ಫೆ19 ರಂದು ಕಡೋಲಿಯಲ್ಲಿ ಕವಿಗೋಷ್ಠಿ

Must Read

ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದ ಶ್ರೀ ದುರದುಂಡೀಶ್ವರ ಮಠದಲ್ಲಿ ಫೆ-19 ರಂದು ಮುಂಜಾನೆ ೧೦ ಗಂಟೆಗೆ ಅಖಿಲ ಕರ್ನಾಟಕ ಸರ್ವ ಕಲಾವಿದರ ಹಿತ ರಕ್ಷಣಾ ಸಂಘ(ರಿ) ಬೆಳಗಾವಿ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪಾಧಿಕಾರ ಬೆಂಗಳೂರು ಇವರ ಸಹಯೋಗದಲ್ಲಿ ಕವಿಗೋಷ್ಠಿ ಜರುಗಲಿದೆ.

ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಕವಿಗೋಷ್ಠಿ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ ಅಧ್ಯಕ್ಷತೆ ವಹಿಸುವರು. ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ‌ ಪರಿಷತ್ತಿನ ಅಧ್ಯಕ್ಷರಾದ ಎನ್. ಆರ್. ಠಕ್ಕಾಯಿ ಆಶಯ ನುಡಿಗಳನ್ನಾಡುವರು. ಧಾರವಾಡ ರಂಗಾಯಣದ ನಿರ್ದೇಶಕರಾದ ರಮೇಶ ಪರವಿನಾಯ್ಕರ ಘನ ಉಪಸ್ಥಿತಿ ವಹಿಸುವರು. ಹಿರಿಯ ಸಾಹಿತಿಗಳಾದ ಸ.ರಾ.ಸುಳಕೂಡೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ರಾಜ್ಯಮಟ್ಟದ ಸದಸ್ಯರಾದ ಮೋಹನ ಬಸನಗೌಡ ಪಾಟೀಲ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಹೇಮಾವತಿ ಸೋನೋಳಿ, ಸನ್ನದು ಲೆಕ್ಕ ಪರಿಶೋದಕರು ಹಾಗೂ ಹವ್ಯಾಸಿ ಬರಹಗಾರರಾದ ಮಡಿವಾಳಪ್ಪ ಸಂಗಪ್ಪ ತಿಗಡಿ,  ಮೂಡಲಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಂಜಯ ಶಿಂದಿಹಟ್ಟಿ, ಶಿಕ್ಷಣ ತಜ್ಞರಾದ ಅಡಿವೆಪ್ಪ ಕೋಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಹಾರ್ಮೋನಿಯಂ ವಾದಕರಾದ ಮಂಜುನಾಥ ಸುಣಗಾರ (ತೇರದಾಳ), ತಬಲಾ ವಾದಕರಾದ ಶೇಖರ ಇಮ್ಮಡಿ (ರಬಕವಿ), ಕುಮಾರಿ ಅನುರಾಧಾ ಜಗದೀಶ ಬಾಗನವರ, ಕುಮಾರಿ ಅಶ್ವಿನಿ ಜಗದೀಶ ಬಾಗನವರ ಇವರಿಂದ ವಚನ ಗಾಯನ ನಡೆಯಲಿದೆ. ಡಾ. ಪಕೀರನಾಯ್ಕ ಗಡ್ಡಿಗೌಡರ, ಮಂಜುಳಾ ಶೆಟ್ಟರ,  ಬಿ .ಬಿ. ಇಟ್ಟಣ್ಣವರ, ಶಿವಾನಂದ ತಲ್ಲೂರ, ಗಜಾನಂದ ಸೂರ್ಯವಂಶಿ, ಸುಖದೇವಾನಂದ ಚವತ್ರಿಮಠ, ಡಾ. ಸುನಿಲ ಪರೀಟ, ಶಿವಾನಂದ ಉಳ್ಳಿಗೇರಿ, ಡಾ. ಅಡಿವೆಪ್ಪ ಇಟಗಿ, ಕಿರಣ ಗಣಾಚಾರಿ, ಚನ್ನಬಸವಯ್ಯ ಕೋಳಿವಾಡ, ಭಾಗ್ಯಶ್ರೀ ರಜಪೂತ, ಚನ್ನಬಸಯ್ಯ ವಿ. ಪೂಜೇರ, ಬಸಪ್ಪ ಹೊ. ಶೀಗಿಹಳ್ಳಿ, ಈರಣ್ಣ ಗೋದಳ್ಳಿ, ಆನಂದ ಹಕ್ಕೆನ್ನವರ, ಎಂ. ಆರ್. ಪಾಟೀಲ, ಸಾವಿತ್ರಿ ಹೊತ್ತಿಗಿಮಠ, ಡಾ. ನಾಗೇಂದ್ರ ಚಲವಾದಿ, ಎಸ್ .ಎಂ. ಹಳಿಂಗಳಿ, ಸವಿತಾ ಪಾಟೀಲ, ಸುನೀತಾ ಪಾಟೀಲ ಸೊಲ್ಲಾಪುರೆ, ಸಣಗೌಡ ಸಂಗನಗೌಡರ, ಸುಪ್ರಿಯಾ ದೇಶಪಾಂಡೆ, ಡಾ. ಮಲ್ಲಿಕಾರ್ಜುನ ಛಬ್ಬಿ, ಮಲ್ಲಿಕಾರ್ಜುನ ಕೋಳಿ, ಸರಸ್ವತಿ ಬನ್ನಿಗಿಡದ, ಜಾನಕಿ ಭದ್ರಣ್ಣವರ, ಚನ್ನಬಸಯ್ಯ ಕಟಾಪೂರಿಮಠ, ಚಂದ್ರಶೇಖರ ಕೊಪ್ಪದ, ಎಂ.ಡಿ. ಬಾವಾಖಾನ, ಸಿದ್ದು ನೇಸರಗಿ,  ಶ್ರೀಶೈಲ ಹೆಬ್ಬಳ್ಳಿ, ಬಸವರಾಜ ಮಠಪತಿ, ಶಿವಾನಂದ ಬಾಗಾಯಿ, ನರೇಂದ್ರ ವಾಳವೇಕರ, ವಿಶ್ವನಾಥ ಕಮತೆ, ಶಿವಪುತ್ರ ಮುದಕವಿ, ಮಹಾಂತೇಶ ರಾಜಗೋಳಿ, ಮಲ್ಲಿಕಾರ್ಜುನ ಹಾರುಗೋಪ್ಪ, ಮಲ್ಲಿಕಾರ್ಜುನ ಕುರಿ, ಬಸವರಾಜ ಹೊನಗೌಡರ, ಹಮೀದಾಬೇಗಂ ದೇಸಾಯಿ, ಶಬಾನಾ ಅಣ್ಣಿಗೇರಿ, ಮೀನಾಕ್ಷಿ ಸೂಡಿ, ಉಮಾ ಅಂಗಡಿ,ಆಶಾ ಯಮಕನಮರಡಿ ಕವಿಗಳು ಕವನ ವಾಚನ ಮಾಡಲಿದ್ದಾರೆ. ಚಂದ್ರಶೇಖರ ಕೊಪ್ಪದ ಸ್ವಾಗತಿಸುವರು, ಕಿರಣ ಗಣಾಚಾರಿ ವಂದಿಸುವರು. ರಾಜು ಹಕ್ಕಿ ನಿರೂಪಿಸುವರು. ಶಿವಾನಂದ ತಲ್ಲೂರ ನಿರ್ವಹಣೆ ಮಾಡಲಿದ್ದಾರೆ.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group