ಸಿಂದಗಿ: ನಕಲಿ ಮದ್ಯ ತಯಾರಿಕಾ ಘಟಕದಲ್ಲಿ ೫೬೨ ಲೀಟರ್ ನಕಲಿ ಮದ್ಯ ಹಾಗೂ ೧೫೦ಕ್ಕೂ ಅಧಿಕ ಲೀಟರ್ ಮದ್ಯಸಾರ ಹಾಗೂ ಎಮ್.ಸಿ ಮ್ಯಾಕಡೋವೇಲ್ಸ್ ಮತ್ತು ಆಯ್.ಬಿ ಕಂಪನಿಗೆ ಸೇರಿದ ೩೦೦೦ ಬಾಟಲಗಳ ೬೫ ಬಾಕ್ಸಗಳು ನಕಲಿ ಮದ್ಯ ತಯಾರಿಕೆಗೆ ಬಳಕೆಯಾಗುತ್ತಿದ್ದ ಖಾಲಿ ಬಾಟಲಿಗಳು ಮತ್ತು ನಕಲಿ ಚೀಟಿಗಳು (ಲೇಬಲ್)ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಕಲಬುರಗಿ ರಸ್ತೆ ಸಮೀಪದಲ್ಲಿನ ಅಮೋಘಸಿದ್ದ ಬಸಪ್ಪ ಹೂಗಾರ ಎಂಬಾತನ ಜಮೀನಿನ ಶೆಡ್ ಒಂದರಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಮಾಹಿತಿಯನ್ನು ಖಚಿತಪಡಿಸಿಕೊಂಡು ಅಬಕಾರಿ ಜಿಲ್ಲಾಧಿಕಾರಿ ವೀರಣ್ಣ ಬಾಗೇವಾಡಿ ಮತ್ತು ಅಬಕಾರಿ ವೃತ್ತ ನೀರಿಕ್ಷಕ ಶಿವಾನಂದ ಹೂಗಾರ ಅವರ ತಂಡ ಏಕಾಏಕಿ ದಾಳಿ ನಡೆಸಿದ್ದಾರೆ.
ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಸುಮಾರು ರೂ ೮೪೨೦೦೦ ಮೌಲ್ಯದ ನಕಲಿ ಮದ್ಯ ದೊರೆತಿದ್ದು. ಅವರ ತೊಟದಲ್ಲಿಯೆ ನಿತ್ಯ ನಕಲಿ ಮದ್ಯವನ್ನು ತಯಾರಿಸಿ ಬೇರೆ ಬೇರೆ ಕಡೆ ಇವುಗಳನ್ನು ಮಾರಾಟ ಮಾಡಲು ಸಿದ್ದರಾಗಿದ್ದರು. ಇದರಲ್ಲಿ ೫ ಜನ ಆರೋಪಿಗಳು ಹುಬ್ಬಳಿ ಮೂಲದವರು ಒಬ್ಬ ಆರೋಪಿ ಸಿಂದಗಿಯವನು ಎಂದು ಅಬಕಾರಿ ಪೋಲಿಸ ಮೂಲಗಳು ತಿಳಿಸಿವೆ.
ಪಟ್ಟಣದ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು ೬ ಜನರನ್ನು ಬಂಧಿಸಿ ಮದ್ಯ ಮತ್ತು ಅದಕ್ಕೆ ಬಳಕೆ ಮಾಡುವ ವಸ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಯಾರ್ಚರಣೆಯಲ್ಲಿ ಜಿಲ್ಲೆಯ ಅಬಕಾರಿ ಸಿಬ್ಭಂದಿಗಳು ಸೇರಿದಂತೆ ಅನೇಕರು ಇದ್ದರು.
ನಕಲಿ ಮದ್ಯ ತಯಾರಿಕೆ ಘಟಕ ಜಾಲ ಸಿಂದಗಿ ನಗರದಲ್ಲಿ ನಡೆಯುತ್ತಿದೆ ಎಂಬ ಮಾಹಿತಿಯನ್ನು ತಿಳಿದ ನಮ್ಮ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ನಕಲಿ ಮದ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಬಳಸಲಾದ ಲೇಬಲ್‌ಗಳನ್ನು ಮಧ್ಯಪ್ರದೇಶ, ಇಂದೋರ, ರಾಜಸ್ತಾನಗಳಿಂದ ತರಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಇನ್ನಷ್ಟು ಮಾಹಿತಿಯನ್ನು ತನಿಖೆ ಮಾಡಿದಾಗ ಹೊರಬಿಳಲಿದೆ.
ವೀರಣ್ಣ ಬಾಗೇವಾಡಿ ವಿಜಯಪುರ ಅಬಕಾರಿ ಜಿಲ್ಲಾಧಿಕಾರಿಗಳು
ಅತ್ಯಂತ ಸೂಕ್ಣ್ಮ ರೀತಿಯಲ್ಲಿ ಸಿಂದಗಿ ನಗರದ ಹೊರವಲಯದ ತೋಟ ಒಂದರಲ್ಲಿ ನಕಲಿ ಮಧ್ಯ ಘಟಕದ ಮೂಲವನ್ನು ತಿಳಿದುಕೊಂಡು ಕಾರ್ಯಾಚರಣೆ ಮಾಡಿದ್ದೇವೆ.
ಶಿವಾನಂದ ಹೂಗಾರ. ಸಿಂದಗಿ ಅಬಕಾರಿ ವೃತ್ತ ನೀರಿಕ್ಷಕ