊಮ್ಮೆ ಸ್ಟಾಲಿನ್ ಪುತ್ರನ ಮೂಲಕ ಹಿಂದೂ ವಿರೋಧಿ ಹೇಳಿಕೆ ನೀಡಿಸಿ ದೇಶದಲ್ಲಿ ಅಶಾಂತಿ ಮೂಡಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಬೀದರನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾ ಘಟಬಂಧನ ಅನ್ನೋದು ತಮ್ಮ ತಮ್ಮ ಪರಿವಾರಕ್ಕೆ ಸೀಮಿತವಾಗಿದೆ. ಮತ್ತೊಬ್ಬರ ಬೆನ್ನಿನಲ್ಲಿ ಚೂರಿ ಇರಿಯಲು ಈ ಘಟಬಂಧನ ಮಾಡಿಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್‌ನವರು ಅಲ್ಪಸಂಖ್ಯಾತ ಒಲೈಕೆಗಾಗಿ ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳಿಂದ ಅವರಿಗೆ ಯಾವುದೇ ರೀತಿಯ ಲಾಭ ಆಗುವುದಿಲ್ಲ. ಮಣಿಪುರ ಗಲಾಟೆಗೆ ಕಾಂಗ್ರೆಸ್ಸೇ ಕಾರಣ. ಕಾಂಗ್ರೆಸ್‌ನವರ ನೀತಿಯಿಂದಾಗಿಯೇ ದೇಶಗಳಲ್ಲಿ ದಂಗೆಗಳಾಗಿವೆ. ಸನಾತನ ಧರ್ಮ ನಿರ್ಮೂಲನೆ ಉದಯನಿಧಿ ಹೇಳಿಕೆಯು ಲೋಕಸಭಾ ಚುನಾವಣೆಯಲ್ಲಿ ಒಂದು ಕೋಮಿನವರನ್ನು ಓಲೈಸಲು ಹೇಳಲಾಗಿದೆ ಎಂದರು.
ಮಹಾ ಘಟಬಂಧನ್ ದೇಶದಲ್ಲಿ ಅಶಾಂತಿಯನ್ನುಂಟು ಮಾಡುತ್ತದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಅರಿವಿನ ಕೊರತೆ ಇದೆ ಎಂದ ಖೂಬಾ ರಾಷ್ಟ್ರ ಹಾಗೂ ರಾಜ್ಯದ ಮಟ್ಟದ ಘಟನೆಗಳ ಬಗ್ಗೆ ಅರಿವಿನ ಕೊರತೆ ಇದೆ, ರಾಜ್ಯದಲ್ಲಿ ಯಾವ ಪಕ್ಷವೂ 25 ಸೀಟು ಗೆದ್ದ ಉದಾಹರಣೆಯೆ ಇಲ್ಲ. ಆದರೆ ಬಿಜೆಪಿ 25 ಸಂಸದ ಸ್ಥಾನ ಗೆದ್ದು ಇತಿಹಾಸ ನಿರ್ಮಿಸಿದೆ. ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಶಾಂತಿ ಹುಟ್ಟು ಹಾಕಿದೆ. 9.5 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಕೇಂದ್ರ ಸಚಿವ ಭಗವಂತ ಖೂಬಾ.
ವರದಿ: ನಂದಕುಮಾರ ಕರಂಜೆ, ಬೀದರ