spot_img
spot_img

ಬಿಜೆಪಿ ಪಕ್ಷವನ್ನು ಯಾರು ಬಿಡುತ್ತಿಲ್ಲ- ಕೋಟ ಶ್ರೀನಿವಾಸ ಪೂಜಾರಿ

Must Read

- Advertisement -

ಸಿದ್ದು ಸರ್ಕಾರ ಕೇವಲ ಪತ್ರ ಬರೆಯುವ ಸರ್ಕಾರ

ಬೀದರ: ಭಾರತೀಯ ಜನತಾ ಪಕ್ಷವನ್ನು ಯಾರೂ ಬಿಡುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಖಂಡ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸರ್ಕಾರದ ಬಂದು ಮೂರು ತಿಂಗಳು ಗತಿಸಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವೊಬ್ಬ ಶಾಸಕರಿಗೆ ಅನುದಾನ ಕೊಡುತ್ತಿಲ್ಲ.

- Advertisement -

ಹೀಗಾಗಿ ಕಾಂಗ್ರೆಸ್ ಬಹುತೇಕ ಶಾಸಕರು ರೋಸಿ ಹೊಗಿದ್ದಾರೆ. ಹಲವಾರು ಶಾಸಕರು ಸಿಎಂ ಗೆ ಪತ್ರ ಬರೆದಿದ್ದಾರೆ ಅಭಿವೃದ್ಧಿ ವಿಚಾರದಲ್ಲಿ ಆದರೂ ಏನೂ ಪ್ರಯೋಜನವಿಲ್ಲ. ಹೀಗಾಗಿ ಕಾಂಗ್ರೆಸ್ ನವರು ಬಿಜೆಪಿ ಸೇರಲಿದ್ದಾರೆ ಎಂದು ಬಿ ಎಲ್ ಸಂತೋಷ ಹೇಳಿರಬಹುದು ಎಂದರು.

ಬಿಎಲ್ ಸಂತೋಷ ಹೇಳಿಕೆಗೆ ಪ್ರಿಯಾಂಕ ಖರ್ಗೆ ಸವಾಲ್ ವಿಚಾರ ಪ್ರಸ್ತಾಪಿಸಿದ ಪೂಜಾರಿ, ಪ್ರಿಯಾಂಕ ಖರ್ಗೆ ಬೇರೆಲ್ಲ ಉಸ್ತುವಾರಿ ಮಾಡುವುದು ಬಿಟ್ಟು ಅವರ ಇಲಾಖೆಯಲ್ಲಿ ಗಮನಹರಿಸಲಿ ಎಂದು ಟಾಂಗ್ ನೀಡಿದರು.

60 ಜನ ಪಿಡಿಓ ಗಳು ವೇಟಿಂಗ್ ಲಿಸ್ಟ್‌ನಲ್ಲಿದ್ದಾರೆ, ಅವರಿಗೆ ಸ್ಥಾನ ಗುರುತಿಸುವ ಕೆಲಸ ಮಾಡುತ್ತಿಲ್ಲ. 6% ವರ್ಗಾವಣೆ ಹೋಗಿ 15% ವರ್ಗಾವಣೆ ಹೋಗಿದೆ.

- Advertisement -

ಸಿಎಂ ಬಳಿ ವರ್ಗಾವಣೆ ಹೋಗಿರುವ ಕಡತಗಳು ಸೋರಿಕೆಯಾಗಿದೆ. ವರ್ಗಾವಣೆ ದಂಧೆ ಬಿಟ್ಟು ಇಲಾಖೆ ಕಡೆ ಗಮನ ಹರಿಸಲಿ ಎಂದರು.

ಲೀಡರ್‌ಲೆಸ್ ಪಾರ್ಟಿ ಬಿಜೆಪಿ ಎನ್ನುವ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೋಟ, ಜಗದೀಶ್ ಶೆಟ್ಟರ್ ಸಣ್ಣ ಮನಸ್ತಾಪದಿಂದ ಪಕ್ಷ ತೊರೆದಿದ್ದಾರೆ. ಆದ್ರೆ ಇನ್ನೂ ಶೆಟ್ಟರ್‌ ಅವರಿಗೆ ಬಿಜೆಪಿ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಬಿಜೆಪಿ ಬಲಿಷ್ಠವಾಗುವ ವಿಚಾರದಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು ಶೆಟ್ಟರ್ ಅವರ ಆಶಯ. ಸಂಘ ಪರಿವಾರದಿಂದ ಬಂದೋರು ಅವರು, ಭಾವನಾತ್ಮಕ ಸಂಬಂಧದಿಂದ ಹೀಗೆ ಹೇಳ್ತಿದ್ದಾರೆ.ಪಕ್ಷ ಸಂಘಟಿತವಾಗಿ ಇನ್ನಷ್ಟು ಬಲಿಷ್ಠಗೊಳ್ಳಲಿ ಅನ್ನೋದು ಅವರ ತುಡಿತ ಎಂದರು.

ಕಾವೇರಿ ವಿಚಾರ:

ತಮಿಳುನಾಡಿನ ಒತ್ತಡಕ್ಕೆ ಮಣಿದು ಕಾಂಗ್ರೆಸ್ ನವರು ನೀರು ಬಿಟ್ಟಿದ್ದಾರೆ. ಬರಗಾಲ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ.ಜನರು ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದೆ. ಬರಗಾಲ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿ ಕಾಲಹರಣ ಮಾಡುತ್ತಿದೆ. ಸಿದ್ದರಾಮಯ್ಯನವರ ಸರ್ಕಾರ ಕೇವಲ ಪತ್ರ ಬರೆಯುವ ಸರ್ಕಾರ ಎಂದು ಪೂಜಾರಿ ಲೇವಡಿ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group